ಸುಪ್ರೀಂಕೋರ್ಟ್ ನಲ್ಲೂ ಶಾಸಕ ಭೈರತಿ ಬಸವರಾಜುಗೆ ಹಿನ್ನಡೆ : ಸುಪ್ರೀಂಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ರೌಡಿ ಷೀಟರ್ ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಕೆ.ಆರ್‌.ಪುರ ಶಾಸಕ ಭೈರತಿ ಬಸವರಾಜುಗೆ ಸುಪ್ರೀಂಕೋರ್ಟ್ ನಲ್ಲೂ ಹಿನ್ನಡೆಯಾಗಿದೆ. ಭೈರತಿ ಬಸವರಾಜು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈಗ ಭೈರತಿ ಬಸವರಾಜು ಮುಂದೆ ಬೇರೆ ಕಾನೂನು ಆಯ್ಕೆಗಳಿಲ್ಲ!

author-image
Chandramohan
ರೌಡಿಶೀಟರ್ ಬಿಕ್ಲು ಶಿವ ಪ್ರಕರಣ; ವಿಚಾರಣೆ ಮುಗಿಸಿ ಬಂದು ಶಾಸಕ ಭೈರತಿ ಬಸವರಾಜ್ ಹೇಳಿದ್ದೇನು? -Video

ಭೈರತಿ ಬಸವರಾಜುಗೆ ಸುಪ್ರೀಂಕೋರ್ಟ್ ನಲ್ಲಿ ಹಿನ್ನಡೆ

Advertisment
  • ಭೈರತಿ ಬಸವರಾಜುಗೆ ಸುಪ್ರೀಂಕೋರ್ಟ್ ನಲ್ಲಿ ಹಿನ್ನಡೆ
  • ಸುಪ್ರೀಂಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ
  • ಈಗ ಸಿಐಡಿ ಪೊಲೀಸರಿಗೆ ಶರಣಾಗದೇ ಬೇರೆ ಆಯ್ಕೆಗಳಿಲ್ಲ


ಸುಪ್ರೀಂಕೋರ್ಟ್ ನಲ್ಲಿಯೂ ಬೆಂಗಳೂರಿನ ಕೆ.ಆರ್‌.ಪುರ ಕ್ಷೇತ್ರದ ಶಾಸಕ  ಬೈರತಿ ಬಸವರಾಜ್ ಗೆ ಹಿನ್ನಡೆಯಾಗಿದೆ. ಭೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.  ನಿಯಮಿತ ಜಾಮೀನು ಅರ್ಜಿ ಸಲ್ಲಿಕೆ ಮಾಡಲು ಸೂಚನೆ ನೀಡಿದೆ.  ಕೆಳ ಹಂತದ ನ್ಯಾಯಾಲಯದಲ್ಲಿ  ಇತ್ಯರ್ಥ ಮಾಡಿಕೊಳ್ಳಿ ಎಂದು ಸೂಚನೆ ನೀಡಿದೆ.  ಭೈರತಿ ಬಸವರಾಜು ಪರ ವಕೀಲರ ವಾದವನ್ನೂ ಆಲಿಸದೆ ಅರ್ಜಿಯನ್ನು ಸುಪ್ರೀಂಕೋರ್ಟ್  ವಜಾಗೊಳಿಸಿದೆ. ಈ ಹಿಂದೆ ನಿರೀಕ್ಷಣಾ ಜಾಮೀನು ಪಡೆದಾಗ ಹೇಗಿರಬೇಕು ಎಂಬುದು  ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದೆ. ಪೊಲೀಸ್ ವಿಚಾರಣೆಯನ್ನು ಎದುರಿಸಲೇಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಸಿಐಡಿ ವಿಚಾರಣೆಗೆ ಹಾಜರಾಗಬೇಕು. ವಿಚಾರಣೆಯಿಂದ ದೂರ ಸರಿಯುವಂತಿಲ್ಲ ಎಂದು  ಹೇಳಿದ ಸುಪ್ರೀಂಕೋರ್ಟ್ ಶಾಸಕ ಭೈರತಿ ಬಸವರಾಜು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು  ವಜಾಗೊಳಿಸಿದೆ. 
ಸುಪ್ರೀಂ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು  ಅರ್ಜಿ ವಜಾಗೊಂಡ ಹಿನ್ನಲೆಯಲ್ಲಿ  ಯಾವುದೇ ಕ್ಷಣದಲ್ಲಾದ್ರೂ ಬೈರತಿ ಬಸವರಾಜ್ ಸಿಐಡಿ ಪೊಲೀಸರಿಗೆ ಸರೆಂಡರ್  ಆಗುವ  ಸಾಧ್ಯತೆ ಇದೆ. ಈಗಾಗಲೇ ಸುಪ್ರೀಂಕೋರ್ಟ್ ಭೈರತಿ ಬಸವರಾಜುಗೆ ಖಾರವಾಗಿ ಸೂಚನೆ ನೀಡಿದೆ. ಇದರಿಂದ ಶಾಸಕ  ಭೈರತಿ ಬಸವರಾಜು ಮುಂದೆ ಬೇರೆ ಯಾವುದೇ ಕಾನೂನು ಆಯ್ಕೆಗಳಿಲ್ಲ. ಈಗ ಸಿಐಡಿ ಮುಂದೆ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನೂ ಸಿಐಡಿ ಪೊಲೀಸರು ಶಾಸಕ ಭೈರತಿ ಬಸವರಾಜುಗಾಗಿ ತೀವ್ರ ಹುಡುಕಾಟವನ್ನು ನಡೆಸುತ್ತಿದ್ದಾರೆ.
ಭೈರತಿ ಬಸವರಾಜು ಭಾರತದಲ್ಲೇ ಇದ್ದಾರಾ ಇಲ್ಲವೇ ಉತ್ತರ ಪ್ರದೇಶದ ಗೋರಖ್ ಪುರ ಗಡಿಯ ಮೂಲಕ ನೇಪಾಳಕ್ಕೆ ರಸ್ತೆ ಮಾರ್ಗವಾಗಿ ತೆರಳಿ, ಕಠ್ಮಂಡು ಏರ್ ಪೋರ್ಟ್ ಮೂಲಕ ದುಬೈಗೆ ಪರಾರಿಯಾಗಿದ್ದಾರೋ ಎಂಬ ಬಗ್ಗೆಯೂ ಪೊಲೀಸರಿಗೆ ಸ್ಪಷ್ಟತೆ ಇಲ್ಲ. ದುಬೈಗೆ ಪರಾರಿಯಾಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

MLA BYRATHI BASAVARAJU ANTICIPATORY BAIL PLEA REJECTED Byrathi Basavaraj
Advertisment