/newsfirstlive-kannada/media/media_files/2025/12/08/belgavi-suvarna-soudha-cm-2025-12-08-12-17-07.jpg)
ಸಿದ್ದು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಇಲ್ಲ!
ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಬಗ್ಗೆ ವಿರೋಧ ಪಕ್ಷಗಳು ಚರ್ಚೆ ನಡೆಸಿದ್ದವು. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದಲ್ಲಿ ಸಿಎಂ ಬಣ ಮತ್ತು ಡಿಸಿಎಂ ಬಣಗಳೆಂಬ 2 ಬಣಗಳಾಗಿವೆ. ಹೀಗಾಗಿ ಇಂಥ ಸ್ಥಿತಿಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದರೇ, ಕಾಂಗ್ರೆಸ್ ನ ಅಂತರಿಕ ಕಿತ್ತಾಟವನ್ನು ಅಧಿಕೃತವಾಗಿ ಬೀದಿಗೆ ತರಬಹುದು ಎಂಬ ಲೆಕ್ಕಾಚಾರ ವಿಪಕ್ಷಗಳ ಪಾಳಯದಲ್ಲಿ ಇತ್ತು. ಆದರೇ, ವಿರೋಧ ಪಕ್ಷಗಳ ಬಳಿ 85 ಕ್ಕಿಂತ ಹೆಚ್ಚಿನ ಶಾಸಕರ ಬೆಂಬಲ ಇಲ್ಲ. ಏನಿದ್ದರೂ ಅವಿಶ್ವಾಸ ನಿರ್ಣಯ ಮಂಡಿಸಿ, ಸರ್ಕಾರದ ವಿರುದ್ಧ ಚರ್ಚೆ ಮಾಡಲು ಅವಕಾಶ ಪಡೆಯಲ್ಲಷ್ಟೇ ವಿರೋಧ ಪಕ್ಷಗಳು ಸೀಮಿತವಾಗಬೇಕಾಗಿತ್ತು.
ಆದರೇ, ಈಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಿಂದ ಹಿಂದೆ ಸರಿಯಲು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಿರ್ಧರಿಸಿವೆ.
ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ ಕುಮಾರಸ್ವಾಮಿ ಸಲಹೆಯಂತೆ ಅವಿಶ್ವಾಸ ನಿರ್ಣಯ ಮಂಡನೆಯಿಂದ ವಿರೋಧ ಪಕ್ಷಗಳು ಹಿಂದೆ ಸರಿದಿವೆ. ನಾವು ಅವಿಶ್ವಾಸ ನಿರ್ಣಯ ಮಂಡಿಸಿದರೆ ಕಾಂಗ್ರೆಸ್ ನಲ್ಲಿ ಒಗ್ಗಟ್ಟು ಮೂಡಲಿದೆ. ಸರ್ಕಾರದಲ್ಲಿನ ಗೊಂದಲ ಜನರಿಗೆ ತಲುಪಲಿ. ನಾವು ಅವಿಶ್ವಾಸ ನಿರ್ಣಯ ಮಂಡಿಸಿ ಕಾಂಗ್ರೆಸ್ ಶಾಸಕರ ಒಗ್ಗಟ್ಟಿಗೆ ಕಾರಣ ಆಗೋದು ಬೇಡ . ಹೀಗಾಗಿ ಈ ನಿರ್ಧಾರವನ್ನ ಕೈಬಿಡಿ ಎಂದು ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದರು. ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಸುರೇಶ್ ಬಾಬುಗೆ ಸಲಹೆ ನೀಡಿದ್ದರು. ಇದರಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಈ ಚಳಿಗಾಲದ ಅಧಿವೇಶನದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುತ್ತಿಲ್ಲ.
/filters:format(webp)/newsfirstlive-kannada/media/media_files/2025/12/05/kiadb-new-head-office03-2025-12-05-13-37-07.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us