Advertisment

ಸಿಎಂ ರೇಸ್ ನಿಂದ ಹಿಂದೆ ಸರಿದಿದ್ದೇನೆ ಎಂದ ಸಚಿವ ಸತೀಶ್ ಜಾರಕಿಹೊಳಿ : ಇದ್ದಕ್ಕಿದ್ದಂತೆ ಏನಾಯ್ತು? ಹಿಂದೆ ಸರಿದಿದ್ದೇಕೆ?

ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಸಿಎಂ ರೇಸ್ ನಿಂದ ಹಿಂದೆ ಸರಿದಿರುವುದಾಗಿ ಮೈಸೂರುನಲ್ಲಿ ಹೇಳಿದ್ದಾರೆ. ಬಹಳ ಹಿಂದೆಯೇ ನಾನು ಸಿಎಂ ರೇಸ್ ನಿಂದ ಹಿಂದೆ ಸರಿದಿದ್ದೇನೆ ಎಂದಿದ್ದಾರೆ. ಈಗ ಸತೀಶ್ ಜಾರಕಿಹೊಳಿ ಹೀಗೆ ಹೇಳಿದ್ದು ಏಕೆ? ಈಗ ಏನಾಯ್ತು? ಎಂಬ ಚರ್ಚೆ ನಡೆಯುತ್ತಿದೆ.

author-image
Chandramohan
Satish_Jarkiholi

ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ

Advertisment
  • ನಾನು ಸಿಎಂ ರೇಸ್ ನಿಂದ ಹಿಂದೆ ಸರಿದಿದ್ದೇನೆ ಎಂದ ಸತೀಶ್ ಜಾರಕಿಹೊಳಿ
  • ಬಹಳ ಹಿಂದೆಯೇ ಸಿಎಂ ರೇಸ್ ನಿಂದ ಹಿಂದೆ ಸರಿದಿದ್ದೇನೆ- ಸತೀಶ್ ಜಾರಕಿಹೊಳಿ
  • ಸಿಎಂ ಬದಲಾವಣೆ ವಿಚಾರ ಗೊತ್ತಿಲ್ಲ ಎಂದ ಸತೀಶ್ ಜಾರಕಿಹೊಳಿ

ನಾನು ಸಿಎಂ ರೇಸ್ ನಿಂದ ಹಿಂದೆ ಸರಿದಿದ್ದೇನೆ ಎಂದು ಮೈಸೂರಿನಲ್ಲಿ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.  ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ .  ನೀವು ರೈಟ್ ಪರ್ಸನ್ ಗೆ ಈ ಪ್ರಶ್ನೆ ಕೇಳಿ ರೈಟ್ ಉತ್ತರ ಸಿಗುತ್ತೆ.  ನಾನು ಬಹಳ ಹಿಂದೆಯೇ ರೇಸ್ ನಿಂದ ಹಿಂದೆ ಸರಿದ್ದಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ನಗುತ್ತಾ ಹೇಳಿದ್ದಾರೆ. 
ಸಚಿವ ಸತೀಶ್ ಜಾರಕಿಹೊಳಿ ಈ ಹಿಂದೆ ಕೂಡ ಈ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಮುಂದಿನ  ಅವಧಿಗೆ ನಾನು ಸಿಎಂ ಸ್ಥಾನಕ್ಕೇರಲು ಪ್ರಯತ್ನಿಸುತ್ತೇನೆ ಎಂದಿದ್ದರು. 
ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ , ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗಬೇಕೆಂದು ರಾಜ್ಯ ಹಾಗೂ ಹೈಕಮ್ಯಾಂಡ್ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದರು. ಸತೀಶ್ ಜಾರಕಿಹೊಳಿ ಸಿಎಂ ಆಗಲು ಮಾಜಿ ಸಚಿವ ಕೆ.ಎನ್.ರಾಜಣ್ಣ ಬೆಂಬಲಿಸುತ್ತಿದ್ದರು. 
ದಲಿತ ಸಿಎಂ ಕೂಗು ಕೇಳುತ್ತೆ .  ನಾವು ಡಿನ್ನರ್ ಸಭೆಯಲ್ಲಿ ಏನು ಚರ್ಚೆ ನಡೆಸಿಲ್ಲ .  ಸಿಎಂ ಡಿನ್ನರ್ ಗೆ ಕರೆದ್ರು ನಾವು ಹೋಗಿದ್ದೇವು ಅಷ್ಟೇ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 

Advertisment

ಸಾಹುಕಾರ್ ದೆಹಲಿ ಪ್ರವಾಸದ ಗುಟ್ಟು ರಟ್ಟು.. ಹೈಕಮಾಂಡ್​ ಮುಂದೆ ಇಟ್ಟ ಬೇಡಿಕೆಗಳು ಏನೇನು?


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

satish jarakiholi out of CM RACE
Advertisment
Advertisment
Advertisment