/newsfirstlive-kannada/media/media_files/2025/11/28/nanjavadootha-swamiji02-2025-11-28-12-34-41.jpg)
ಡಿ.ಕೆ.ಶಿವಕುಮಾರ್ ಅವರಿಗೂ ಸಿಎಂ ಸ್ಥಾನದ ಒಂದು ಅವಕಾಶ ಕೊಡಲಿ ಎಂದು ಶಿರಾದ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಕಾಂಗ್ರೆಸ್ ಹೈಕಮ್ಯಾಂಡ್ ಗೆ ಆಗ್ರಹಿಸಿದ್ದಾರೆ. ಡಿ.ಕೆ. ಶಿವಕುಮಾರ್ ಸಮುದಾಯದ ಅಗ್ರಗಣ್ಯ ನಾಯಕ. ಆ ಪಕ್ಷಕ್ಕೆ ಕೊಟ್ಟ ಕೊಡುಗೆ ಮರೆಯಲಾಗಲ್ಲ. ಅವರು ಪಟ್ಟ ನೋವು ಯಾರು ಪಟ್ಟಿಲ್ಲ . ಬಹಳ ಇಕ್ಕಟ್ಟಿನ ವೇಳೆ ಅಧ್ಯಕ್ಷ ಸ್ಥಾನ ಕೊಟ್ಟರು. ಆ ಸಂದರ್ಭದಲ್ಲೂ ಎದೆಗುಂದದೆ ಪಕ್ಷ ಕಟ್ಟಿದ್ದರು. ಸೋನಿಯಾ,ರಾಹುಲ್ ಕುಟುಂಬಕ್ಕೆ ನಿಷ್ಠೆಯಿಂದ ಇದ್ದಾರೆ . ಸಿದ್ದರಾಮಯ್ಯ ಸಹಯೋಗದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರು. ನಾವು ಕೇಳೋದು ಇಷ್ಟೇನೇ. ಅಹಿಂದ ಇರಬಹುದು, ಒಕ್ಕಲಿಗರು ಏನು ಮಾಡಬೇಕು . ಅವರಿಗೂ ಒಂದು ಅವಕಾಶ ಕೊಡಬೇಕು . ದೇವರಾಜ ಅರಸು ಎಲ್ಲ ಸಮುದಾಯ ಗುರುತಿಸಿದ್ದರು. ಇಂದಿನ ದಿನಮಾನದಲ್ಲಿ ಯಾರು ಸಹಾಯಕ್ಕೆ ಬರಲ್ಲ . ನಾವು ಕೇಳೋದು ಎಲ್ಲ ವರ್ಗಕ್ಕೂ ಸಲ್ಲುವವರು . ಮೊದಲ ಅವಧಿಯಲ್ಲಿ ಸಿಎಂ ಆಗ್ತಾರೆ ಅಂದು ಕೊಂಡಿದ್ದೇವು, ಸಿದ್ದರಾಮಯ್ಯನವರು ಹಿರಿಯರಿದ್ದಾರೆ . ಅವರಿಗೆ 75 ವರ್ಷ ಆಗಿದೆ . ಅವರಿಗೆ ಅವಕಾಶ ಕೊಡಬೇಕು ಅಂತ ಕೊಟ್ಟರು. ಎರಡೂವರೆ ವರ್ಷಕ್ಕೆ ಸಿಎಂ ಆಗಲಿ ಅಂತ ಮಾಡಿದ್ದಾರೆ. ಅವರ ಹೈಕಮಾಂಡ್ ಮಾತು ಕೊಟ್ಟಿದ್ದರು. ಎಲ್ಲಾ ವರ್ಗ ಸಮಾಜ ಡಿ.ಕೆ. ಶಿವಕುಮಾರ್ ಪರ ಇದೆ. ಮೊದಲು ಅಲ್ಲಿ ಇತ್ಯರ್ಥ ಆಗಲಿ. ಶಿವಕುಮಾರ್ ಗೂ ಒಂದು ಅವಕಾಶ ಕೊಡಲಿ ಎಂದು ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/11/28/nanjavadootha-swamiji-met-dk-shivakuamr-2025-11-28-12-41-28.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us