/newsfirstlive-kannada/media/post_attachments/wp-content/uploads/2025/03/CHELUVARAYA-SWAMY.jpg)
ನಾಯಕತ್ವ ಬದಲಾವಣೆ ಸುಳಿವು ಕೊಟ್ಟ ಸಚಿವ ಚಲುವರಾಯಸ್ವಾಮಿ
ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಶಾಸಕರು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಹೈಕಮಾಂಡ್.ಸಂಪುಟ ಬದಲಾವಣೆ ಆಗುತ್ತೋ, ನಾಯಕತ್ವ ಬದಲಾವಣೆ ಆಗುತ್ತೋ ಎಂಬ ಪ್ರಶ್ನೆಗೆ ಉತ್ತರಿಸಿದ ಚಲುವರಾಯಸ್ವಾಮಿ, ಗೊಂದಲವಿಲ್ಲದೇ ಒಳ್ಳೆಯ ರೀತಿ ತೀರ್ಮಾನ ಆಗುತ್ತೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ನಾಯಕತ್ವ ಬದಲಾವಣೆ ಸುಳಿವು ಅನ್ನು ಕೃಷಿ ಸಚಿವ ಚಲುವರಾಯಸ್ವಾಮಿ ನೀಡಿದ್ದಾರೆ .
ಪರಮೇಶ್ವರ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು, ಬಹಳ ಸೀನಿಯರ್ ಇದ್ದಾರೆ. ಸಿಎಂ ಬದಲಾವಣೆ ಕುರಿತು ನಮ್ಮೊಂದಿಗೆ ಹೈಕಮಾಂಡ್ ಮಾತನಾಡಿಲ್ಲ ಎಂದಿದ್ದಾರೆ. ನಾನು ಅದರ ಬಗ್ಗೆ ಹೇಳೋಕೆ ಆಗಲ್ಲ. ಅದರ ಬಗ್ಗೆ ಹೈಕಮಾಂಡ್, ಸಿಎಂ, ಡಿಸಿಎಂ ನಡುವೆ ಒಳ್ಳೆಯ ರೀತಿ ತೀರ್ಮಾನ ಆಗುತ್ತೆ. ಕ್ಯಾಬಿನೆಟ್ ಫುನರ್ ರಚನೆ ಆಗುತ್ತೋ, ನಾಯಕತ್ವ ಬದಲಾವಣೆ ಆಗುತ್ತೋ, ಏನು ಆಗುತ್ತೆ, ಯಾವಾಗ ಆಗುತ್ತೆ ಗೊತ್ತಿಲ್ಲ.
ಆದ್ರೆ ಬಿಜೆಪಿ ತರಹ ಆಗಲ್ಲ. ನಮಲ್ಲಿ ಶಾಸಕರು ಎಷ್ಟು ಮುಖ್ಯನೋ, ಅಷ್ಟೇ ಹೈಕಮಾಂಡ್ ಮುಖ್ಯ.
ಹೈಕಮಾಂಡ್ ಏನ್ ತೀರ್ಮಾನ ಮಾಡುತ್ತೋ, ತೀರ್ಮಾನ ಒಳ್ಳೆಯ ರೀತಿ ಆಗುತ್ತೆ, ಗೊಂದಲ ಆಗಲ್ಲ.
ವಿರೋಧ ಪಕ್ಷದವರಿಗೆ ಖಾರವಾಗಿ ಏನು ಸಿಗಲ್ಲ. ಹೈಕಮಾಂಡ್ ಯಾವ ವಿಚಾರವನ್ನು ಹೊರಗಡೆ ಬಿಟ್ಟಿಲ್ಲ. ಬಿಹಾರ ಚುನಾವಣೆ ಮುಗಿದ ಬಳಿಕ ಎಲ್ಲವನ್ನು ಚರ್ಚೆ ಮಾಡುತ್ತಾರೆ ಎಂದು ಕೃಷಿ ಖಾತೆ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಮೂಲಕವಾಗಿ ನಾಯಕತ್ವ ಬದಲಾವಣೆಯಾಗಬಹುದೆಂಬ ಚರ್ಚೆಗೆ ಸಚಿವ ಚಲುವರಾಯಸ್ವಾಮಿ ಪುಷ್ಟಿ ನೀಡಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2024/09/Cheluvarayaswamy-On-nagamangala.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us