ಡಿಸಿಸಿ ಬ್ಯಾಂಕ್ ಸಾಲದ ಬಗ್ಗೆ ಚರ್ಚೆಗೆ ಬರಲಿ : ಕುಣಿಗಲ್ ಶಾಸಕ ರಂಗನಾಥ್ ಗೆ ಕೆಎನ್‌ಆರ್ ಸವಾಲು!

ನಿನ್ನೆ ವಿಧಾನಸಭೆಯಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರಕ್ಕೆ ಡಿಸಿಸಿ ಬ್ಯಾಂಕ್ ನಿಂದ ರೈತರಿಗೆ ಸಾಲ ನೀಡುವುದರಲ್ಲಿ ತಾರತಮ್ಯ ಆಗಿದೆ ಎಂದು ಶಾಸಕ ಎಚ್‌.ಡಿ.ರಂಗನಾಥ್ ಹೇಳಿದ್ದರು. ಇದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಮಧುಗಿರಿ ಶಾಸಕ ಕೆ.ಎನ್‌.ರಾಜಣ್ಣ ಸವಾಲು ಹಾಕಿದ್ದಾರೆ.

author-image
Chandramohan
kunigal mal ranganath v_s KNR

ಡಾ.ರಂಗನಾಥ್ ವರ್ಸಸ್ ಕೆ.ಎನ್.ರಾಜಣ್ಣ

Advertisment
  • DCC ಬ್ಯಾಂಕ್ ಸಾಲ ನೀಡಿಕೆ ಬಗ್ಗೆ ಚರ್ಚೆಗೆ ಬರಲಿ ಎಂದು ರಂಗನಾಥ್‌ಗೆ ಕೆಎನ್‌ಆರ್ ಸವಾಲು
  • ಡಿಸಿಸಿ ಬ್ಯಾಂಕ್ ಸಾಲ ನೀಡಿಕೆಯಲ್ಲಿ ತಾರತಮ್ಯ ಆಗಿದೆ ಎಂದಿದ್ದ ಶಾಸಕ ರಂಗನಾಥ್
  • ರೈತರ ಸಂಖ್ಯೆಗೆ ಅನುಗುಣವಾಗಿ ಸಾಲ ಕೊಡುತ್ತೇವೆ ಎಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆಎನ್‌ಆರ್‌

ಕಾಂಗ್ರೆಸ್ ಪಕ್ಷದಲ್ಲೇ ಅಂತರಿಕ ಕಲಹ ಕೆಲವೊಮ್ಮೆ ಬೀದಿಗೆ ಬರುತ್ತೆ. ಇನ್ನೂ ಕೆಲವೊಮ್ಮೆ ಬೂದಿ ಮುಚ್ಚಿದ ಕೆಂಡದಂತೆ ಇರುತ್ತೆ. ನಿನ್ನೆ ವಿಧಾನಸಭೆಯಲ್ಲೇ ಕುಣಿಗಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಎಚ್‌.ಡಿ.ರಂಗನಾಥ್, ತುಮಕೂರು ಡಿಸಿಸಿ ಬ್ಯಾಂಕ್ ನಿಂದ ಕುಣಿಗಲ್ ತಾಲ್ಲೂಕಿಗೆ 1 ಕೋಟಿ ರೂಪಾಯಿಯನ್ನು ರೈತರಿಗೆ ಸಾಲವಾಗಿ ನೀಡಿಲ್ಲ. ಆದರೇ, ಮಧುಗಿರಿ ತಾಲ್ಲೂಕಿಗೆ 100 ಕೋಟಿ ರೂಪಾಯಿ ಹಣವನ್ನು ರೈತರಿಗೆ ಸಾಲವಾಗಿ ನೀಡಲಾಗಿದೆ. ತುಮಕೂರು ಡಿಸಿಸಿ ಬ್ಯಾಂಕ್ ನಿಂದ ರೈತರಿಗೆ ಸಾಲ ನೀಡಿಕೆಯಲ್ಲಿ ತಾರತಮ್ಯ ಆಗುತ್ತಿದೆ. ಇದನ್ನು ಸರಿಪಡಿಸಬೇಕು. ನಮ್ಮ ನೆರವಿಗೆ ಬರಬೇಕೆಂದು ಸದ್ಯ ಸಹಕಾರ ಖಾತೆಯನ್ನು ಹೊಂದಿರುವ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದರು. 
ಇದಕ್ಕೆ ಸದನದಲ್ಲೇ ಉತ್ತರ ನೀಡಿದ್ದ ಸಿಎಂ ಸಿದ್ದರಾಮಯ್ಯ, ಸಾಲ ನೀಡಿಕೆಯಲ್ಲಿ ತಾರತಮ್ಯ ಆಗಿದ್ದರೇ, ಸರಿಪಡಿಸುತ್ತೇನೆ, ನನ್ನ ಮೇಲೆ ವಿಶ್ವಾಸ ಇಡಿ ಎಂದು ಶಾಸಕ ರಂಗನಾಥ್ ಗೆ ಹೇಳಿದ್ದರು. 
ಇದಕ್ಕೆ ಈಗ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್‌.ರಾಜಣ್ಣ ಸದನದ ಹೊರಗೆ ಪ್ರತ್ಯುತ್ತರ ನೀಡಿದ್ದಾರೆ.  ಸ್ಟುಡಿಯೋ(ಮಾಧ್ಯಮದ)ಮುಂದೆ ಚರ್ಚೆಗೆ ಬರಲಿ ಎಂದು ಶಾಸಕ ರಂಗನಾಥ್ ಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ  ಸವಾಲು ಹಾಕಿದ್ದಾರೆ. 
ಕುಣಿಗಲ್ ಶಾಸಕ ರಂಗನಾಥ್  ಅವರು ಕ್ಷೇತ್ರಕ್ಕೆ ಸಾಲ ಕೊಟ್ಟಿಲ್ಲ ಎಂಬ  ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆಎನ್‌ಆರ್‌,  ಅನುದಾನ ನಾನು ಕೊಡೊದು? ಅವರು ಕ್ಷೇತ್ರಕ್ಕೆ ಏನ್ ಬೇಕೊ ಅದನ್ನ ಸರ್ಕಾರದಿಂದ ಪಡೆಯಬೇಕು.  ಸಾವಿರ ಕೋಟಿ ನಾನು ತಡೆ ಹಿಡಿದಿಲ್ಲ .  ಸಿಎಂ, ಡಿಸಿಎಂ ಅವರ ದಯೆ ಪ್ರೀತಿಯಿಂದ  ನನ್ನ ಕ್ಷೇತ್ರಕ್ಕೆ ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ .  ಸಹಕಾರ ಇಲಾಖೆ ಸಿಎಂ ಹತ್ತಿರ ಇದೆ.  ಅನುದಾನ ಅಲ್ಲಿ ಪಡೆಯಬೇಕು .  132 ಕೋಟಿ ಎಫ್ ಡಿ ಆಗಿತ್ತು, ಅದು ಮಂಜೂರಾತಿ ಆಗಬೇಕಿತ್ತು . ಅವರು ಎರಡನೇ ಸಲ ಶಾಸಕರಾಗಿದ್ದಾರೆ.  ಅನುದಾನ ಎಷ್ಟು ಕೇಳಿದ್ದಾರೆ?  ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಇದ್ದೇನೆ.  ರೈತರ ಸಂಖ್ಯೆಗೆ ಅನುಗುಣವಾಗಿ ಸಾಲ ಕೊಡುತ್ತೇವೆ.   ಡಿಸಿಸಿ  ಬ್ಯಾಂಕ್ ನಲ್ಲಿ ಕೊಡುವ ಸಾಲ‌ ಸರ್ಕಾರದ್ದಲ್ಲ .  ನಬಾರ್ಡ್ ನಿಂದ ಪಡೆದು ಕೊಡುವ ಸಾಲ.  ರೈತರ ಡೆಪಾಸಿಟ್ ನಿಂದ ಕೊಡುವ ಸಾಲ .

ನಬಾರ್ಡ್ ನಿಂದ  2,300 ಕೋಟಿ ಬರುತ್ತಿದೆ . ಅವರೇ 1000 ಕೋಟಿ ರೂಪಾಯಿ ತಗೊಂಡಿದ್ದಾರೆ. ಬೇರೆ ಕ್ಷೇತ್ರಕ್ಕೆ ಎಷ್ಟು ಕೊಟ್ಟಿದ್ದಾರೆ, ತಾರತಮ್ಯ ಅಲ್ವಾ?  ಮುಂದೆ ಡಿಸಿಎಂ, ಸಿಎಂ ಆಗ್ತಾರೆ ಅಂತಾರೆ . ಆದ ಮೇಲೆ  ನೋಡಿಕೊಳ್ತಿವಿ ಅಂತಾರೆ.  ಹೈಕಮಾಂಡ್ ಆದಷ್ಟು ಬೇಗ ಗೊಂದಲ ನಿವಾರಣೆ ಮಾಡಬೇಕು . ಇಲ್ಲವಾದಲ್ಲಿ ಆಡಳಿತ ಯಂತ್ರದ ಮೇಲೆ ದುಷ್ಪರಿಣಾಮ ಬೀರುತ್ತೆ .  ನಾನು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದೇನೆ . ಭೇಟಿಗೆ ಅವಕಾಶ ಸಿಕ್ಕಿದ್ರೆ ಹೋಗುತ್ತೇನೆ. 

ಡಿ.ಕೆ. ಶಿವಕುಮಾರ್ ಜೊತೆ ಮತ್ತೆ 3 ಡಿಸಿಎಂ ಸ್ಥಾನ..? ಕಾಂಗ್ರೆಸ್​ನಲ್ಲಿ ಹೊಸ ಸಂಚಲನ..!

ಡಿಸಿಸಿ‌ ಬ್ಯಾಂಕ್ ಕೆಲವರ ಕಪಿಮುಷ್ಟಿಯಲ್ಲಿದೆ ಎಂಬ ವಿಚಾರ ಪ್ರಸ್ತಾಪಿಸಿರುವುದಕ್ಕೆ ಪ್ರತಿಕ್ರಿಯಿಸಿದ ಕೆಎನ್‌. ರಾಜಣ್ಣ,  ರಾಜಕೀಯ ದ್ವೇಷಕ್ಕಾಗಿ ಮಾತನಾಡಿದರೇ,   ಉತ್ತರ ಕೊಡುವುದಿಲ್ಲ.  ಟಾರ್ಗೆಟ್ ನಿನ್ನೆ ಮೊನ್ನೆದು ಅಲ್ಲ, ನಿರಂತರವಾಗಿ ನಡೆದುಕೊಂಡು ಬರುತ್ತಿದೆ.   ಅಸೂಯೆಗೆ ಹೇಳುವವರಿಗೆ ಉತ್ತರ ಹೇಳುವುದಿಲ್ಲ.  ಮಾಹಿತಿ ಸರಿಯಾಗಿ ತಿಳಿದುಕೊಂಡು ಮಾತಾಡಲಿ .

 ರಂಗನಾಥ್ ಅವರು ಚರ್ಚೆಗೆ ಬರಲಿ ಎಂದು ಕೆಎನ್. ರಾಜಣ್ಣ ಆಹ್ವಾನಿಸಿದ್ದಾರೆ.  ನಾನು ಸಿಎಂ ಕಡೆ ಅಲ್ಲ,  ನ್ಯಾಯದ ಕಡೆ ಇರುತ್ತೇನೆ . ಸಿಎಂ ಅನ್ನಭಾಗ್ಯ ಕಾರ್ಯಕ್ರಮ ಕೊಟ್ಡಿದ್ದಾರೆ.  ಒಬ್ಬರು ಹಸಿವಿನಿಂದ‌ ಇಲ್ಲ.  ಸಿಎಂ ಅವರು ಮನೆಯಿಂದ ತಂದು ಕೊಟ್ಟಿದ್ದಾ ಅಂತಾರೆ,  ಹಿಂದೆ ಇದ್ದ ಸಿಎಂಗಳು ಅವರು ಹಾಗೆ ಮಾಡಿದ್ರಾ..? ಸಿಎಂ ಬಡವರ ಪರ ಇದ್ದಾರೆ ಎಂದು ನಾನು ಅವರ ಜೊತೆ ಇರುತ್ತೇನೆ ಎಂದು ತುಮಕೂರು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಮಧುಗಿರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಕೆ.ಎನ್.ರಾಜಣ್ಣ ನೇರವಾಗಿ ಕುಣಿಗಲ್ ಶಾಸಕ ರಂಗನಾಥ್ ಗೆ ತಿರುಗೇಟು ನೀಡಿದ್ದಾರೆ. 

tumakuru dcc bank chairmen election02





ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MLA Dr.H.D.Ranganatha v/s KN Rajanna
Advertisment