/newsfirstlive-kannada/media/media_files/2025/11/21/madduru-mla-kadaluru-uday-2025-11-21-13-32-17.jpg)
ಡಿಕೆಶಿಗೆ ಸಿಎಂ ಸ್ಥಾನ ನೀಡಬೇಕೆಂದು ಮದ್ದೂರು ಶಾಸಕ ಉದಯ್ ಆಗ್ರಹ!
ಕರ್ನಾಟಕದಲ್ಲಿ ಸಿಎಂ ಕುರ್ಚಿ ಗೇಮ್ ಈಗ ಶುರುವಾಗಿದೆ. ಸಿಎಂ ಸ್ಥಾನದಲ್ಲಿರುವ ಸಿದ್ದರಾಮಯ್ಯರನ್ನು ಕೆಳಗಿಳಿಸಿ ಆ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ರನ್ನು ಕೂರಿಸಬೇಕೆಂದು ಕಾಂಗ್ರೆಸ್ ಶಾಸಕರು ಈಗ ಒಬ್ಬೊಬ್ಬರಾಗಿ ಆಗ್ರಹಿಸುತ್ತಿದ್ದಾರೆ. ಮಾಗಡಿ ಶಾಸಕ ಬಾಲಕೃಷ್ಣ, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಕುಣಿಗಲ್ ಶಾಸಕ ಎಚ್.ಡಿ. ರಂಗನಾಥ್ ಬಳಿಕ ಈಗ ಮದ್ದೂರು ಶಾಸಕ ಕದಲೂರು ಉದಯ್ ಕೂಡ ಡಿ.ಕೆ.ಶಿವಕುಮಾರ್ ಪರವಾಗಿ ಧ್ವನಿ ಎತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಸಿ.ಎಂ. ಸ್ಥಾನ ನೀಡಲಿ ಎನ್ನುವುದು ಬಹಳಷ್ಟು ಜನರ ಅಭಿಪ್ರಾಯ. ಭವಿಷ್ಯದಲ್ಲಿ ಪಕ್ಷ ಸಂಘಟನೆಯ ದೃಷ್ಟಿಯಿಂದ ಅವಕಾಶ ನೀಡಲಿ . ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಬೇಕೆಂಬುದು ನನ್ನ ಅಭಿಪ್ರಾಯ ಎಂದು ಮದ್ದೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/11/21/madduru-mla-kadaluru-uday02-2025-11-21-13-35-02.jpg)
ಏನೇ ತೀರ್ಮಾನ ಹೈಕಮಾಂಡ್ ಮಾಡುತ್ತದೆ. ಕೆಲವು ನಾಯಕರು ತಮ್ಮ ಅನಿಸಿಕೆ ಹೇಳ್ತಾರೆ. ಅದನ್ನೇ ದೊಡ್ಡದಾಗಿ ಮಾಧ್ಯಮಗಳು ತೋರಿಸುತ್ತಾವೆ. ಈ ರೀತಿಯ ಗೊಂದಲಗಳನ್ನು ತೆರೆ ಎಳೆಯಿರಿ ಎಂಬ ಉದ್ದೇಶದಿಂದ ಶಾಸಕರು ಹೋಗಿದ್ದಾರೆ. ನಮಗಿಂತ ಹೆಚ್ಚಿಗೆ ವಿರೋಧ ಪಕ್ಷದವರೇ ಹೆಚ್ಚು ಚರ್ಚೆ ಮಾಡ್ತಾರೆ. ಹಾಗಾಗಿ ಈ ಗೊಂದಲಗಳನ್ನ ಬಗೆಹರಿಸುವಂತೆ ದೆಹಲಿಗೆ ಹೋಗಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಲಿ ಅನ್ನೋದು ಬಹಳಷ್ಟು ಜನರ ಅಭಿಪ್ರಾಯ. ಸಿದ್ದರಾಮಯ್ಯ ಆಡಳಿತ, ನಾಯಕತ್ವದ ಬಗ್ಗೆ ಪ್ರಶ್ನೆಗಳಿಲ್ಲ. ಭವಿಷ್ಯದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಅವಕಾಶ ನೀಡಲಿ ಎಂಬುದು ನಮ್ಮ ಅಭಿಪ್ರಾಯ . ಡಿಕೆಶಿಯವರ ಪಕ್ಷದ ಸಂಘಟನೆಗೆ ಹೋರಾಡಿದ್ದಕ್ಕೆ ಪ್ರತಿಫಲ ಸಿಗಬೇಕು. ಡಿಕೆ ಶಿವಕುಮಾರ್ ಅವರಿಗೆ ಅವಕಾಶ ನೀಡಬೇಕೆಂಬುದು ನನ್ನ ಅಭಿಪ್ರಾಯ. ಪಕ್ಷದ ಹೈಕಮಾಂಡ್ ಹೇಳಿದಂತೆ ನಾವೆಲ್ಲಾ ಕೇಳುತ್ತೇವೆ. ಅಧಿಕಾರ ಹಂಚಿಕೆ ಮಾತುಕತೆ ನಮ್ಮ ಮುಂದೆ ಆಗಿಲ್ಲ. ಒಂದು ವೇಳೆ ಮಾತುಕತೆ ನಡೆದಿದ್ರೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ, ಡಿಕೆಶಿ ಇಬ್ಬರೂ ನಾಯಕರೇ. ಕಾಂಗ್ರೆಸ್ ಪಕ್ಷದಲ್ಲಿ ಪರ, ವಿರೋಧ ಬಣ, ಗುಂಪುಗಳಿಲ್ಲ. ಇಲ್ಲಿ ಯಾರದ್ದು ವೈಯಕ್ತಿಕ ನಿರ್ಧಾರ ಅಂತಿಮವಲ್ಲ, ಪಕ್ಷದ ನಿರ್ಧಾರ ಅಂತಿಮ ಎಂದು ಮದ್ದೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಹೇಳಿದ್ದಾರೆ.
ಶಾಸಕರ ಸಂಖ್ಯೆ ಮೇಲೆ ಏನು ನಿರ್ಧಾರವಾಗಲ್ಲ- ಕದಲೂರು ಉದಯ್
ಶಾಸಕರ ಸಂಖ್ಯೆ ಆಧಾರದ ಮೇಲೆ ಏನು ನಿರ್ಧಾರ ಆಗಲ್ಲ ಎಂದು ಕದಲೂರು ಉದಯ್ ಹೇಳಿದ್ದಾರೆ. ಈ ಮೂಲಕ
ಪರೋಕ್ಷವಾಗಿ ಡಿಕೆಶಿ ಸಿಎಂ ಆಗಲು ಶಾಸಕ ಸಂಖ್ಯೆ ಬೇಕಿಲ್ಲ ಎಂದು ಶಾಸಕ ಉದಯ್ ಹೇಳಿದಂತಾಗಿದೆ.
ಪಕ್ಷದ ಸಂಘಟನೆ ದೃಷ್ಟಿಯಿಂದ ಅವಕಾಶಗಳು ಸಿಗಲಿದೆ. ಸತೀಶ್ ಜಾರಕಿಹೊಳಿ ಟೀಂನಿಂದ ಡಿನ್ನರ್ ಪಾಲಿಟಿಕ್ಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಕದಲೂರು ಉದಯ್, ಊಟಕ್ಕೆ ಸೇರುವುದು ಸಾಮಾನ್ಯ, ಹೆಚ್ಚಿನ ವಿಶೇಷತೆ ಇಲ್ಲ. ನಮ್ಮಲ್ಲಿ ಗೊಂದಲ ಇಲ್ಲ, ಗೊಂದಲ ಸೃಷ್ಟಿಸುತ್ತಿರುವುದು ವಿರೋಧ ಪಕ್ಷ.
ಗೊಂದಲಗಳಿಗೆ ತೆರೆ ಎಳೆಯುವುಂತೆ ಕೇಳಿಕೊಂಡು ದೆಹಲಿಗೆ ಹೋಗಿದ್ದಾರೆ ಎಂದು ಮದ್ದೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಹೇಳಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us