ನಾನು ಅರ್ಬನ್ ನಕ್ಸಲ್, ಬಿಜೆಪಿಯವರು ನಗರ ಡಕಾಯಿತರು ಎಂದ ವಕೀಲ ಸಿ.ಎಸ್.ದ್ವಾರಕನಾಥ್

ಬಿಜೆಪಿ ನಾಯಕರು ಅರ್ಬನ್ ನಕ್ಸಲರ ಪ್ರಭಾವದಿಂದ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳ ಕೇಸ್ ತನಿಖೆಯನ್ನು ಎಸ್‌ಐಟಿಗೆ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿ.ಎಸ್.ದ್ವಾರಕನಾಥ್, ಹೌದು ನಾನು ಆರ್ಬನ್ ನಕ್ಸಲ್. ಬಿಜೆಪಿಯವರು ಆರ್ಬನ್ ಡಕಾಯಿತರು ಎಂದಿದ್ದಾರೆ.

author-image
Chandramohan
lawyer cs dwarakanatha022

ಹಿರಿಯ ವಕೀಲ ಸಿ.ಎಸ್.ದ್ವಾರಕನಾಥ್ ಪ್ರತ್ಯುತ್ತರ

Advertisment
  • ಹೌದು, ನಾನು ಆರ್ಬನ್ ನಕ್ಸಲ್ ಎಂದ ಸಿ.ಎಸ್.ದ್ವಾರಕನಾಥ್
  • ಬಿಜೆಪಿಯವರು ನಗರ ಡಕಾಯಿತರು ಎಂದ ಸಿ.ಎಸ್.ದ್ವಾರಕನಾಥ್
  • ಧರ್ಮಸ್ಥಳದಲ್ಲಿ 40 ವರ್ಷದಿಂದ ರೇಪ್, ಕೊಲೆ ನಡೆಯುತ್ತಿದೆ- ದ್ವಾರಕನಾಥ್

ಧರ್ಮಸ್ಥಳದ  ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರು ನಗರ ನಕ್ಸಲರು, ಎಡಪಂಥೀಯರು ಎಂಬ ಬಿಜೆಪಿಯವರ ಆರೋಪ ವಿಚಾರ ಈಗ ಚರ್ಚೆಗೆ ಬಂದಿದೆ. ಜೊತೆಗೆ ಮಾಜಿ ಸಿಎಂ ಹಾಗೂ ಕೇಂದ್ರದ ಹಾಲಿ ಭಾರಿ ಕೈಗಾರಿಕೆ, ಉಕ್ಕು ಖಾತೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕೂಡ ಹಿರಿಯ ವಕೀಲ ಸಿ.ಎಸ್.ದ್ವಾರಕನಾಥ್ ಅವರಿಂದ ಸಿಎಂ ಸಿದ್ದರಾಮಯ್ಯ ದೂರು ಪಡೆದ ಬಳಿಕ ಧರ್ಮಸ್ಥಳ ಕೇಸ್ ಬಗ್ಗೆ ತನಿಖೆಗೆ ಎಸ್‌ಐಟಿ ರಚಿಸಿದ್ದಾರೆ ಎಂದು ಹೇಳಿದ್ದಾರೆ. ಇದರ ಬಗ್ಗೆ ಈಗ ಖುದ್ದು ಹಿರಿಯ ವಕೀಲ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಪ್ರತಿಕ್ರಿಯೆ ನೀಡಿದ್ದಾರೆ.  
ಹೌದು, ನಾನು ನಗರ ನಕ್ಸಲೀಯ, ವಿಥೌಟ್ ವೆಪನ್ ನಗರ ನಕ್ಸಲೀಯ.  ನಾನು ನಗರ ನಕ್ಸಲೀಯ, ಬಿಜೆಪಿಯವರು ನಗರ ಡಕಾಯಿತರು ಎಂದು ಬಿಜೆಪಿ ವಿರುದ್ಧ ಸಿ.ಎಸ್,ದ್ವಾರಕನಾಥ್ ಕಿಡಿಕಾರಿದ್ದಾರೆ. 
ನ್ಯೂಸ್ ಫಸ್ಟ್  ಜೊತೆ ಹಿರಿಯ ನ್ಯಾಯವಾದಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್ ದ್ವಾರಕನಾಥ್ ಮಾತನಾಡಿದ್ದಾರೆ. ನಕ್ಸಲೀಯರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವವರು. ಅವರು ಶಸ್ತ್ರಾಸ್ತ್ರಗಳನ್ನ ಹೊಂದಿರುವುದಕ್ಕೆ ನಮ್ಮ ವಿರೋಧ ಇತ್ತು . ಅದರ ಹೊರತಾಗಿ ನಕ್ಸಲರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದರು. ನಗರ ಡಕಾಯಿತರು ಅನ್ನೋದನ್ನ ಬಿಜೆಪಿಯವರು ಒಪ್ಪಿಕೊಳ್ಳಲಿ. ನಾನು ನಗರ ನಕ್ಸಲೀಯ ಎಂದು ಸಿ.ಎಸ್.ದ್ವಾರಕನಾಥ್ ನೇರವಾಗಿ ಹೇಳಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಪುರಾವೆ ಇದೆ, ಇಲ್ಲ ಅಂತಾ ಹೇಳಲು ಬಿಜೆಪಿಯವರು ಯಾರು ? ಅವರು ಕೊಲೆ, ಅತ್ಯಾಚಾರ, ಮಿಸ್ಸಿಂಗ್ ಮಾಡಿದವರ ಪರವಾಗಿ ಮಾತನ್ನಾಡುತ್ತಿದ್ದಾರೆ. ನಾವು ಒಬ್ಬ ಬಡ ಹೆಣ್ಣು ಮಗಳ ಅತ್ಯಾಚಾರ ಖಂಡಿಸುವುದು ತಪ್ಪಾ ?  ಷಡ್ಯಂತ್ರ ತೆಗೆದುಕೊಂಡು ನಾವು ಏನು ಮಾಡಬೇಕು.  ನಾವೇನು ಆ ಹುಂಡಿಯನ್ನ ತೆಗೆದುಕೊಂಡು ಹೋಗಬೇಕಾ ? ಕೊಲೆಗಡುಕರನ್ನ ರಕ್ಷಿಸಲು ಪರವಾಗಿ ನಿಂತು ಕೆಲಸ ಮಾಡುತ್ತಿದ್ದಾರೆ. 

lawyer cs dwarakanatha



ಎಸ್ಐಟಿ ತನಿಖೆ ರಚನೆ ಹಿಂದೆ ದ್ವಾರಕನಾಥ್ ಒತ್ತಡ ಇತ್ತು ಎಂಬ ಹೆಚ್‌ಡಿಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಎಸ್.ದ್ವಾರಕನಾಥ್,  ನನಗೆ ಕುಮಾರಸ್ವಾಮಿ ಬಗ್ಗೆ ತುಂಬಾ ಗೌರವ ಇದೆ.  ಹಿಂದೆ ಅವರು ಸಿಎಂ ಆಗಿದ್ದಾಗ ನನಗೆ ಹಿಂದುಳಿದ ವರ್ಗಗಳ ಅಧ್ಯಕ್ಷ ಸ್ಥಾನ ನೀಡಿದ್ದರು. ಎಲ್ಲರನ್ನೂ ದೇವರು ನೋಡಿಕೊಳ್ಳಬೇಕು ಅಲ್ಲವೇ ? ಹಾಗಾದರೆ ರೇಪಿಸ್ಟ್, ಕೊಲೆಗಡುಕರನ್ನೂ ದೇವರು ನೋಡಿಕೊಳ್ಳಬೇಕು ಅಲ್ಲವಾ ? ಧರ್ಮಸ್ಥಳದಲ್ಲಿ ಕ್ರೈಮ್ ನಡೆದಿದೆ ಎಂದು ಹೇಳೋದು ತಪ್ಪಾ ? ಹೆಣ್ಣು ಮಕ್ಕಳ ಮೇಲೆ ರೇಪ್ ನಡೆಯುತ್ತಿರುವುದನ್ನ ಖಂಡಿಸಲೇಬಾರದಾ ? ಧರ್ಮಸ್ಥಳದ ಪಾವಿತ್ರ್ಯತೆ ಕಾಪಾಡಬೇಕು.  ಕೆಲವರು ಧರ್ಮಸ್ಥಳದ ಹುಂಡಿ, ಹುಂಡಿಯನ್ನ ಕಾಯುವವರ ಪರವಾಗಿ ನಿಂತಿದ್ದಾರೆ. ಎಸ್‌ಐಟಿ ತಂಡ ಮುಕ್ತವಾಗಿ ತನಿಖೆ ನಡೆಸಲು ಅವಕಾಶ ನೀಡಬೇಕು.  ಆಗ ತನಿಖೆ ತಾರ್ಕಿಕ ಅಂತ್ಯಕ್ಕೆ ತಲುಪಲಿದೆ. ಪ್ರಕರಣವನ್ನ ತೀರ್ಮಾನಿಸಬೇಕಿರುವುದು ಕೋರ್ಟ್.  ಆದರೂ ಕೊಪ್ಪರಿಗೆಗಟ್ಟಲೆ ಹಣವಿದೆ, ಅವರ ಪರವಾಗಿ  ಬಿಜೆಪಿಯವರು ಮಾತನ್ನಾಡುತ್ತಿದ್ದಾರೆ ಎಂದು ಸಿ.ಎಸ್.ದ್ವಾರಕನಾಥ್ ಹೇಳಿದ್ದಾರೆ. 
ನಾನು ಸಿಎಂ ಮೇಲೆ ಒತ್ತಡ ಮಾಡುವಷ್ಟು ಪ್ರಭಾವಿಯಲ್ಲ. ಕಳೆದ ನಲ್ವತ್ತು ವರ್ಷಗಳಿಂದ ಧರ್ಮಸ್ಥಳದಲ್ಲಿ ಅತ್ಯಾಚಾರ, ಕೊಲೆ ನಡೆಯುತ್ತಿದೆ. ನ್ಯಾಯಯುತ ತನಿಖೆ ನಡೆಸುವಂತೆ ಸಿಎಂಗೆ ಮನವಿ ಮಾಡಿದ್ದೆವು. ಅದರಲ್ಲೂ ಮಾಸ್ಕ್ ಮ್ಯಾನ್ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದರು . ಜೊತೆಗೆ ಮಹಿಳಾ ಆಯೋಗದ ಒತ್ತಡದ ಕಾರಣದಿಂದ ತನಿಖೆಗೆ ಆದೇಶ ಕೊಟ್ಟಿದ್ದಾರೆ ಎಂದು ಹಿರಿಯ ವಕೀಲ ಸಿ.ಎಸ್.ದ್ವಾರಕನಾಥ್ ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

C.S.DWARAKANATHA REACTION TO BJP AND HDK
Advertisment