/newsfirstlive-kannada/media/media_files/2025/10/16/priyank_kharge_rss-2025-10-16-16-25-53.jpg)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಆರ್​ಎಸ್​ಎಸ್ ಸೇರಿ ಇತರೆ ಖಾಸಗಿ ಸಂಘಟನೆಗಳು ಸರ್ಕಾರಿ ಸ್ಥಳಗಳಲ್ಲಿ ಚಟುವಟಿಕೆಗಳನ್ನ ನಡೆಸದಂತೆ ನಿರ್ಬಂಧ ವಿಧಿಸಿದೆ. ಸದ್ಯ ಈ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ವಿಧಾನ ಸೌಧದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಯಾವುದರ ಆಧಾರದ ಮೇಲೆ ಇವರು ಕೋರ್ಟ್​ಗೆ​ ಹೋಗುತ್ತಾರೆ?. ನಾವೇನು ಬಿಜೆಪಿ, ಆರ್​ಎಸ್​ಎಸ್​ನ ಬ್ಯಾನ್ ಮಾಡುತ್ತಿದ್ದೇವಾ? ಅಥವಾ ಬೇರೆ ಸಂಘಟನೆಗಳನ್ನು ಬ್ಯಾನ್ ಮಾಡುತ್ತಿದ್ದೇವಾ?. ಸರ್ಕಾರಿ ಸ್ಥಳಗಳಲ್ಲಿ, ಸರ್ಕಾರಿ ಶಾಲೆಗಳಲ್ಲಿ ಮಾಡಬಾರದು ಅಂತ ಅಷ್ಟೇ ನಾವು ಹೇಳುತ್ತಿರುವುದು ಎಂದು ಹೇಳಿದ್ದಾರೆ.
ಯಾವುದೇ ಸಂಸ್ಥೆ ಅಥವಾ ಬಿಜೆಪಿನ ನಾವು ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿಲ್ಲ. ರಾಜ್ಯದ ಜನರಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಬೇಕು. ಎಲ್ಲರಿಗೂ ಉದ್ಯೋಗ ಸೃಷ್ಟಿ ಮಾಡಬೇಕು. ಬಂಡವಾಳ ಹೆಚ್ಚು ಹೆಚ್ಚು ತರಬೇಕು ಎನ್ನುವುದು ನಮ್ಮ ಉದ್ದೇಶ. ಆರ್ಥಿಕವಾಗಿ ನಾವು ಪ್ರಗತಿ ಕಾಣಬೇಕು ಎನ್ನುವುದು ನಮ್ಮದು ಆಶಯ ಆಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಕೇವಲ ಆರ್​ಎಸ್​ಎಸ್ ಅಲ್ಲ, ಯಾವುದೇ ಸಂಘಟನೆಗಳು ಸರ್ಕಾರಿ ಸ್ಥಳಗಳಲ್ಲಿ ಬೈಠಕ್, ಕವಾಯತು ಮಾಡುವಂತಿಲ್ಲ. ಕಾನೂನು ಒಬ್ಬರಿಗೆ ಅಲ್ಲ, ಎಲ್ಲರಿಗೂ ಒಂದೇ ಆಗಿದೆ. ಹೀಗಾಗಿ ಎಲ್ಲ ಸಮುದಾಯದ ಸಂಘಟನೆಗಳಿಗೂ ಇದು ಅನ್ವಯವಾಗುತ್ತದೆ. ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾನೂನು ತಂದಿಲ್ಲ. ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿ ಎಲ್ಲರಿಗೂ ಕಾನೂನು ಒಂದೇ ಇರುತ್ತದೆ. ನೀವು ಬೆದರಿಕೆ ಹಾಕುತ್ತೀರಾ ಎಂದರೆ ಏನ್ ಅರ್ಥ. ಕೆಲವು ಚಟುವಟಿಕೆಗಳು ನಮ್ಮ ಯುವ ಜನರಿಗೆ ಸರಿ ಅಲ್ಲ. ಹೀಗಾಗಿ ಸಂವಿಧಾನದ ಅಡಿಯಲ್ಲಿ ತಡೆ ಹಾಕುವುದಕ್ಕೆ ಕಾನೂನು ತಂದಿದ್ದೇವೆ. ಆದರೆ ಇವರೆಲ್ಲ ಸೇರಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ