ಧರ್ಮಸ್ಥಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವಾಗ ಸರ್ಕಾರ ಮಧ್ಯೆ ಪ್ರವೇಶ ಮಾಡಬೇಕಿತ್ತಲ್ವಾ?. ಚಲನಚಿತ್ರ ನಟಿ ರಮ್ಯಾ ಅವರ ಮೇಲೆ ಅವಾಚ್ಯ ಶಬ್ಧಗಳ ಪ್ರಯೋಗ ಮಾಡಿದರು ಎನ್ನುವ ಕಾರಣಕ್ಕೆ 12 ಜನರನ್ನು ಅರೆಸ್ಟ್ ಮಾಡಿದರು. ಅದೇ ರೀತಿ ಧರ್ಮಸ್ಥಳ ಕುರಿತು ಯೂಟ್ಯೂಬ್ಗಳಲ್ಲಿ ಅವಹೇಳನಕಾರಿಯಾಗಿ, ಚಿತ್ರ ವಿಚಿತ್ರವಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನಿಂದ ಸ್ಟೋರಿ ಬಿಲ್ಡ್ ಮಾಡಿದವರನ್ನು ಎಷ್ಟು ಜನರನ್ನು ಬಂಧಿಸಲಾಗಿದೆ, ಎಷ್ಟು ಜನರು ಜೈಲಿನಲ್ಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ಪ್ರಶ್ನೆ ಮಾಡಿದ್ದಾರೆ.
ಒಬ್ಬ ದೂರುದಾರನ ಹಿನ್ನೆಲೆ ಏನು ಎಂಬುದನ್ನು ಪರಿಶೀಲನೆ ಮಾಡದೇ 15-16 ಕಡೆ ಭೂಮಿ ಅಗೆದರಲ್ಲ ಅದು ರಾಜಕೀಯ. ಚೆನ್ನೈಯಿಂದ, ವಿದೇಶದಿಂದ ದುಡ್ಡು ಬಂದಿದೆ. ಕಾಂಗ್ರೆಸ್ನ ಸಂಸತ್ತು ಸದಸ್ಯರೊಬ್ಬರು ಇದನ್ನು ಡೈರೆಕ್ಟ್ ಮಾಡಿದ್ದಾನೆ. ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನುವುದು ಸುದ್ದಿ. ಪೊಲೀಸರ ಮೇಲೆ ವಿಶ್ವಾಸ ಇದೆ. ಆದರೆ ಇದರಲ್ಲಿ ನಿಮ್ಮ ಪಕ್ಷ ರಾಜಕಾರಣ ಬಾಡಬಾರದು ಅಲ್ಲ. ಮೊದಲೇ ನಾನು ದೂರುದಾರನ ಬಗ್ಗೆ ಪರಿಶೀಲನೆ ಮಾಡಿ ಎಂದು ಹೇಳಿದ್ದೇ ಎಂದು ಸಿಟಿ ರವಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ