ಬಿಜೆಪಿಯವ್ರು ಎಲ್ಲ ಟೀಕೆ ಮಾಡ್ತಾರೆ, ಪಾಕಿಸ್ತಾನಕ್ಕೆ ಕೇಕ್ ತಿನ್ನಲು ಯಾಕೆ ಹೋಗಿದ್ರಿ?; ಸಂತೋಷ್ ಲಾಡ್

ಧರ್ಮಸ್ಥಳ ಪ್ರಕರಣದಲ್ಲಿ ಎಸ್​ಐಟಿ ರಚನೆ ಮಾಡಿದ್ದಾಗ ಬಿಜೆಪಿಯವರು ಸ್ವಾಗತ ಮಾಡಿದರು. ಸರ್ಕಾರ ಕಾನೂನು ಪ್ರಕಾರ ಎಸ್​ಐಟಿ ಮಾಡಿದೆ. ಅಲ್ಲಿ ತನಿಖೆ ಮಾಡುತ್ತಿದ್ದಾಗ ಯಾವಾಗ ಬುರುಡೆಗಳು ಸಿಗಲಿಲ್ಲವೋ ಅವಾಗ ಕಾಂಗ್ರೆಸ್​ ಮೇಲೆ ಗೂಬೆ ಕೂರಿಸಲು ಹೋದರು.

author-image
Bhimappa
Advertisment

2025ರ ದಸರಾ ಮಹೋತ್ಸವವನ್ನು ಲೇಖಕಿ ಬಾನು ಮುಷ್ತಾಕ್ ಅವರು ಈ ಬಾರಿ ಉದ್ಘಾಟನೆ ಮಾಡಲಿದ್ದಾರೆ. ಸದ್ಯ ಈ ಸಂಬಂಧ ಕೆಲವರು ವಿರೋಧ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಸಚಿವ ಸಂತೋಷ್​ ಲಾಡ್ ಅವರು ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯವರು ಎಲ್ಲವನ್ನು ಟೀಕೆ ಮಾಡುತ್ತಾರೆ. ಅವರು ಪಾಕಿಸ್ತಾನಕ್ಕೆ ಯಾಕೆ ಕೇಕ್ ತಿನ್ನಲು ಹೋಗಿದ್ರಾ?. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಆಗಿದ್ದಾಗ ಯಾರಾದರೂ ವಿರೋಧಿಸಿದ್ರಾ? ಎಂದು ಪ್ರಶ್ನಿಸಿದ್ದಾರೆ. 

ಧರ್ಮಸ್ಥಳ ಪ್ರಕರಣದಲ್ಲಿ ಎಸ್​ಐಟಿ ರಚನೆ ಮಾಡಿದ್ದಾಗ ಬಿಜೆಪಿಯವರು ಸ್ವಾಗತ ಮಾಡಿದರು. ಸರ್ಕಾರ ಕಾನೂನು ಪ್ರಕಾರ ಎಸ್​ಐಟಿ ಮಾಡಿದೆ. ಅಲ್ಲಿ ತನಿಖೆ ಮಾಡುತ್ತಿದ್ದಾಗ ಯಾವಾಗ ಬುರುಡೆಗಳು ಸಿಗಲಿಲ್ಲವೋ ಅವಾಗ ಕಾಂಗ್ರೆಸ್​ ಮೇಲೆ ಗೂಬೆ ಕೂರಿಸಲು ಹೋದರು. ಒಂದು ವೇಳೆ ಬಾಡಿಗಳು ಸಿಕ್ಕಿದ್ರೆ ಬಿಜೆಪಿಯವರು ಏನ್ ಮಾಡುತ್ತಿದ್ದರು?. ಹಾಗಾದ್ರೆ ಎಸ್​ಐಟಿ ಅನ್ನು ಮೊದಲೇ ವಿರೋಧಿಸಬೇಕಿತ್ತು ಎಂದು ಸಂತೋಷ್​ ಲಾಡ್ ಕಿಡಿ ಕಾಡಿದ್ದಾರೆ.    

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala BJP Dharmasthala case Santosh Lad
Advertisment