ಬೆಂಗಳೂರು: ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಮತ್ತಿಕೆರೆಯ ಜೆಪಿ ಪಾರ್ಕ್​ನಲ್ಲಿ ಜನರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಶಾಸಕ ಮುನಿರತ್ನ ನಡುವೆ ದೊಡ್ಡ ಹೈಡ್ರಾಮಾವೇ ನಡೆದಿದೆ. ಸದ್ಯ ಇದಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಅವರು ಮಾತನಾಡಿದ್ದಾರೆ.
ನ್ಯೂಸ್ ಫಸ್ಟ್​ ಜೊತೆ ಮಾತನಾಡಿದ ಶಾಸಕ ಮುನಿರತ್ನ ಅವರು, ಸರ್ಕಾರದ ಕಾರ್ಯಕ್ರಮದಲ್ಲಿ ಶಾಸಕರನ್ನೇ ಕರೆದಿಲ್ಲ. ಆದ್ರೆ ವೇದಿಕೆಯಲ್ಲಿ ಕರೆದಿದ್ದೇವೆ ಎಂದು ಡಿಫೆಂಡ್ ಮಾಡಿಕೊಳ್ಳುತ್ತಾರೆ. ಡಿ.ಕೆ ಸುರೇಶ್, ಡಿ.ಕೆ ಶಿವಕುಮಾರ್ ಆಹ್ವಾನ ಕೊಡಲು ಇವರು ಯಾರು?. ನನಗೆ ಆಹ್ವಾನವೇ ಬಂದಿಲ್ಲ. ಒಬ್ಬ ಎಂಎಲ್​ಎನ ಹಿಂದೆ ತಳ್ಳಿ, ಕುಸುಮಾರನ್ನು ಕರೆಸಿಕೊಂಡು ಪಕ್ಕದಲ್ಲಿ ನಿಲ್ಲಿಸಿಕೊಂಡು ಒಬ್ಬರಿಗೊಬ್ಬರು ಪಾದಯಾತ್ರೆ ಮಾಡಿ, ಜನರ ಸಮಸ್ಯೆ ಆಲಿಸುತ್ತಾರೆ ಅಂದರೆ ಯಾವ ನ್ಯಾಯ ಎಂದು ಮುನಿರತ್ನ ಅವರು ಪ್ರಶ್ನಿಸಿದ್ದಾರೆ.
ಒಂದು ಹೆಣ್ಣುಗೋಸ್ಕರ ಈ ಮಟ್ಟಕ್ಕೆ ಹೋಗೋದಾ?. ಒಂದು ಹೆಣ್ಣಿಗೆ ಎಂಎಲ್​ಎ ಹುಚ್ಚಿಡಿದು, ಆ ಹೆಣ್ಣನ್ನು ಎಂಎಲ್​ಎ ಮಾಡಬೇಕು ಎಂದು ಇವತ್ತು ಇಡೀ ಕ್ಷೇತ್ರವನ್ನು ಹಾಳು ಮಾಡಿದ್ದಾರೆ. ನನ್ನ ಮೇಲೆ ಜಿದ್ದಿಗೆ ಬಿದ್ದಿರುವುದಕ್ಕೆ ಎರಡೇ ಕಾರಣ. ಇದರಲ್ಲಿ ಒಂದು ಈ ಕುಸುಮಾ ಡಿ.ಕೆ ರವಿ ಎಂಎಲ್​ಎ ಆಗಬೇಕು. ಇನ್ನೊಂದು ಡಿ.ಕೆ ಸುರೇಶ್ ಅವರನ್ನು ಸೋಲಿಸಿದ್ದು. ಅವಳನ್ನ ಎಂಎಲ್​ಎ ಮಾಡಬೇಕು ಎನ್ನುವುದು ಇವರ ಒಂದೇ ಗುರಿ ಎಂದು ಶಾಸಕ ಮುನಿರತ್ನ ಅವರು ಕಿಡಿ ಕಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ