ರಾಹುಲ್ ಗಾಂಧಿಯವರು ಹಾಗೂ ನಾವು ಬೇಕಾದ ಎಲ್ಲ ದಾಖಲೆ ಸಾರ್ವಜನಿಕವಾಗಿ ಇಟ್ಟಿದ್ದೇವೆ. ಆದರೆ ಇದಕ್ಕೆ ಚುನಾವಣಾ ಆಯೋಗ ಉತ್ತರ ಕೊಡುವುದು ಬಿಟ್ಟು ಪೊಲಿಟಿಕಲ್ ಮಾಸ್ಟರ್ಸ್ ಅನ್ನ ರಕ್ಷಣೆ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಫೆವರ್ 7250 ಮತಗಳನ್ನ ಕಡಿತ ಮಾಡುತ್ತಿದ್ದಾರೆ ಅಂತ ಮಾಹಿತಿ ಬಂತು. ಆಯೋಗಕ್ಕೆ ಹೋಗಿ ದೂರು ಕೊಟ್ಟಿದ್ದೇವೆ. ಫಾರ್ಮ್-7ರ ಮೂಲಕ ಮತಗಳನ್ನ ತೆಗೆದಿರುವುದು ಗೊತ್ತಾಗಿದೆ. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ಗುಜರಾತ್ ರಾಜ್ಯಗಳಿಂದ ಈ ಮೊಬೈಲ್ ನಂಬರ್ಗಳು ರಿಜಿಸ್ಟರ್ ಆಗಿವೆ ಎನ್ನುವುದು ಗೊತ್ತಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ರಾಜ್ಯ ತನಿಖಾ ಏಜೆನ್ಸಿಗಳಿಗೆ ಎರಡು ವರ್ಷದಲ್ಲಿ 18 ಬಾರಿ ಪತ್ರ ಬರೆದರೂ ಉತ್ತರ ಬಂದಿಲ್ಲ. ಭಾರತೀಯ ಚುನಾವಣಾ ಆಯೋಗ ಈ ಮಾಹಿತಿಯನ್ನ ರಕ್ಷಣೆ ಮಾಡಲು ಮುಂದಾಗಿದೆ. ಡಿವೈಸ್ ಯಾರದ್ದು, ಡಿವೈಸ್ನಲ್ಲಿರುವ ಐಪಿ ಯಾರದ್ದು, ಡೆಸ್ಟಿನೇಷನ್ ಐಪಿ ಯಾರದು, ಒಟಿಪಿ ಹೇಗೆ ಬರುತ್ತಿದೆ?. ಒಂದೇ ನಂಬರ್ಗೆ ಹಲವಾರು ಒಟಿಪಿ ಹೇಗೆ ಬರಲು ಸಾಧ್ಯ?. ಈ ಬಗ್ಗೆ ಟೆಕ್ನಿಕಲ್ ಮಾಹಿತಿ ಕೇಳಿದರೆ ಅವರು ಕೊಡುತ್ತಿಲ್ಲ. ಬಿಜೆಪಿಯವರಿಗೆ ಚುನಾವಣಾ ಆಯೋಗ ಕೈಗೊಂಬೆ ಆಗಿದೆ. ಇದನ್ನು ಮಾಡಿಸುತ್ತಿರುವುದೇ ಬಿಜೆಪಿ ಎನ್ನುವುದು ನಮ್ಮ ನೇರವಾದ ಆರೋಪ ಆಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಒಂದೇ ವಿಳಾಸದಲ್ಲಿ 78 ಜನ ಇದ್ದರು. ಚುನಾವಣಾ ಆಯೋಗದ ಗೈಡ್ಲೈನ್ಸ್ ಏನು ಹೇಳುತ್ತದೆ. 20 ಜನಕ್ಕಿಂತ ಹೆಚ್ಚು ಜನ ಇದ್ದರೇ ಫಿಸಿಕಲ್ ವೆರಿಫಿಕೇಷನ್ ಮಾಡಬೇಕು. 78 ಜನರಲ್ಲಿ 3 ಜನ ಮಹಿಳೆಯರು, ಉಳಿದವರು ಪುರುಷರು ಇದ್ದಾರೆ. ಇಲ್ಲಿ ಫಿಸಿಕಲ್ ವೆರಿಫಿಕೇಷನ್ ಮಾಡಿದ್ರಾ?. ಒಂದೇ ಕ್ಷೇತ್ರದಲ್ಲಿ ಶೇ.4 ರಷ್ಟು ವೋಟರ್ ಎನ್ವಾರ್ಮೆಂಟ್ ಆದರೆ, ಮತ್ತೊಮ್ಮೆ ಪರಿಷ್ಕರಣೆ ಮಾಡಬೇಕು. ಮಹಾದೇವಪುರದಲ್ಲಿ ಶೇ8.8 ರಷ್ಟು ಜಾಸ್ತಿ ಆಗಿದೆ. ಬಲ್ಕ್ ವೋಟ್ ಹಾಗೂ ಸಿಂಗಲ್ ವೋಟ್ ರಿಜಿಸ್ಟ್ರೇಷನಲ್ ಮಾಡೋಕೆ ಆಗಲ್ಲ. ಕಮರ್ಷಿಯಲ್ ಎಸ್ಟಾಬಿಲೇಷನ್ನ ಪಬ್ನಲ್ಲಿ ಮಾಡಿದಾಗ ಕತ್ತೆ ಕಾಯುತ್ತಿದ್ದಾರಾ ಎಲೆಕ್ಷನ್ ಕಮಿಷನ್ನವರು, ಅದು ಅವರ ಜವಾಬ್ದಾರಿನಾ, ನನ್ನ ಜವಾಬ್ದಾರಿನಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ