ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಗೃಹ ಸಚಿವ ಪರಮೇಶ್ವರ್​ ಹೊಸ ಬಾಂಬ್ ಸಿಡಿಸಿದ್ದಾರೆ. ನಾನು ಸಿಎಂ ಆಕಾಂಕ್ಷಿ ಎನ್ನುವ ಮೂಲಕ ಪರಮೇಶ್ವರ್ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ಅಲ್ಲದೇ ಸತೀಶ್ ಜಾರಕಿಹೊಳಿ ಮನೆಯಲ್ಲಿ ಊಟಕ್ಕೆ ಸೇರಿ ಇಲಾಖಾವಾರು ಚರ್ಚೆ ಮಾಡ್ತೀವಿ. ಹಾಗೆ ಸೇರಿದಾಗ ರಾಜಕೀಯನೂ ಮಾತಾಡಿರ್ತೀವಿ. ನಮ್ಮಲ್ಲಿ ಹೈಕಮಾಂಡ್ ಸ್ಟ್ರಾಂಗ್ ಇದೆ. ಇಲ್ಲಿವರೆಗೂ ಲೀಡರ್ ಶಿಪ್ ಬದಲಾವಣೆ ಬಗ್ಗೆ ಹೈಕಮಾಂಡ್ ಹೇಳಿಲ್ಲ. ಬೇರೆಯವರು ಮಾತಾಡೋದಕ್ಕೆ ಬೆಲೆ ಇಲ್ಲ. ಸಿಎಂ ಅವರೇ ಐದು ವರ್ಷ ಸಿಎಂ ಆಗ್ತೀರ್ತೀನಿ ಅಂತ ಹೇಳಿದ್ದಾರೆ. ನನಗೂ ಮೊದಲಿನಿಂದಲೇ ಸಿಎಂ ಆಗಬೇಕು ಅನ್ನೋ ಆಸೆ ಇದೆ. ಬದಲಾವಣೆ ವಿಚಾರ ಬಂದಾಗ ನೋಡೋಣ ಎಂದು ಪರಮೇಶ್ವರ್​ ಹೇಳಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us