ಸರ್ಕಾರದ ಸ್ಥಳಗಳಲ್ಲಿ ಆರ್​ಎಸ್​ಎಸ್​ನ ಎಲ್ಲ ಚಟುವಟಿಕೆಗಳನ್ನು ನಿಷೇಧ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಸದ್ಯ ಈ ಸಂಬಂಧ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಅವರು ಮಾತನಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಅವರು, ಪ್ರಿಯಾಂಕ್ ಖರ್ಗೆ ಅವರಿಗೆ ತಾಕತ್ ಇದ್ದರೇ, ಸಂಘ ಪರಿವಾರದ ಅಂಗಸಂಸ್ಥೆಗಳನ್ನು ಬ್ಯಾನ್ ಮಾಡಲಿ. ಸವಾಲು ಹಾಕಿದ್ದೇನೆ. ತಾಕತ್ ಇದ್ದರೇ ಬ್ಯಾನ್ ಮಾಡಿ. ನಾಗರಿಕರು ಸಂಕಷ್ಟದಲ್ಲಿ ಇದ್ದಾಗ ಸಂಘ ಪರಿವಾರದವರು ಜೀವ ಪಣಕ್ಕಿಟ್ಟು ಜೀವಗಳನ್ನು ಉಳಿಸಿದ್ದಾರೆ. ಚಾಕು, ಚೂರಿ, ಚೈನ್ ಇದ್ದವರು ಪ್ರಿಯಾಂಕ್ ಖರ್ಗೆಗೆ ಬ್ರದರ್ಸ್​ ಎಂದು ಟೀಕೆ ಮಾಡಿದ್ದಾರೆ.
ಸಂಘ ಪರಿವಾರ ಯಾವಾಗಲೂ ನಿಸ್ವಾರ್ಥ ಸೇವೆಗಳನ್ನು ಮಾಡುತ್ತದೆ. ಕಲಬುರಗಿ ಜಿಲ್ಲೆ ಶಿಕ್ಷಣ ಸೇರಿದಂತೆ ಅಭಿವೃದ್ಧಿ ಕೆಲಸಗಳಲ್ಲಿ ತುಂಬಾ ಇದೆ. ನೀವು, ನಿಮ್ಮ ತಂದೆಯವರು ಮೊದಲು ಅಭಿವೃದ್ಧಿ ಕಡೆಗೆ ಹೆಚ್ಚಿನ ಆದ್ಯತೆ ಕೊಡಿ. ದ್ರೋಹಿಗಳು ಪಾಕಿಸ್ತಾನ ಜಿಂದಾಬಾದ್ ಎಂದಾಗ, ಹಿಂದೂ ಯುವಕರನ್ನು ಹತ್ಯೆ ಮಾಡಿದಾಗ ನಿಮ್ಮ ಪೌರುಷ ಎಲ್ಲಿ ಹೋಗಿತ್ತು ಎಂದು ಎಂ.ಪಿ ರೇಣುಕಾಚಾರ್ಯ ಅವರು ಪ್ರಶ್ನೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ