ಉಪಚುನಾವಣೆಯಲ್ಲಿ ಯಾರು ಯಾರು ಎಲ್ಲೆಲ್ಲಿ ವ್ಯವಹಾರ ಮಾಡಿಕೊಂಡಿದ್ದರು ಅಂತ ನನಗೆ ಗೊತ್ತಿರಲಿಲ್ವಾ?. ಏನಣ್ಣ ನನ್ನ ದಡ್ಡ ಅಂದುಕೊಂಡು ಬಿಟ್ಟಿದ್ದೀರಾ?. ಈಗ ಹಾಲಿ ಶಾಸಕರಾಗಿ ಆಯ್ಕೆ ಆಗಿದ್ದರಾಲ್ಲ, ಮಂಡ್ಯ ಎಲೆಕ್ಷನ್​ ನಿಲ್ಲೋಕೆ ಹೋಗಿದ್ದರಲ್ಲ, ಅವರು ಈ ಹಿಂದೆ 7 ವರ್ಷ ಎಲ್ಲಿದ್ದರು?. ಎಷ್ಟು ವರ್ಷ ಎಂಎಲ್​ಎ ಸ್ಥಾನ ಕೊಟ್ಟಿದ್ದೀರಿ?. ನನಗೆ ಯಾವತ್ತಾದರೂ ಅಧಿಕಾರ ಕೊಟ್ಟಿದ್ದೀರಾ?. ನನಗೆ ಆಶೀರ್ವಾದ ಮಾಡಿದ್ದೀರಾ ಈಗ ಪ್ರಶ್ನೆ ಮಾಡೋಕೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶವಾಗಿ ಹೇಳಿದ್ದಾರೆ.
ನೀವು ಎಲ್ಲ ಕೇಳಿದ್ದೀರಿ ಎಂದು ನಾನು ಬಂದು ತಲೆ ಕೊಟ್ಟೆ. ಆದರೂ ನಾನು ಮನೆಯಲ್ಲಿ ಕುಳಿತ್ತಿಲ್ಲ. ಪಕ್ಷ ಕಟ್ಟೋಕೆ ಯಾರು ಆಗಲ್ಲ. ಯಾರು ಹೊಣೆ ಆಗಲ್ಲ. ಎಲ್ಲ ಕ್ಷೇತ್ರಗಳಲ್ಲಿ ಓಡಾಡುತ್ತಿದ್ದೇನೆ. ಮನಸಲ್ಲಿ ನೋವುಗಳಿವೆ. ಅವುಗಳನ್ನೆಲ್ಲ ಹೊರಗಡೆ ಹಾಕಲ್ಲ. ರಾಯಚೂರು, ಕಲಬುರಗಿ ಕಡೆ ಹೋಗಿ ನೋಡಿ ಮುಖ್ಯರಸ್ತೆಗಳೇ ಗುಂಡಿಗಳು ಬಿದ್ದಿವೆ. ಆದರೆ ಮಂಡ್ಯ ಕಡೆ ಗ್ರಾಮಗಳ, ಹಳ್ಳಿಗಳ ರಸ್ತೆಗಳಿಗೆ 1,200 ಕೋಟಿ ರೂಪಾಯಿ ಯೋಜನೆ ತಂದಿದ್ದೇವೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us