/newsfirstlive-kannada/media/media_files/2025/10/17/mla-muniratna-versus-kusuma02-2025-10-17-19-48-44.jpg)
ಕುಸುಮಾ ವರ್ಸಸ್ ಶಾಸಕ ಮುನಿರತ್ನ
Advertisment
- ಬೆಂಗಳೂರಿನ ಆರ್‌ಆರ್ ನಗರ ಕ್ಷೇತ್ರದಲ್ಲಿ ಪಟಾಕಿ ಹಂಚಿಕೆಗೆ ಪೊಲೀಸರ ತಡೆ!
- ಬಿಜೆಪಿ ಶಾಸಕ ಮುನಿರತ್ನರಿಂದ ಜನರಿಗೆ ಉಚಿತ ಪಟಾಕಿ ಹಂಚಿಕೆಗೆ ತಡೆ
- ಕುಸುಮಾ ಸೂಚನೆಯಿಂದಾಗಿ ಪಟಾಕಿ ಹಂಚಿಕೆಗೆ ತಡೆ ಎಂದ ಮುನಿರತ್ನ
- ರಾಜರಾಜೇಶ್ವರಿ ನಗರದಲ್ಲಿ ಶಾಸಕ ಮುನಿರತ್ನ ವರ್ಸಸ್ ಕುಸುಮಾ
ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ವಾರ್ ಮುಂದುವರಿದಿದೆ.
Advertisment
ಶಾಸಕ ಮುನಿರತ್ನ ಹಾಗೂ ಕುಸುಮಾ ನಡುವಿನ ಮುಸುಕಿನ ಗುದ್ದಾಟಕ್ಕೆ ಪಟಾಕಿ ಬಲಿ ಆಗಿದೆ.. ದೀಪಾವಳಿ ಹಬ್ಬದಲ್ಲಿ ವಿತರಣೆಗೆ ತಂದಿದ್ದ ಶಾಸಕ ಮುನಿರತ್ನ ಕಾರ್ಯಕ್ಕೆ ಸೋತ ಕುಸುಮಾ ಕಲ್ಲು ಹಾಕಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.. ಲಕ್ಷ್ಮಿ ದೇವಿ ನಗರದ ವಾರ್ಡ್​ನಲ್ಲಿರುವ ಶಾಸಕರ ಕಚೇರಿಗೆ ಬೀಗ ಬಿದ್ದಿದ್ದು, ಪೊಲೀಸರನ್ನ ನಿಯೋಜಿಸಲಾಗಿದೆ..
ಪಟ ಪಟ ಪಟಾಕಿ, ನಗುವಿನ ಚಟಾಕಿ.. ಆದ್ರೆ ಹಾರಿಸುವ ಮುನ್ನವೇ ಆರ್​​​ಆರ್​​​ ನಗರದಲ್ಲಿ ಮಹಾ ಭಾರತ ಶುರುವಾಗಿದೆ.. ಹೂವಿನ ತೋಟಕ್ಕೆ ಬಂದ ಡಿಕೆಶಿಗೆ ಆವತ್ತು ಅಡ್ಡ ನಿಂತು ಅಡ್ಡಿ ಮಾಡಿದ ಮುನಿರತ್ನಗೆ ಈಗ ಬುಡದಲ್ಲಿ ಎದುರಾಳಿ ಪಡೆ, ಲಕ್ಷ್ಮೀ ಪಟಾಕಿ ಸಿಡಿಸಿದೆ.. ಪೊಲೀಸರಿಗೆ ಸುರುಸುರ ಅಂತ ಬತ್ತಿ ಇಟ್ಟ ಕ್ಷಣವೇ ರಾಕೆಟ್​​ ರೀತಿ ಹಾರಿ ಬಂದು ಮುನಿರತ್ನ ಅಡ್ಡೆ ಸುತ್ತ ಭೂಚಕ್ರವಾಗಿ ಸುತ್ತಿದೆ..
ದೀಪಾವಳಿ ಹಬ್ಬಕ್ಕೆ ತಂದಿದ್ದ ಪಟಾಕಿ ಹಂಚದಂತೆ ತಡೆ
ಮುನಿರತ್ನ VS ಕುಸುಮಾ ಮಧ್ಯೆ ಬಾಣಬಿರುಸು ಯುದ್ಧ!
ದೀಪಾವಳಿ ಬೆಳಕಿನ ಹಬ್ಬ.. ಮಹಾಲಕ್ಷ್ಮೀಯ ಆರಾಧನೆ.. ಆದ್ರೆ, ರಾಜರಾಜೇಶ್ವರಿ ನಗರದ ಲಕ್ಷ್ಮಿ ದೇವಿ ನಗರದ ವಾರ್ಡ್​ನಲ್ಲಿ ಪಟಾಕಿ ಯುದ್ಧ ಶುರುವಾಗಿದೆ.. ಪಟಾಕಿ ಹಂಚಲು ತಂದಿರಿಸಿದ್ದ ಶಾಸಕರ ಕಚೇರಿಗೆ ಬೀಗ ಬಿದ್ದಿದ್ದು, ಆನೆ ಪಟಾಕಿ ಹಚ್ಚೋ ಆಸೆಯಲ್ಲಿದ್ದ ಮುನಿರತ್ನಗೆ ಅಟಂ ಬಾಂಬ್​ ಆಘಾತ ಸಿಕ್ಕಿದೆ.. ಪ್ರತೀ ವರ್ಷ ಪಟಾಕಿ ಹಂಚಿಕೆ ಮಾಡುತ್ತಿದ್ದ ಮುನಿರತ್ನಗೆ ಯಾವುದೇ ಕಾರಣಕ್ಕೂ ಉಚಿತವಾಗಿ ಪಟಾಕಿ ಹಂಚುವಂತಿಲ್ಲ ಅಂತ ತಾಕೀತು ಮಾಡಲಾಗಿದೆ..
Advertisment
ಕುಸುಮಾ ಸೂಚನೆ ಮೇರೆಗೆ ಪಟಾಕಿ ವಿತರಣೆಗೆ ತಡೆ!
ಪಟಾಕಿ ಹಂಚದಂತೆ ತಡೆ, ಕಚೇರಿಗೆ ಬೀಗ ಆರೋಪ!
ಹಬ್ಬಕ್ಕೆ ವಿತರಣೆ ಮಾಡಲು ಶಾಸಕ ಮುನಿರತ್ನ ತಂದಿದ್ದ ಪಟಾಕಿ ಹಂಚದಂತೆ ತಡೆಯಲಾಗಿದೆ.. ಪ್ರತಿ ವರ್ಷವೂ ಶಾಸಕ ಮುನಿರತ್ನ ಪಟಾಕಿ ವಿತರಣೆ ಮಾಡುತ್ತಿದ್ರು.. ಈಗ ಉಚಿತವಾಗಿ ಪಟಾಕಿ ವಿತರಿಸದಂತೆ ಪೊಲೀಸರು ನಿರ್ಬಂಧ ಹೇರಿದ್ದು, ಕಚೇರಿಗೆ ಬೀಗ ಹಾಕಿದ್ದಾರೆ.. ಬೀಗ ಹಾಕಿದ ಪೊಲೀಸರ ಜೊತೆ ವಾಗ್ವಾದ ನಡೆದಿದೆ.. ಇದಕ್ಕೆಲ್ಲಾ ಕಾಂಗ್ರೆಸ್ ನಾಯಕಿ ಕುಸುಮಾ ಕಾರಣ ಎಂಬ ಆರೋಪ ಕೇಳಿಬರ್ತಿದೆ..
ಸುಮಾರು 12 ವರ್ಷದಿಂದ ಪಟಾಕಿ ಹಂಚಿಕೆ ಮಾಡ್ತಾ ಬಂದಿದ್ದೇವೆ.. ಬಿಬಿಎಂಪಿ ಜಾಗ ಮಾಡಿದೆ, ಅಲ್ಲಿ ಖರೀದಿ ಮಾಡಿ ತಂದು ಕೊಡುವ ಕೆಲಸ ಮಾಡ್ತಿದ್ದೇವೆ.. ಮನೆಗೂ ತಲುಪಿಸುವಂತಿಲ್ಲ ಅಂತಲೂ ಹೇಳ್ತಿದ್ದಾರೆ.. ಪೊಲೀಸರು ಹೇಳ್ತಿರೋದು ಅವರೇ ಖುದ್ದು ಹೋಗಿ ಖರೀದಿ ಮಾಡಿ ತರಬೇಕು ಅಂತ ಹೇಳ್ತಿದ್ದಾರೆ.. ಇದರ ಉದ್ದೇಶ ಏನು ಅಂತ ಮುನಿರತ್ನ ಪ್ರಶ್ನಿಸ್ತಿದ್ದಾರೆ..
‘ಮನೆಗೆ ಕೊಡೋ ಹಾಗಿಲ್ವಂತೆ’
‘ಕುಸುಮಾಗೆ MLA ಆಗೋ ಹುಚ್ಚು’
ಈಗಾಗಲೇ ಪಟಾಕಿಗಳ ಕೂಪನ್ ಪಡೆದು ಮುನಿರತ್ನ ಕಚೇರಿ ಬಳಿಗೆ ಬಂದ ಮಹಿಳೆಯರು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.. ನಾವು ಪಟಾಕಿ ಹೊಡೆಯಬೇಕು. ಮುನಿರತ್ನ ಪಟಾಕಿ ಕೊಡಬೇಕು, ನಮ್ಮ ಮಕ್ಕಳು ಪಟಾಕಿ ಸಿಡಿಸಬೇಕು. ಬಡವರು ಹಬ್ಬ ಮಾಡಲು ಬಿಡಿ ಅಂತ ಆಕ್ರೋಶ ಹೊರಹಾಕಿದ್ದಾರೆ..
Advertisment
ಸ್ಥಳಕ್ಕೆ ಆಗಮಿಸಿರೋ ಪೊಲೀಸರು, ಕಚೇರಿ ಬಳಿ ಮೊಕ್ಕಾಂ ಹೂಡಿದ್ದಾರೆ.. ಎಸಿಪಿ ಹಾಗೂ ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್, ನಾಲ್ವರು ಎಸ್.ಐ ಸೇರಿ ನೂರು ಪೊಲೀಸರು ಬೀಡುಬಿಟ್ಟಿದ್ದಾರೆ.. ಒಟ್ಟಾರೆ, ಬಿಬಿಎಂಪಿ ರೂಲ್ಸ್​ ಏನೋ ಇದೆ.. ಆ ಸ್ಥಳದಲ್ಲಿ ಮಾತ್ರ ಮಾರಾಟ-ಖರೀದಿಗೆ ಅವಕಾಶ ಇದೆ..
ಅಂಕಿತಾ ರೈ, ಕ್ರೈಂ ಬ್ಯೂರೋ, ನ್ಯೂಸ್​ಫಸ್ಟ್​