Advertisment

ದಲಿತ ಸಿಎಂ ಚರ್ಚೆ ಮಧ್ಯೆ ಪರಮೇಶ್ವರ್ ಡೆಲ್ಲಿ ಟೂರ್! : ನಾನು ಸಿಎಂ ಸ್ಥಾನಕ್ಕೆ ಸಮರ್ಥ.. ಕೇಳೋದ್ರಲ್ಲಿ ತಪ್ಪೇನಿದೆ?

ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಡಜನ್ ಮಂದಿ ಆಕಾಂಕ್ಷಿಗಳಿದ್ದಾರೆ. ದಲಿತ ಸಿಎಂ ಚರ್ಚೆ ಮಧ್ಯೆ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ನಾನು ಸಿಎಂ ಸ್ಥಾನಕ್ಕೆ ಸಮರ್ಥ. ನನ್ನ ಸಾಮರ್ಥ್ಯ ಪ್ರಶ್ನಾತೀತ. ನಾನು ಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

author-image
Chandramohan
ಕಾಂಗ್ರೆಸ್​​ನಲ್ಲಿ ಗುಂಪುಗಾರಿಕೆ; ಡಿಕೆಶಿಗೆ ಬಿಗ್​ ಶಾಕ್; ಸತೀಶ್​​ ಜಾರಕಿಹೊಳಿ ಮನೆಯಲ್ಲಿ ರಹಸ್ಯ ಸಭೆ!

ನಾನು ಸಿಎಂ ಸ್ಥಾನಕ್ಕೆ ಸಮರ್ಥ ಎಂದ ಡಾ.ಜಿ.ಪರಮೇಶ್ವರ್‌

Advertisment
  • ನಾನು ಸಿಎಂ ಸ್ಥಾನಕ್ಕೆ ಸಮರ್ಥ ಎಂದ ಡಾ.ಜಿ.ಪರಮೇಶ್ವರ್‌
  • ದೆಹಲಿ ಯಾತ್ರೆ ಕೈಗೊಂಡ ಡಾ.ಜಿ.ಪರಮೇಶ್ವರ್‌


ಸರ್ಕಾರ ಬಂದು ಎರಡೂವರೆ ವರ್ಷ ಕಳೆದ್ರೂ ರಾಜ್ಯ ಕಾಂಗ್ರೆಸ್​​​ನಲ್ಲಿ ನಾಯಕತ್ವ ಗೊಂದಲ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.. ಸಿಎಂ-ಡಿಸಿಎಂ ಕುರ್ಚಿ ಚೌಕಾಸಿ ನಡುವೆ ದಲಿತಾಸ್ತ್ರ ದಿಢೀರ್ ತೂರಿ ಬಂದಿದೆ.. ಮೊನ್ನೆ ಸಾಹುಕಾರ್ ದಿಲ್ಲಿ ವಿಸಿಟ್ ಬೆನ್ನಲ್ಲೇ ಈಗ ಗೃಹಸಚಿವ ಪರಮೇಶ್ವರ್ ಕೂಡ ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ.. ನಾನು ಪಕ್ಷದ ಶಿಸ್ತಿನ ಸಿಪಾಯಿ, ನಾನೂ ಕೂಡ ಸಮರ್ಥ ಎಂಬ ಸಂದೇಶ ರವಾನಿಸಿದ್ದಾರೆ.. 
ಇದು ರಾಜ್ಯ ರಾಜಕೀಯದ ಬಿಗ್ ಬಾಸ್​ ಪಟ್ಟಕ್ಕೆ ನಡೆಯುತ್ತಿರುವ ಹಣಾಹಣಿ..  ರಾಜಕೀಯ ಗರಡಿಯಲ್ಲಿ ಅಧಿಕಾರದ ಬಟ್ಟಲು ತುಂಬಿಸುವ ಕಾಯಕ ಜೋರಾಗಿದೆ.. ಸಿಎಂ-ಡಿಸಿಎಂ ನಡುವೆ ಪ್ರಹಸನಕ್ಕೆ ಇನ್ನೂ ತೆರೆ ಬಿದ್ದಿಲ್ಲ.. ಈ ಮಧ್ಯೆ ದುತ್ತನೇ ಎದ್ದಿರುವ ದಲಿತ ಸಿಎಂ ಕೂಗು ಗುಟುರು ಹಾಕಿದೆ.. ಡಿಕೆಶಿ ಚಕ್ರವ್ಯೂಹವನ್ನು ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಹಸ್ತದೊಳಗಿರುವ ಬಣ ಕಸರತ್ತು ನಡೆಸ್ತಿದೆ.
ದಲಿತ ಸಿಎಂ ಚರ್ಚೆ ಮಧ್ಯೆ ಪರಮೇಶ್ವರ್ ಡೆಲ್ಲಿ ಟೂರ್!
ದೆಹಲಿಯಲ್ಲಿ ವರಿಷ್ಠರ ಭೇಟಿ ಬಗ್ಗೆ ಗೃಹಸಚಿವ ಮಾಹಿತಿ
ಕರ್ನಾಟಕದ ಸಿಎಂ ಸಿಂಹಾಸನ ಗಿಟ್ಟಿಸಲು ಕನಕಾಧಿಪತಿ ಡಿಕೆಶಿ ಹೆಣೆದ ಸಕಲ ವಿದ್ಯೆಗಳು ಫಲ ಕೊಡುವ ಘಳಿಗೆ ಬಂದ್ರೂ ಕಂಕ್ಲೂಷನ್ ಸಿಕ್ಕಿಲ್ಲ.. ಈ ಮಧ್ಯೆ ಮೊನ್ನೆ ಸಿಎಂ ಕ್ಯಾಂಪ್​ನ ಮಿತ ಮಾತುಗಾರ, ಅಗ್ರೆಸ್ಸೀವ್ ಸಚಿವ ಸತೀಶ್ ಜಾರಕಿಹೊಳಿ ಸೈಲೆಂಟ್ ಆಗಿಯೇ ಡೆಲ್ಲಿಗೆ ಹೋಗಿ ಕ್ಯಾಪ್ಟನ್ಸಿ ಚೇಂಜ್​ ಮಾಡುವಂತೆ  ಹಕ್ಕೊತ್ತಾಯ ಮಂಡಿಸಿ ಬಂದಿದ್ದಾರೆ.. ಗದ್ದುಗೆ ಗುದ್ದಾಟದಲ್ಲಿ ಮೊದಲಿಂದಲೂ ಟೀಂನಲ್ಲಿದ್ರೂ ಸುಮ್ಮನಿದ್ದ ಹೋಂ ಮಿನಿಸ್ಟರ್  ಪರಮೇಶ್ವರ್ ಇದೀಗ ದಿಢೀರ್ ಎಂಟ್ರಿ ಕೊಟ್ಟು ನನಗೂ ಬ್ಯಾಟಿಂಗ್ ಕೊಡಿ ಎಂದಿದ್ದಾರೆ.. ದಲಿತ ಸಿಎಂ ವಿಚಾರ ಬಂದ್ರೆ ನಾನೇ ಫ್ರಂಟ್​ಲೈನ್ ಅನ್ನೋದನ್ನು ವರಿಷ್ಠರಿಗೆ ಮನದಟ್ಟು ಮಾಡುವ ಪ್ಲಾನ್ ಮಾಡಿದ್ದಾರೆ.. ಇನ್ನು ಖರ್ಗೆಯವರನ್ನ ಬೆಂಗಳೂರಲ್ಲೇ ಭೇಟಿ ಮಾಡ್ತೀನಿ ಎಂದಿದ್ದಾರೆ.
ನಾನು ಸಿಎಂ ಸ್ಥಾನಕ್ಕೆ ಸಮರ್ಥ.. ಕೇಳೋದ್ರಲ್ಲಿ ತಪ್ಪೇನಿದೆ?
ನನ್ನ ಸಾಮರ್ಥ್ಯ ಪ್ರಶ್ನಾತೀತ ಎಂದ ಗೃಹಸಚಿವ ಪರಮೇಶ್ವರ್
ಸಿಎಂ, ಡಿಸಿಎಂರಂತೆ ನನಗೂ ಕೂಡ ಫೇಸ್​ ಬ್ಯಾಟ್ಸ್​ಮನ್ ಆಗಲು ಎಬಿಲಿಟಿ ಇದೆ ಅಂತ ಗೃಹಸಚಿವ ಪರಮೇಶ್ವರ್ ಹೇಳಿದ್ದಾರೆ.. ನಾನು ಪಕ್ಷದ ಶಿಸ್ತಿನ ಸಿಪಾಯಿ, 8 ವರ್ಷ ಅಧ್ಯಕ್ಷ, ಡಿಸಿಎಂ ಆಗಿದ್ದೀನಿ, ಸಾಮರ್ಥ್ಯ ಇಲ್ಲದೇ ಇದೆಲ್ಲಾ ಆಗಿದ್ದೀನಾ,  ಕೇಪೆಬಲ್ ಇದ್ದೀನಿ, ನಾನು ಪ್ರಶ್ನಾತೀತ ಅಂತ ಗುಟುರು ಹಾಕಿದ್ದಾರೆ.
ದಲಿತ ಸಿಎಂ ಬಗ್ಗೆ ಮಾತನಾಡಲು ಪ್ರಿಯಾಂಕ್ ನಿರಾಸಕ್ತಿ!
ಏನ್ ಮಾತಾಡಿದ್ರೂ ಕಷ್ಟ.. ಹೈಕಮಾಂಡ್​​ನತ್ತ ಬೊಟ್ಟು!
ಇತ್ತ ದಲಿತ ಸಿಎಂ ಬಗ್ಗೆ ಕೇಳಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಸ್ವಲ್ಪ ಕನ್​ಫ್ಯೂಸ್​ ಆದಂತೆ ಕಾಣಿಸ್ತು.. ಉತ್ತರ ಕೊಡೋಕೆ ಹಿಂಜರಿದ ಮಿನಿಸ್ಟರ್ ಹೈಕಮಾಂಡ್ ನೋಡ್ಕೊಳ್ಳುತ್ತೆ ಬಿಡಿ ಅಂತ ಫುಲ್ ಸ್ಟಾಪ್ ಇಟ್ರು.. ಆದ್ರೆ ಯಾರೇ ಸಿಎಂ ಆದ್ರೂ ಅಂಬೇಡ್ಕರ್ ಸಂವಿಧಾನದ ಅನುಷ್ಠಾನ ಗ್ಯಾರಂಟಿ ಅನ್ನೋದನ್ನು ಸ್ಪಷ್ಟಪಡಿಸಿದ್ರು.

Advertisment

‘ಮಾತಾಡಿದ್ರೂ ಕಷ್ಟ, ಮಾತಾಡದಿದ್ರೂ ಕಷ್ಟ
‘ಫೈನಲಿ ಹೈಕಮಾಂಡ್ ನಿರ್ಧಾರ ಮಾಡುತ್ತೆ’   

ಒಟ್ಟಾರೆ, ರಾಜ್ಯ ಕಾಂಗ್ರೆಸ್​​ನಲ್ಲಿ ಸಿಎಂ ಸ್ಥಾನಕ್ಕೆ ಡಜನ್​​ಗಟ್ಟಲೇ ಎಲಿಜಬಲ್ ಇದ್ದಾರೆ.  ನಾಲ್ಕೈದು ದಶಕಗಳ ಕಾಲ ಕಾಂಗ್ರೆಸ್​​ನಲ್ಲೇ ಉಂಡೆದ್ದು ಈಗ ಸಂಧ್ಯಾಕಾಲದಲ್ಲಿದ್ರೂ ಸಿಎಂ ಪಟ್ಟದ ಆಸೆಯಂತೂ ಇದ್ದೇ ಇದೆ.. ಒಂದ್ಕಡೆ ಪವರ್​ ಶೇರಿಂಗ್, ಮತ್ತೊಂದ್ಕಡೆ ಮಂತ್ರಿ ಸ್ಥಾನಕ್ಕಾಗಿ 31 ಶಾಸಕರ ಪತ್ರ, ಇತ್ತ ಸತೀಶ್ ಜಾರಕಿಹೊಳಿ ಕೆಪಿಸಿಸಿ ಕುರ್ಚಿಗಾಗಿ ದಾಳ ಉರುಳಿಸಿದ್ದಾರೆ.. ಸಂಕ್ರಾತಿ, ಶಿವರಾತ್ರಿ ಮುಗಿದು ಇನ್ನೇನು ಯುಗಾದಿ ಬರ್ತಿದೆ.. ವಿಶ್ವಾವಸು ಸಂವತ್ಸರ ಮುಗಿದು, ಪರಾಭವ ಸಂವತ್ಸರದ ಹೊತ್ತಿಗೆ ರಾಜ್ಯ ರಾಜಕಾರಣದಲ್ಲಿ ಮನ್ವಂತರದ ಗಾಳಿ ಬೀಸುತ್ತಾ ಅನ್ನೋದೇ ಸದ್ಯದ ಕುತೂಹಲ..

ಹರೀಶ್ ಕಾಕೋಳ್, ಪೊಲಿಟಿಕಲ್ ಬ್ಯೂರೋ, ನ್ಯೂಸ್​​ಫಸ್ಟ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dr G Parameshwar CM CHAIR FIGHTING IN CONGRESS
Advertisment
Advertisment
Advertisment