/newsfirstlive-kannada/media/media_files/2025/11/21/kh-muniyappa-2025-11-21-14-15-10.jpg)
ಚಿಕ್ಕಬಳ್ಳಾಪುರ: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ‘ಪವರ್ ಶೇರಿಂಗ್’ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಲ್ಲಿದೆ. ಇದೇ ವಿಚಾರ ಹಲವು ಗೊಂದಲಗಳಿಗೆ ಕಾರಣವಾಗಿದ್ದು, ಅದಕ್ಕಾಗಿ ಹೈಕಮಾಂಡ್ ಮಧ್ಯೆ ಪ್ರವೇಶ ಮಾಡುವಂತೆ ಆಹಾರ ಖಾತೆ ಸಚಿವ ಕೆ.ಹೆಚ್​. ಮುನಿಯಪ್ಪ ಆಗ್ರಹಿಸಿದ್ದಾರೆ.
ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಮಹತ್ವದ ಹೇಳಿಕೆ ನೀಡಿರುವ ಸಚಿವರು.. ನಾನು ಈಗಾಗಲೇ ಎಐಸಿಸಿ ಅಧ್ಯಕ್ಷರನ್ನ ಭೇಟಿಯಾಗಿ ಕೇಳಿದ್ದೀನಿ. ನೀವು ತಕ್ಷಣ ಏನಾದರೂ ಒಂದು ತೀರ್ಮಾನ ಮಾಡಿ. ಈ ಹಿಂದೆ ಏನಾದ್ರೂ ತೀರ್ಮಾನ ಆಗಿದ್ದರೆ ಆ ತೀರ್ಮಾನದಂತೆ ನಡೆದುಕೊಳ್ಳಿ. ಗೊಂದಲಕ್ಕೆ ಅವಕಾಶ ಕೊಡಬೇಡಿ. ಯಾವುದೇ ತೀರ್ಮಾನ ಆಗಿಲ್ಲ ಅಂದ್ರೆ ಇಲ್ಲಿಗೆ ಬಂದು ನಿಮ್ಮ ನಿರ್ಣಯದ ಬಗ್ಗೆ ಹೇಳಿ ಎಂದಿದ್ದೇನೆ ಎಂದು ಮುನಿಯಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ:ನಾನೇ ಸಿಎಂ ಆಗಿ ಮುಂದುವರಿಯುವೆ, ಮುಂದಿನ ಬಜೆಟ್ ಮಂಡಿಸುವೆ ಎಂದ ಸಿದ್ದರಾಮಯ್ಯ! ಸಿಎಂ ಕೂಲ್ ರಿಯಾಕ್ಷನ್
ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ಕೊಟ್ಟು ಯಶಸ್ವಿಯಾಗಿ ನಡೆಯುತ್ತಿದೆ. ಇದರ ಮಧ್ಯೆ ಗೊಂದಲ ಆಗೋದು ಬೇಡ. ಎರಡೂವರೆ ವರ್ಷ ಆದ್ಮೇಲೆ ಗೊಂದಲ ಶುರುವಾಗಿದೆ. ಎಐಸಿಸಿ ಅವರು ಏನು ತೀರ್ಮಾನ ಕೊಟ್ಟಿದ್ದಾರೆ ಅದರ ಪ್ರಕಾರ ನಡೆದುಕೊಳ್ಳಬೇಕು. ಆದಷ್ಟು ಬೇಗ ಗೊಂದಲವನ್ನ ನಿಲ್ಲಿಸಬೇಕು ಎಂದು ಹೈಕಮಾಂಡ್​ಗೆ ಮತ್ತೊಮ್ಮೆ ಒತ್ತಾಯ ಮಾಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us