ಪುಣೆಯಲ್ಲಿ 1,800 ಕೋಟಿ ರೂ ಮೌಲ್ಯದ ಭೂಮಿ 300 ಕೋಟಿ ರೂ.ಗೆ ಮಾರಾಟ! 21 ಕೋಟಿ ರೂ. ಬದಲು 500 ರೂ ಸ್ಟಾಂಪ್ ಡ್ಯೂಟಿ ಪಾವತಿ!

ಪುಣೆಯಲ್ಲಿ ಭೂಮಿ ಖರೀದಿ ಮತ್ತು ಸ್ಟಾಂಪ್ ಡ್ಯೂಟಿ ಪಾವತಿಯಲ್ಲಿ ಹಗರಣವೇ ನಡೆದಿದೆ. 1,800 ಕೋಟಿ ರೂ. ಬೆಲೆಬಾಳುವ ಭೂಮಿಯನ್ನು 300 ಕೋಟಿ ರೂ.ಗೆ ಖರೀದಿಸಲಾಗಿದೆ. ಇನ್ನೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 25 ಕೋಟಿ ರೂ. ಸ್ಟಾಂಪ್ ಡ್ಯೂಟಿ ಬದಲು 500 ರೂ. ಸ್ಟಾಂಪ್ ಡ್ಯೂಟಿ ಪಾವತಿಸಲಾಗಿದೆ.

author-image
Chandramohan
PARTHA PAWAR LAND SCAM

ಪಾರ್ಥ ಪವಾರ್ ವಿರುದ್ಧ ಭೂ ಹಗರಣ ನಡೆಸಿದ ಆರೋಪ

Advertisment
  • ಪಾರ್ಥ ಪವಾರ್ ವಿರುದ್ಧ ಭೂ ಹಗರಣ ನಡೆಸಿದ ಆರೋಪ
  • ಪುಣೆಯ ಬಳಿ 40 ಎಕರೆ ಭೂಮಿಯನ್ನು 300 ಕೋಟಿ ರೂ.ಗೆ ಖರೀದಿ!
  • ಭೂಮಿಯ ಮಾರುಕಟ್ಟೆ ಮೌಲ್ಯ ಬರೋಬ್ಬರಿ 1,800 ಕೋಟಿ ರೂ.

ಮಹಾರಾಷ್ಟ್ರದ ಪುಣೆಯ ಬಳಿ ಬರೋಬ್ಬರಿ 1,800 ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಕೇವಲ 300 ಕೋಟಿ ರೂಪಾಯಿ ಖರೀದಿಸಲಾಗಿದೆ . ಹೀಗೆ  ಸಸ್ತಾ ಬೆಲೆಗೆ ಖರೀದಿಸಿದವರು ಬೇರಾರು ಅಲ್ಲ, ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಅವರ ಮಗ ಪಾರ್ಥ ಪವಾರ್ ಹಾಗೂ ಅವರ ಒಡೆತನದ ಕಂಪನಿ. ಇನ್ನೂ ಶಾಕಿಂಗ್ ಅಂದರೇ, ಇಷ್ಟೊಂದು ದೊಡ್ಡ ಮೊತ್ತದ ಆಸ್ತಿ ಖರೀದಿಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 500 ರೂಪಾಯಿ ಮಾತ್ರ ಸ್ಟಾಂಪ್ ಡ್ಯೂಟಿ ಪಾವತಿಸಲಾಗಿದೆ! .
ಈ ಖರೀದಿ ಹಾಗೂ 500 ಸ್ಟಾಂಪ್ ಡ್ಯೂಟಿ ವಿಷಯ ಬೆಳಕಿಗೆ ಬರುತ್ತಿದ್ದಂತೆ, ಮಹಾರಾಷ್ಟ್ರದಲ್ಲಿ ದೊಡ್ಡ ಕೋಲಾಹಲವೇ ಎದ್ದಿದೆ.  ವಿರೋಧ ಪಕ್ಷಗಳ ಇದರ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿವೆ.   ಕೊನೆಗೆ ಮಹಾರಾಷ್ಟ್ರ ರಾಜ್ಯ ಸರ್ಕಾರ, ಈ ಭೂಮಿ ಮಾರಾಟ ಹಾಗೂ ಸ್ಟಾಂಪ್ ಡ್ಯೂಟಿ ಪಾವತಿಯ ವಿವಾದದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.  

ಪುಣೆಯ ಮುಂಧ್ವಾ ಪ್ರದೇಶದಲ್ಲಿ ಸರ್ಕಾರಿ ಸಂಬಂಧಿತ ಭೂಮಿಯ ಮಾರಾಟ ಹಾಗೂ ನೋಂದಾಣಿಯಲ್ಲಿನ ಪ್ರಮುಖ ಲೋಪಗಳ ಬಗ್ಗೆ ನೋಂದಾಣಿ ಮಹಾ ನಿರ್ದೇಶಕರು( ಐ.ಜಿ.ಆರ್‌) ಮಹಾರಾಷ್ಟ್ರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದಾರೆ.  ಇದಾದ ಬಳಿಕ ಒಬ್ಬ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಎಂಟು ದಿನಗಳಲ್ಲಿ ಅಂತಿಮ ವರದಿ ಸಲ್ಲಿಸಲು ವಿಶೇಷ ಸಮಿತಿಗೆ ರಾಜ್ಯ ಸರ್ಕಾರ ಸೂಚಿಸಿದೆ. 
ಇನ್ನೂ ಪುಣೆಯ ಬಳಿಯ ಈ 40 ಎಕರೆ ಭೂಮಿಯನ್ನು ದಲಿತರಿಗೆ ವ್ಯವಸಾಯಕ್ಕಾಗಿ ಮಂಜೂರು ಮಾಡಲಾಗಿತ್ತು. ಈ ಭೂಮಿಯನ್ನು ಯಾರೂ ಕೂಡ ಮಾರಾಟ ಮಾಡಬಾರದು ಅಥವಾ ಖರೀದಿಸಬಾರದು ಎಂದು ಸರ್ಕಾರ ಷರತ್ತು ವಿಧಿಸಿತ್ತು. ಆದರೇ, ಪಾರ್ಥ ಪವಾರ್ ಮಾಲೀಕತ್ವದ ಕಂಪನಿಯು ಭೂಮಿಯನ್ನು ಖರೀದಿಸಿದೆ. ಈ ಭೂಮಿಯಲ್ಲಿ ಐ.ಟಿ.ಪಾರ್ಕ್ ನಿರ್ಮಿಸುವ ಉದ್ದೇಶವನ್ನು ಕಂಪನಿ ಹೊಂದಿದೆ.  

೧,೮೦೦ ಕೋಟಿ ರೂಪಾಯಿ ಮೌಲ್ಯದ ಆಸ್ತಿ ೩೦೦ ಕೋಟಿ ರೂಪಾಯಿಗೆ ಮಾರಾಟವಾಗಿದೆ! ಇದೇ ದೊಡ್ಡ ಅಚ್ಚರಿಗೆ ಕಾರಣವಾಗಿದೆ. ವರದಿಯ ಪ್ರಕಾರ, ‘ಮುಂಬೈ ಸರ್ಕಾರ’ದ ಅಡಿಯಲ್ಲಿ ನಿವಾಸಿ ಎಂದು ದಾಖಲಾಗಿರುವ ಮುಂಧ್ವಾದಲ್ಲಿನ ೪೩ ಎಕರೆ (೧೭.೫-ಹೆಕ್ಟೇರ್) ಜಮೀನನ್ನು ಪಾರ್ಥ್ ಪವಾರ್ ಅವರೊಂದಿಗೆ ಸಂಪರ್ಕ ಹೊಂದಿರುವ ಅಮೀಡಿಯಾ ಎಂಟರ್‌ಪ್ರೈಸಸ್ ಎಲ್‌ಎಲ್‌ಪಿಗೆ ಕೇವಲ ೩೦೦ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. ಭೂಮಿಯ ಮಾರುಕಟ್ಟೆ ಮೌಲ್ಯ ೧,೮೦೦ ಕೋಟಿ ರೂಪಾಯಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ.

PARTHA PAWAR LAND SCAM02



ಈ ಭೂಮಿಯನ್ನು ಮೂಲತಃ ಭಾರತೀಯ ಸಸ್ಯಶಾಸ್ತ್ರ ಸಮೀಕ್ಷೆಗೆ 15 ವರ್ಷಗಳ ಕಾಲ ಗುತ್ತಿಗೆ ನೀಡಲಾಗಿತ್ತು, ವರ್ಷಕ್ಕೆ 1 ರೂ. ನಾಮಮಾತ್ರ ಬಾಡಿಗೆಗೆ 50 ವರ್ಷಗಳವರೆಗೆ 2038 ರವರೆಗೆ ವಿಸ್ತರಿಸಲಾಯಿತು, ಇದು ನಿರಂತರ ಸರ್ಕಾರಿ ಮಾಲೀಕತ್ವವನ್ನು  ಸೂಚಿಸುತ್ತದೆ.
ಇದರ ಹೊರತಾಗಿಯೂ, 272 ವ್ಯಕ್ತಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಪವರ್ ಆಫ್ ಅಟಾರ್ನಿ ಹೊಂದಿರುವ ಶೀತಲ್ ತೇಜ್ವಾನಿ ಮತ್ತು ಸೈಟ್‌ನಲ್ಲಿ ಡೇಟಾ ಸೆಂಟರ್ ಅನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಅಮೀಡಿಯಾ ಎಂಟರ್‌ಪ್ರೈಸಸ್ LLP ನಡುವೆ ನೇರವಾಗಿ ಮಾರಾಟ ಪತ್ರವನ್ನು ನೋಂದಾಯಿಸಲಾಗಿದೆ.

25 ಕೋಟಿ ರೂಪಾಯಿಗಳ ಸ್ಟ್ಯಾಂಪ್ ಡ್ಯೂಟಿಯನ್ನು ಕೇವಲ 500 ರೂ.ಗೆ ಇಳಿಸಲಾಗಿದೆ
ಘೋಷಿತ ಒಪ್ಪಂದದ ಮೌಲ್ಯ 300 ಕೋಟಿ ರೂಪಾಯಿಗಳಾಗಿದ್ದರೂ, ತೆರಿಗೆಗಳನ್ನು ಒಳಗೊಂಡಂತೆ ಒಟ್ಟು ಪಾವತಿಸಬೇಕಾದ ಸ್ಟ್ಯಾಂಪ್ ಡ್ಯೂಟಿ ಸುಮಾರು 25 ಕೋಟಿ ರೂಪಾಯಿಗಳಾಗಿರಬೇಕು ಎಂದು ತನಿಖಾಧಿಕಾರಿಗಳು ನಿರ್ಧರಿಸಿದ್ದರು. ಬದಲಾಗಿ, ಡೀಡ್ ಅನ್ನು ಕೇವಲ 500 ರೂಪಾಯಿಗಳ ಟೋಕನ್ ಸ್ಟ್ಯಾಂಪ್ ಡ್ಯೂಟಿಗೆ ನೋಂದಾಯಿಸಲಾಗಿದೆ.
ಡೇಟಾ ಸೆಂಟರ್ ಅಭಿವೃದ್ಧಿಗಾಗಿ ಯೋಜನೆಯು 5% ಸ್ಟ್ಯಾಂಪ್ ಡ್ಯೂಟಿ ವಿನಾಯಿತಿಗೆ ಅರ್ಹತೆ ಪಡೆದಿದ್ದರೂ ಸಹ, ಸ್ಥಳೀಯ ಸಂಸ್ಥೆ ತೆರಿಗೆ ಮತ್ತು ಮೆಟ್ರೋ ತೆರಿಗೆಯಂತಹ ಸ್ಥಳೀಯ ತೆರಿಗೆಗಳು ಒಟ್ಟು 6 ಕೋಟಿ ರೂಪಾಯಿಗಳು  ಅನ್ವಯವಾಗುತ್ತವೆ. ಆದ್ದರಿಂದ ನೋಂದಣಿಯು ರಾಜ್ಯ ಖಜಾನೆಗೆ ಗಣನೀಯ ಆರ್ಥಿಕ ನಷ್ಟವನ್ನುಂಟುಮಾಡಿತು. ಇದರ ಬಗ್ಗೆ ಈಗ ಉನ್ನತ ಮಟ್ಟದ ತನಿಖೆಯಾಗುತ್ತಿದೆ

PUNE LAND SCAM BY PARTH PAWAR
Advertisment