/newsfirstlive-kannada/media/media_files/2025/10/24/piyush-pandey-no-more-2025-10-24-12-05-31.jpg)
ಜಾಹೀರಾತು ಲೋಕದ ದಿಗ್ಗಜ ಪಿಯೂಶ್ ಪಾಂಡೆ ಇನ್ನಿಲ್ಲ
ಭಾರತದ ಜಾಹೀರಾತು ಕ್ಷೇತ್ರದ ದಿಗ್ಗಜ ಪಿಯೂಶ್ ಪಾಂಡೆ ಇನ್ನಿಲ್ಲ. ಇಂದು ಬೆಳಿಗ್ಗೆ ಪಿಯೂಶ್ ಪಾಂಡೆ ವಿಧಿವಶರಾಗಿದ್ದಾರೆ. ಭಾರತದ ಜಾಹೀರಾತು ಕ್ಷೇತ್ರ ಪಿಯೂಶ್ ಪಾಂಡೆ ನಿಧನಕ್ಕೆ ಕಂಬನಿ ಮಿಡಿದಿದೆ. ಅಬ್ ಕೀ ಬಾರ್ ಮೋದಿ ಸರ್ಕಾರ್ ಎಂದು 2014 ರಲ್ಲಿ ಬಿಜೆಪಿಗೆ ಚುನಾವಣಾ ರಾಜಕೀಯದ ಹೊಸ ಸ್ಲೋಗನ್ ನೀಡಿದ್ದು ಇದೇ ಪಿಯೂಶ್ ಪಾಂಡೆ. 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಕೇಂದ್ರದಲ್ಲಿ ಪ್ರಧಾನಿ ಸ್ಥಾನಕ್ಕೇರುವಲ್ಲಿ ಬಿಜೆಪಿಯ ಜಾಹೀರಾತುಗಳನ್ನು ರೂಪಿಸಿದ್ದು ಇದೇ ಪಿಯೂಶ್ ಪಾಂಡೆ.
ಕಳೆದ ನಾಲ್ಕು ದಶಕಗಳಿಂದ ಬ್ಯುಸಿನೆಸ್, ಉದ್ಯಮ, ರಾಜಕೀಯ ಜಾಹೀರಾತುಗಳಲ್ಲಿ ಪಿಯೂಶ್ ಪಾಂಡೆ ತಮ್ಮದೇ ಆದ ಛಾಪು ಮೂಢಿಸಿದ್ದರು. ಆದರೆ, ಕಳೆದ ಒಂದು ತಿಂಗಳಿನಿಂದ ಪಿಯೂಶ್ ಪಾಂಡೆ ಕೋಮಾದಲ್ಲಿದ್ದರು.
1982 ರಲ್ಲಿ ಪಿಯೂಶ್ ಪಾಂಡೆ ಓಗಲೀವ್ ಮತ್ತು ಮಾಥರ್ ಇಂಡಿಯಾ ಕಂಪನಿಯಲ್ಲಿ ಜಾಹೀರಾತು ಲೋಕದ ಪ್ರಯಾಣವನ್ನು ಆರಂಭಿಸಿದ್ದರು. ಆಗ ಟ್ರೇನಿ ಅಕೌಂಟ್ ಎಕ್ಸಿಕ್ಯೂಟೀವ್ ಆಗಿದ್ದರು. ಬಳಿಕ ಕ್ರಿಯೇಟೀವ್ ಡಿಪಾರ್ಟ್ ಮೆಂಟ್ ಗೆ ಸೇರಿಕೊಂಡರು. ಬಳಿಕ ನ್ಯಾಷನಲ್ ಕ್ರಿಯೇಟೀವ್ ಡೈರೆಕ್ಟರ್, ಎಕ್ಸಿಕ್ಯೂಟೀವ್ ಚೇರ್ ಮೆನ್, ಗ್ಲೋಬಲ್ ಚೀಫ್ ಕ್ರಿಯೇಟೀವ್ ಆಫೀಸರ್ ಹುದ್ದೆಗಳಿಗೆ ಹಂತ ಹಂತವಾಗಿ ಏರಿದ್ದರು.
ತಮ್ಮ 27ನೇ ವಯಸ್ಸಿನಲ್ಲಿ ಜಾಹೀರಾತು ಲೋಕ ಪ್ರವೇಶಿಸಿದ ಪಿಯೂಶ್ ಪಾಂಡೆ, ಜಾಹೀರಾತು ಉದ್ಯಮವನ್ನು ಬದಲಾಯಿಸಿದ್ದರು. ಏಷಿಯನ್ ಪೇಂಟ್ಸ್, ಕ್ಯಾಡಬರೀ, ಫಿವಿಕಲ್, ಹಚ್ ಸೇರಿದಂತೆ ಅನೇಕ ಕಂಪನಿಗಳ ಜಾಹೀರಾತುಗಳಿಗೆ ಸಾಂಸ್ಕೃತಿಕ ಟಚ್ ನೀಡಿದ್ದರು.
ರಾಜಸ್ಥಾನದ ಜೈಪುರದಲ್ಲಿ ಹುಟ್ಟಿದ ಪಿಯೂಶ್ ಪಾಂಡೆ ತಮ್ಮ ಸೋದರ ಪ್ರಶೂನ್ ಜೊತೆ ಸೇರಿಕೊಂಡು ರೇಡಿಯೋ ಜಿಂಗಲ್ಸ್ ಗಳಿಗೆ ವಾಯ್ಸ್ ಕೊಡುತ್ತಿದ್ದರು. ಬಳಿಕ 1982 ರಲ್ಲಿ ಓಗಲೀವ್ ಮತ್ತು ಮಾಥರ್ ಇಂಡಿಯಾ ಕಂಪನಿ ಸೇರಿದ್ದರು.
/filters:format(webp)/newsfirstlive-kannada/media/media_files/2025/10/24/piyush-pandey-no-more02-2025-10-24-12-08-27.jpg)
ಪಿಯೂಶ್ ಪಾಂಡೆ ನಿಧನಕ್ಕೆ ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಪಿಯೂಶ ಪಾಂಡೆ ಭಾರತದ ಜಾಹೀರಾತು ಲೋಕದ ಟೈಟಾನ್ ಮತ್ತು ದಂತಕಥೆ ಎಂದು ನಿರ್ಮಲಾ ಸೀತಾರಾಮನ್ ಬಣ್ಣಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us