ಸತೀಶ್​ ಜಾರಕಿಹೊಳಿ ಮುಂದಿನ ಸಿಎಂ ಆಗಲಿ
ಸಿಎಂ ಸಿದ್ದರಾಮಯ್ಯ ಉತ್ತರಾಧಿಕಾರಿ ಎಂದು ವಿಧಾನ ಪರಿಷತ್​ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಸಚಿವ ಜಾರಕಿಹೊಳಿ ಪರ ನಿಜಗುಣಾನಂದ ಪ್ರಭು ಸ್ವಾಮೀಜಿ ಮಾತನಾಡಿದ್ದಾರೆ. ರಾಜ್ಯದ ಭವಿಷ್ಯಗಳೆಲ್ಲವೂ ಸಹ ಸತೀಶ್ ಜಾರಕಿಹೊಳಿ ಕಣ್ಮುಂದೆ ನಡೆಯಲಿ ಎಂದು ಸಚಿವ ಸತೀಶ್​ ಜಾರಕಿಹೊಳಿ ಸಿಎಂ ಆಗಲಿ ಎಂದು ನಿಜಗುಣಾನಂದ ಪ್ರಭು ಸ್ವಾಮೀಜಿ ಪರೋಕ್ಷವಾಗಿ ಶುಭ ಹಾರೈಸಿದ್ದಾರೆ.
ಕಿತ್ತೂರು ಕೋಟೆಯಲ್ಲಿ ನಡೆದ ಕಿತ್ತೂರು ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬೈಲೂರುಮಠದ ನಿಜಗುಣಪ್ರಭು ಸ್ವಾಮೀಜಿ ಅವರು, ಸತೀಶ್ ಜಾರಕಿಹೊಳಿ ಸೇವೆ ಮೌನದ ಸೇವೆ, ಒಳ್ಳೆಯ ಮುತ್ಸದ್ಧಿ ಅವ್ರು, ಒಳ್ಳೆಯ ರಾಜಕಾರಣಿ ಆಗಿದ್ದಾರೆ. ಮುಂದಿನ ರಾಜ್ಯದ ಭವಿಷ್ಯಗಳೆಲ್ಲವೂ ಸಹ ಅವರ ಕಣ್ಣಮುಂದೆ ನಡೆಯಲಿ ಎಂದು ಪರೋಕ್ಷವಾಗಿ ಸತೀಶ್​ ಜಾರಕಿಹೊಳಿ ಸಿಎಂ ಆಗಲಿ ಎಂದು ನಿಜಗುಣಾನಂದ ಪ್ರಭು ಸ್ವಾಮೀಜಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us