/newsfirstlive-kannada/media/media_files/2025/10/21/kitturu-rani-chennamma-statue-2025-10-21-13-10-33.jpg)
ಪಾರ್ಲಿಮೆಂಟ್ ಆವರಣದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ
ಅಕ್ಟೋಬರ್ 23 ರಂದು ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಜನ್ಮದಿನ. ಇದೇ ಮೊದಲ ಭಾರಿಗೆ ವೀರರಾಣಿ ಕಿತ್ತೂರು ಚೆನ್ನಮ್ಮ ಜನ್ಮ ದಿನವನ್ನು ಕರ್ನಾಟಕದ ಗಡಿದಾಟಿ ದೂರದ ದೆಹಲಿಯ ಪಾರ್ಲಿಮೆಂಟ್ ನಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಸಂಸತ್‌ನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಾಗುತ್ತೆ. ಪಾರ್ಲಿಮೆಂಟ್ ಆವರಣದ ಪ್ರೇರಣಾ ಸ್ಥಳದಲ್ಲಿ ಈ ಹಿಂದೆಯೇ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಸ್ಥಾಪಿಸಲಾಗಿದೆ. ಈ ಪ್ರತಿಮೆಗೆ ಲೋಕಸಭಾ ಸ್ಪೀಕರ್ ಸೇರಿದಂತೆ ಕೇಂದ್ರ ಸಚಿವರು ಪುಷ್ಪಾರ್ಚನೆ ಮಾಡುವರು. ಪ್ರಧಾನಿ ಮೋದಿ ಕೂಡ ಆಗಮಿಸುವ ಸಾಧ್ಯತೆ ಇದೆ.
ಮೊದಲ ಭಾರಿಗೆ ಕೇಂದ್ರ ಸರ್ಕಾರವು ಕೂಡ ರಾಣಿ ಚೆನ್ನಮ್ಮ ಜನ್ಮದಿನ ಆಚರಿಸಲಿದೆ. ದೆಹಲಿಯ ಖೇಲ್ ಗಾಂವ್ ನಲ್ಲಿರುವ ಸಿರಿ ಪೋರ್ಟ್ ಅಡಿಟೋರಿಯಂನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜನ್ಮದಿನದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೇಂದ್ರದ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಮುಂದಿನ ವರ್ಷಗಳಲ್ಲಿ ದೆಹಲಿಯಲ್ಲಿ ಅದ್ದೂರಿಯಾಗಿ ರಾಣಿ ಚೆನ್ನಮ್ಮ ಜನ್ಮದಿನ ಆಚರಿಸಲಾಗುತ್ತೆ ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ದೆಹಲಿಯಲ್ಲಿ ಇಂದು ಹೇಳಿದ್ದಾರೆ.
ಹಿಂದಿನ ವರ್ಷಗಳಲ್ಲಿ ದೆಹಲಿಯಲ್ಲಿ ನಡೆದ ರಾಣಿ ಚೆನ್ನಮ್ಮ ಜನ್ಮದಿನ ಆಚರಣೆ ಪೋಟೋಗಳು.
ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯಿಂದ ಜಿಎಸ್‌ಟಿ ಪರಿಷ್ಕರಣೆ ಮಾಡಿದ್ದಾರೆ. ಜನರಿಗೆ ಹಬ್ಬದ ಖುಷಿ ಹೆಚ್ಚಿಸಿದ್ದಾರೆ. ಎಲ್ಲರಿಗೂ ಹಬ್ಬದ ಶುಭಾಶಯಗಳನ್ನು ವಿ.ಸೋಮಣ್ಣ ಕೋರಿದ್ದಾರೆ.
ಇನ್ನೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿ.ಸೋಮಣ್ಣ ಕಿಡಿಕಾರಿದ್ದಾರೆ. ಆರ್.ಎಸ್.ಎಸ್. ವಿರುದ್ಧ ಕ್ಷುಲಕ ಕಾರಣಗಳ ಮೂಲಕ ಒಡೆಯಲು ಯತ್ನಿಸುತ್ತಿದ್ದಾರೆ. ಆರ್.ಎಸ್.ಎಸ್. ಮುಂದೆಯೂ ಇರಲಿದೆ. ಈಗ ವಿರೋಧ ಮಾಡುವ ನಾಯಕರ ಮುಂದಿನ ಪೀಳಿಗೆ ಮುಂದೆ ಆರ್‌ಎಸ್ಎಸ್ ಸದಸ್ಯರಾಗಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ನೆನಪಿನಲ್ಲಿ ಉಳಿಯುವ ಕೆಲಸ ಮಾಡಬೇಕಾಗಿತ್ತು. ಆದರೇ, ಆರ್‌ಎಸ್ಎಸ್ ವಿರುದ್ಧ ಹುನ್ನಾರ ಮಾಡುತ್ತಿರುವುದು ವಿಪರ್ಯಾಸ. ಸಿಎಂ ಸಿದ್ದರಾಮಯ್ಯ ಇಷ್ಟೊಂದು ಸುಳ್ಳು ಹೇಳುತ್ತಾರೆ ಎಂದು ಗೊತ್ತಿರಲಿಲ್ಲ. ಯಾವುದೇ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ. ಸಿದ್ದರಾಮಯ್ಯ ಅಭಿವೃದ್ದಿ ಕಡೆಗೆ ಗಮನ ಹರಿಸಬೇಕಾಗಿದೆ. ಎಸ್‌ಡಿಆರ್‌ಎಫ್ ನಿಧಿಯಡಿ ಕೇಂದ್ರ ಸರ್ಕಾರ ಪ್ರವಾಹ ಪರಿಹಾರಕ್ಕಾಗಿ ಹಣ ನೀಡಿದೆ. ಅದನ್ನು ಹೇಗೆ, ಎಲ್ಲಿ ಬಳಕೆ ಮಾಡ್ತಾರೆ ಎಂದು ನೋಡಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.