/newsfirstlive-kannada/media/media_files/2025/09/23/modi-navarhri-fasting-2025-09-23-14-49-56.jpg)
ನವರಾತ್ರಿ ವೇಳೆ ಉಪವಾಸ ವ್ರತ ಆಚರಿಸುವ ಮೋದಿ
9 ದಿನಗಳವರೆಗೆ ಕೇವಲ ಹಣ್ಣುಗಳು ಮತ್ತು ನಿಂಬೆ ನೀರು!
ನಿನ್ನೆ ನವರಾತ್ರಿ ಆರಂಭವಾಗಿದೆ. ನವರಾತ್ರಿಯ 9 ದಿನಗಳು ಕೂಡ ಕೆಲವರು ಉಪವಾಸ, ಜಪ, ತಪ ಮಾಡುತ್ತಾರೆ. ನಮ್ಮ ದೇಶದ ಪ್ರಧಾನಿ ಮೋದಿ ಅವರು ಕೂಡ ನವರಾತ್ರಿಯ ವೇಳೆ ಉಪವಾಸ ಮಾಡುತ್ತಾರೆ. ಇದನ್ನು ಬಹಳ ವರ್ಷಗಳಿಂದ ಪ್ರಧಾನಿ ಮೋದಿ ಅನುಸರಿಸಿಕೊಂಡು ಬಂದಿದ್ದಾರೆ. ಈಗ ನಿನ್ನೆಯಿಂದಲೇ ಮೋದಿ ಉಪವಾಸ ಆರಂಭಿಸಿದ್ದಾರೆ. ನವರಾತ್ರಿಯ ವೇಳೆ ವಿದೇಶಕ್ಕೂ ಹೋದರೂ ಕೂಡ ಮೋದಿ ಉಪವಾಸ ಬಿಡಲ್ಲ. ಅಮೆರಿಕಾಕ್ಕೆ ಹೋದಾಗಲೂ ಮೋದಿ ಉಪವಾಸ ಮಾಡಿದ್ದಾರೆ. ವಿಮಾನದಲ್ಲಿ ಪ್ರಯಾಣ ಮಾಡಿ, ದಣಿವಾದರೂ ಉಪವಾಸ ಬಿಟ್ಟಿಲ್ಲ. ಭಾರತದಲ್ಲಿದ್ದಾಗ, ಬೇರೆ ಬೇರೆ ನಗರಗಳಿಗೆ ಸುತ್ತಾಡಿ ಆಯಾಸವಾದರೂ, ಉಪವಾಸ ಬಿಟ್ಟಿಲ್ಲ. ಅಷ್ಟೊಂದು ಕಟ್ಟುನಿಟ್ಟಾಗಿ ಪ್ರಧಾನಿ ನರೇಂದ್ರ ಮೋದಿ ಉಪವಾಸ ಮಾಡಿದ್ದಾರೆ.
ಈ ಭಾರಿಯೂ ನವರಾತ್ರಿ ಆರಂಭವಾದ ನಿನ್ನೆಯಿಂದಲೇ ಮೋದಿ ಉಪವಾಸ ಆರಂಭಿಸಿದ್ದಾರೆ.
ನವರಾತ್ರಿಯ ವೇಳೆ ಪ್ರಧಾನಿ ಮೋದಿ 9 ದಿನಗಳವರೆಗೂ ಕೇವಲ ಹಣ್ಣುಗಳು ಮತ್ತು ನಿಂಬೆರಸವನ್ನು ಮಾತ್ರ ಸೇವಿಸುತ್ತಾರೆ.
ನವರಾತ್ರಿಯ ವೇಳೆ ಮೋದಿ ಹೇಗೆ ಉಪವಾಸ ಮಾಡುತ್ತಾರೆ ಎಂಬ ಬಗ್ಗೆ ಖುದ್ದಾಗಿ ಪ್ರಧಾನಿ ಮೋದಿಯೇ ಹೇಳಿದ್ದಾರೆ. ಮೋದಿ ಹೇಗೆ ಉಪವಾಸ ಮಾಡ್ತಾರೆ, ನವರಾತ್ರಿಯ ವೇಳೆ ಹೇಗಿರುತ್ತಾರೆ ಎಂಬ ಬಗ್ಗೆ ಮೋದಿ ಹೇಳಿದ್ದೇನು ಅನ್ನೋದರ ಫುಲ್ ಡೀಟೈಲ್ಸ್ ಇಲ್ಲಿದೆ, ಓದಿ.
ನಂಬರ್-01 ಉಪವಾಸ ಮಾಡುವ ಮೊದಲು, ನಾನು ಯೋಗ ಮತ್ತು ಆಯುರ್ವೇದದ ಮೂಲಕ ಐದರಿಂದ ಏಳು ದಿನಗಳವರೆಗೆ ನನ್ನ ಇಡೀ ದೇಹವನ್ನು ಆಂತರಿಕವಾಗಿ ಸ್ವಚ್ಛಗೊಳಿಸುತ್ತೇನೆ.
ನಂಬರ್-02 ಉಪವಾಸ ಪ್ರಾರಂಭಿಸುವ ಮೊದಲು ನಾನು ಬಹಳಷ್ಟು ನೀರು ಕುಡಿಯುತ್ತೇನೆ. ಇದು ದೇಹವನ್ನು ನಿರ್ವಿಷಗೊಳಿಸುತ್ತದೆ.
ನಂಬರ್-03 ನನಗೆ, ಉಪವಾಸವು ಒಂದು ಶಿಸ್ತು. ಉಪವಾಸದ ಸಮಯದಲ್ಲಿ ನಾನು ಎಷ್ಟೇ ಬಾಹ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೂ, ನಾನು ನನ್ನ ಆಂತರಿಕ ಆತ್ಮದಲ್ಲಿ ಮುಳುಗಿರುತ್ತೇನೆ. ನಾನು ನನ್ನೊಳಗೆ ವಾಸಿಸುತ್ತೇನೆ. ಅದು ಅದ್ಭುತವಾದ ಭಾವನೆ.
ನಂಬರ್-04 ನಾನು ಪುಸ್ತಕಗಳನ್ನು ಓದುವುದರಿಂದ ಅಥವಾ ಯಾರೋ ಧರ್ಮೋಪದೇಶ ಮಾಡುವುದರಿಂದ ಉಪವಾಸ ಮಾಡುವುದಿಲ್ಲ. ನನ್ನ ಶಾಲಾ ದಿನಗಳಲ್ಲಿ ನನಗೂ ನನ್ನದೇ ಆದ ಅನುಭವವಿತ್ತು.
ನಂಬರ್-05 ಗೋವುಗಳನ್ನು ರಕ್ಷಿಸುವ ಮಹಾತ್ಮ ಗಾಂಧಿಯವರ ಆಶಯವನ್ನು ಈಡೇರಿಸಲು ಇಲ್ಲಿ ಒಂದು ಚಳುವಳಿ ನಡೆಯುತ್ತಿತ್ತು. ಸರ್ಕಾರ ಯಾವುದೇ ಕಾನೂನುಗಳನ್ನು ಜಾರಿಗೆ ತರುತ್ತಿರಲಿಲ್ಲ. ಆ ಸಮಯದಲ್ಲಿ, ದೇಶಾದ್ಯಂತ ಒಂದು ಕಾರ್ಯಕ್ರಮವು ಸಾರ್ವಜನಿಕವಾಗಿ ಒಂದು ದಿನದ ಉಪವಾಸಕ್ಕೆ ಕರೆ ನೀಡಿತು. ಆ ಸಮಯದಲ್ಲಿ ನಾನು ಚಿಕ್ಕವನಾಗಿದ್ದೆ, ಪ್ರಾಥಮಿಕ ಶಾಲೆಯಲ್ಲಿ. ನನ್ನ ಜೀವನದಲ್ಲಿ ಮೊದಲ ಬಾರಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ನನಗೆ ಹಸಿವಾಗಲಿಲ್ಲ. ನನಗೆ ಹೊಸ ಅರಿವು ಮೂಡಿತು. ಅದು ವಿಜ್ಞಾನ ಎಂದು ನಾನು ಅರಿತುಕೊಂಡೆ. ನಂತರ, ನಾನು ನಿಧಾನವಾಗಿ ನನ್ನನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದೆ.
ನಂಬರ್-06 ಉಪವಾಸದ ಸಮಯದಲ್ಲಿ ನನ್ನ ಚಟುವಟಿಕೆ ಎಂದಿಗೂ ನಿಲ್ಲುವುದಿಲ್ಲ. ಉಪವಾಸದ ಸಮಯದಲ್ಲಿ ನಾನು ಅಷ್ಟೇ ಹೆಚ್ಚು ಅಥವಾ ಕೆಲವೊಮ್ಮೆ ಇನ್ನೂ ಹೆಚ್ಚು ಕೆಲಸ ಮಾಡುತ್ತೇನೆ.
ನಂಬರ್-07 ಉಪವಾಸದ ಸಮಯದಲ್ಲಿ ನಾನು ಎಂದಾದರೂ ಆಲೋಚನೆಗಳನ್ನು ವ್ಯಕ್ತಪಡಿಸಬೇಕಾದರೆ, ಈ ಆಲೋಚನೆಗಳು ಎಲ್ಲಿಂದ ಬರುತ್ತವೆ ಎಂದು ನನಗೆ ಆಶ್ಚರ್ಯವಾಗುತ್ತದೆ.
ನಂಬರ್-08 ಮಳೆಗಾಲದಲ್ಲಿ ನನ್ನ ಜೀರ್ಣಶಕ್ತಿ ದುರ್ಬಲಗೊಳ್ಳುತ್ತದೆ, ಮತ್ತು ಈ ಸಮಯದಲ್ಲಿ, ನಾನು ಪ್ರತಿ 24 ಗಂಟೆಗಳಿಗೊಮ್ಮೆ ಮಾತ್ರ ಊಟ ಮಾಡುತ್ತೇನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.