/newsfirstlive-kannada/media/media_files/2025/09/29/mallaprabha-sugar-factory-election-2025-09-29-17-24-47.jpg)
ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಸಚಿವೆ ಲಕ್ಷ್ಮಿ ಬೆಂಬಲಿಗರಿಗೆ ಗೆಲುವು
ಬೆಳಗಾವಿ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಚುನಾವಣೆಯ ಫಲಿತಾಂಶ ಇಂದು ಮುಂಜಾನೆ ಪ್ರಕಟವಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸೋದರ ಚನ್ನರಾಜ್ ಹಟ್ಟಿಹೊಳಿ ಅಂಡ್ ಟೀಮ್ ಗೆದ್ದು ಬೀಗಿದ್ದಾರೆ. ಸಹಕಾರಿ ಸಕ್ಕರೆ ಕಾರ್ಖಾನೆ ಮೇಲೆ ಚನ್ನರಾಜ್ ಹಟ್ಟಿಹೊಳಿ ಹಿಡಿತ ಸಾಧಿಸಿದ್ದಾರೆ. ಕಿತ್ತೂರು ತಾಲೂಕಿನ ಎಂ ಕೆ ಹುಬ್ಬಳ್ಳಿಯಲ್ಲಿ ಮತ ಎಣಿಕೆ ಕಾರ್ಯ ನಡೆದಿತ್ತು. ಚನ್ನರಾಜ್ ಹಟ್ಟಿಹೊಳಿ ಬೆಂಬಲಿತ 12ಕ್ಕೂ ಹೆಚ್ಚು ಸದಸ್ಯರು ಗೆಲುವು ಸಾಧಿಸಿದ್ದಾರೆ. ಅತೀ ಹೆಚ್ಚು ಮತಗಳನ್ನ ಪಡೆಯುವ ಮೂಲಕ ಚನ್ನರಾಜ್ ಹಟ್ಟಿಹೊಳಿ ಟೀಮ್ ಭರ್ಜರಿ ಗೆಲುವು ಸಾಧಿಸಿದೆ. ಗೆಲುವು ಸಾಧಿಸುತ್ತಿದ್ದಂತೆ ಗುಲಾಲ್ ಎರಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಸೋದರ ಚನ್ನರಾಜ್ ಹಟ್ಟಿಹೊಳಿ ಮುಖಕ್ಕೆ ಗುಲಾಲ ಎರಚಿ ಸಂಭ್ರಮಾಚರಣೆ ಮಾಡಿದ್ದಾರೆ. ಶಾಸಕ ವಿಠ್ಠಲ ಹಲಗೇಕರ್ ಹಾಗೂ ಬಾಬಾಸಾಹೇಬ್ ಪಾಟೀಲ್ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಮಲಪ್ರಭಾ ಸಕ್ಕರೆ ಕಾರ್ಖಾನೆ ಪುನಶ್ಚೇತನ ಪ್ಯಾನಲ್ ಗೆಲುವು ಸಾಧಿಸಿದ್ದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಪ್ರತಿಕ್ರಿಯೆ ನೀಡಿದ್ದಾರೆ. ಶಾಸಕ ಬಾಬಾಸಾಹೇಬ್,ವಿಠ್ಠಲ ಹಲಗೇಕರ ಹಾಗೂ ಚೆನ್ನರಾಜ್ ಹಟ್ಟಿಹೊಳಿ ನೇತೃತ್ವದಲ್ಲಿ 15 ಜನರ ಪ್ಯಾನಲ್ ಮಾಡಿದ್ದೇವು . 15 ಜನರು ನಮ್ಮ ಪ್ಯಾನಲ್ ಲೀಡ್ ನಿಂದ ಗೆಲುವು ಅಂತಾ ಸುದ್ದಿ ಬಂದಿದೆ. ನಮ್ಮ ಮೇಲಿನ ವಿಶ್ವಾಸ ಹಾಗೂ ಮತದಾರರು ನಮ್ಮ ಮೇಲೆ ಬಹಳ ವಿಶ್ವಾಸ ಇಟ್ಟಂತೆ ಕಾಣುತ್ತಿದೆ. ಬಹಳಷ್ಟು ತುರುಸಿನ ಚುನಾವಣೆ ನಡೆಯಿತು. ನಮಗೆ ಯಾರು ವಿರೋಧಿಗಳು ಇಲ್ಲ. ಮಾತು ಪ್ರತಿ ಮಾತು ಇರುತ್ತೆ . ಮಲಪ್ರಭಾ ಸಕ್ಕರೆ ಕಾರ್ಖಾನೆ ಗತವೈಭವ ತರುವುದೇ ನಮ್ಮ ಗುರಿ. ನಾವು ಹೇಳಿದಂತೆ ಕೆಲಸ ಮಾಡಿ ವಿಶ್ವಾಸ ಉಳಸಿಕೊಳ್ಳುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ಎಂ.ಕೆ.ಹುಬ್ಬಳ್ಳಿಯ ಶ್ರೀ ಮಲಪ್ರಭಾ (ರಾಣಿ ಶುಗರ್ಸ್) ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿಯ ಮಂಡಳಿಯ ಚುನಾವಣೆಯಲ್ಲಿ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನ ರೈತರ ಪ್ಯಾನಲ್ ಗೆ ಐತಿಹಾಸಿಕ ಗೆಲುವು ತಂದು ಕಾರ್ಖಾನೆಯ ಷೇರುದಾರರಿಗೆ ಹಾಗೂ ಕಾರ್ಮಿಕರಿಗೆ ತುಂಬು ಹೃದಯದ ಧನ್ಯವಾದಗಳು! pic.twitter.com/ZZvxP1qgJP
— Laxmi Hebbalkar (@laxmi_hebbalkar) September 28, 2025
ಮಲಪ್ರಭಾ ಸಕ್ಕರೆ ಕಾರ್ಖಾನೆಯ ಚುನಾವಣೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಗೆಲುವು ಸಾಧಿಸಿದ್ದರೇ, ಹುಕ್ಕೇರಿ ಗ್ರಾಮೀಣಾ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ. ಒಂದೇ ದಿನ ಬೆಳಗಾವಿ ಜಿಲ್ಲೆಯ ಎರಡು ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಒಂದರಲ್ಲಿ ಕಾಂಗ್ರೆಸ್ ಗೆ ಬೇವು ಸಿಕ್ಕರೇ, ಮತ್ತೊಂದರಲ್ಲಿ ಬೆಲ್ಲ ಸಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.