/newsfirstlive-kannada/media/media_files/2025/11/08/maha-land-deal-cancelled-2025-11-08-12-44-58.jpg)
ಮಹಾರಾಷ್ಟ್ರದ ಪುಣೆಯಲ್ಲಿ ಡಿಸಿಎಂ ಅಜಿತ್ ಪವಾರ್ ಪುತ್ರ ಪಾರ್ಥ ಪವಾರ್ ಮಾಲೀಕತ್ವದ ಕಂಪನಿಯು ಖರೀದಿಸಿದ್ದ 40 ಎಕರೆ ಭೂಮಿಯ ಮಾರಾಟವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. 40 ಎಕರೆ ಭೂಮಿಯು ಸರ್ಕಾರಿ ಭೂಮಿಯಾಗಿದ್ದು ಸ್ವಾತಂತ್ರ್ಯ ನಂತರ ದಲಿತ ಮಹಾರ್ ಸಮುದಾಯಕ್ಕೆ ಜಾತಿ ತಾರತಮ್ಯ ನಿವಾರಣೆಯ ಉದ್ದೇಶದಿಂದ ನೀಡಲಾಗಿತ್ತು. ಆದರೇ, ಭೂಮಿಯನ್ನು ಮಾರಾಟ ಮಾಡದಂತೆ ಹಾಗೂ ಬೇರೆಯವರು ಖರೀದಿ ಮಾಡದಂತೆ ಷರತ್ತು ವಿಧಿಸಲಾಗಿದೆ. ಇಂಥ ಸಂಪೂರ್ಣ ಸರ್ಕಾರಿ ಭೂಮಿಯನ್ನೇ ಪಾರ್ಥ ಪವಾರ್ ಖರೀದಿಸಿದ್ದರು. ಈ ಭೂಮಿ ಮಾರಾಟ ಬೆಳಕಿಗೆ ಬರುತ್ತಿದ್ದಂತೆ, ದೊಡ್ಡ ರಾಜಕೀಯ ಕೋಲಾಹಲವೇ ಎದ್ದಿತ್ತು.
ಜೊತೆಗೆ ಭೂಮಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಖರೀದಿಸಿದಾಗ, ಸ್ಟಾಂಪ್ ಡ್ಯೂಟಿಯಾಗಿ 25 ಕೋಟಿ ರೂಪಾಯಿ ಹಣವನ್ನು ಪಾವತಿ ಮಾಡಬೇಕಾಗಿತ್ತು. ಆದರೇ, 25 ಕೋಟಿ ರೂಪಾಯಿ ಹಣ ಪಾವತಿ ಮಾಡದೇ, ಬರೀ 500 ರೂಪಾಯಿ ಸ್ಟಾಂಪ್ ಡ್ಯೂಟಿ ಪಾವತಿ ಮಾಡಲಾಗಿತ್ತು.
ಈಗ ಈ ಭೂ ಹಗರಣದಲ್ಲಿ ಭಾಗಿಯಾದ ಯಾರನ್ನೂ ಕೂಡ ಬಿಡಲ್ಲ ಎಂದು ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಆದರೇ, ಸರ್ಕಾರಿ ಭೂಮಿ ಮಾರಾಟ, ಭೂಮಿ ಖರೀದಿ, ಭೂಮಿಯನ್ನು ಕೇವಲ 500 ರೂಪಾಯಿಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಣಿ ಮಾಡಿದ ಕೇಸ್ ನಲ್ಲಿ ಪಾರ್ಥ ಪವಾರ್ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲ.
ಎಫ್‌ಐಆರ್ ಅಂದರೇ, ಏನು ಎಂದು ಅರ್ಥ ಮಾಡಿಕೊಳ್ಳದವರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಎಫ್‌ಐಆರ್ ದಾಖಲಿಸಿದಾಗ, ಭಾಗಿಯಾದ ವ್ಯಕ್ತಿಗಳ ಹೆಸರು ಅನ್ನು ಉಲ್ಲೇಖ ಮಾಡಲಾಗುತ್ತೆ. ಈ ಕೇಸ್ ನಲ್ಲಿ ಎಫ್‌ಐಆರ್ ಅನ್ನು ಕಂಪನಿಯ ವಿರುದ್ಧ ಹಾಗೂ ಅದರ ಪಾಲುದಾರರ ವಿರುದ್ಧ ದಾಖಲಿಸಲಾಗಿದೆ ಎಂದು ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ತನಿಖೆಯ ವೇಳೆ ಹೊಸ ಹೆಸರು ಬಂದರೇ, ಅವರ ವಿರುದ್ದವೂ ಕ್ರಮ ಕೈಗೊಳ್ಳಲಾಗುತ್ತೆ ಎಂದು ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
1,800 ಕೋಟಿ ರೂಪಾಯಿ ಮೌಲ್ಯದ 40 ಎಕರೆ ಭೂಮಿಯ ಮೌಲ್ಯವನ್ನು 300 ಕೋಟಿ ರೂಪಾಯಿ ಎಂದು ಪಾರ್ಥ ಪವಾರ್ ಮಾಲೀಕತ್ವದ ಅಮಿದಿಯಾ ಎಂಟರ್ ಪ್ರೈಸಸ್ ಕಂಪನಿಯು ಘೋಷಿಸಿತ್ತು. ಜೊತೆಗೆ ಸ್ಟಾಂಪ್ ಡ್ಯೂಟಿಯಾಗಿ 25 ಕೋಟಿ ರೂಪಾಯಿ ಪಾವತಿಸಬೇಕಾಗಿತ್ತು. ಅದನ್ನು ಪಾವತಿಸಿರಲಿಲ್ಲ. ಕೇವಲ 500 ರೂಪಾಯಿ ಸ್ಟಾಂಪ್ ಡ್ಯೂಟಿ ಪಾವತಿಸಲಾಗಿತ್ತು.
/filters:format(webp)/newsfirstlive-kannada/media/media_files/2025/11/07/partha-pawar-land-scam-2025-11-07-15-44-08.jpg)
ಆದರೇ, ಎಫ್‌ಐಆರ್ ನಲ್ಲಿ ಪಾರ್ಥ ಪವಾರ್ ಹೆಸರು ಅನ್ನು ಉಲ್ಲೇಖಿಸಿಲ್ಲ. ಅಮಿದಿಯಾ ಎಂಟರ್ ಪ್ರೈಸಸ್ ಎಲ್‌ಎಲ್ ಪಿ ಕಂಪನಿಯಲ್ಲಿ ಶೇ.99 ರಷ್ಟು ಷೇರುಗಳನ್ನು ಪಾರ್ಥ ಪವಾರ್ ಹೊಂದಿದ್ದಾರೆ. ಶೇ.1 ರಷ್ಟು ಷೇರುಗಳನ್ನು ಮಾತ್ರವೇ ದಿಗ್ವಿಜಯ ಪಾಟೀಲ್ ಹೊಂದಿದ್ದಾರೆ. ಈಗ ಪೊಲೀಸರು ದಾಖಲಿಸಿರುವ ಎರಡು ಎಫ್‌ಐಆರ್ ಗಳಲ್ಲಿ ದಿಗ್ವಿಜಯ ಪಾಟೀಲ್ ಹೆಸರು ಮಾತ್ರವೇ ಇದೆ. ಪಾರ್ಥ ಪವಾರ್ ಹೆಸರು ಎಫ್‌ಐಆರ್ ನಲ್ಲಿ ಇಲ್ಲ.
ಪುಣೆಯ 40 ಎಕರೆ ಜಾಗವನ್ನು 272 ಮಂದಿಗೆ ಸರ್ಕಾರ ನೀಡಿತ್ತು. ಅವರೆಲ್ಲರ ಪವರ್ ಆಫ್ ಅಟಾರ್ನಿಯನ್ನು ಶೀತಲ್ ತೇಜವಾನಿ ಹೊಂದಿದ್ದರು.
ಈ ಕೇಸ್ ನಲ್ಲಿ ಇಬ್ಬರು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಸಬ್ ರಿಜಿಸ್ಟ್ರಾರ್ ರವೀಂದ್ರ ತಾರು ರನ್ನು ಆಕ್ರಮವಾಗಿ ಸರ್ಕಾರಿ ಭೂಮಿಯನ್ನು ಸರಿಯಾಗಿ ಸ್ಟಾಂಪ್ ಡ್ಯೂಟಿ ಸಂಗ್ರಹಿಸದೇ ರಿಜಿಸ್ಟ್ರಾರ್ ಮಾಡಿದ ಕಾರಣಕ್ಕಾಗಿ ಸಸ್ಪೆಂಡ್ ಮಾಡಲಾಗಿದೆ. ಇನ್ನೂ ಪುಣೆಯ ಸಿಟಿಯ ತಹಸೀಲ್ದಾರ್ ಸೂರ್ಯಕಾಂತ್ ಯೇವಾಲೆ, ಸರ್ಕಾರಿ ಭೂಮಿಯ ಮಾಲೀಕತ್ವದ ಹಕ್ಕು ಅನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಕ್ಕಾಗಿ ಸೇವೆಯಿಂದ ಸಸ್ಪೆಂಡ್ ಮಾಡಲಾಗಿದೆ.
ಎಫ್‌ಐಆರ್ ರಿಜಿಸ್ಟಾರ್ ಮಾಡಿದಾಗ, ಅದು ಹಗರಣದಲ್ಲಿ ಭಾಗಿಯಾದ ಎಲ್ಲರನ್ನೂ ಒಳಗೊಳ್ಳುತ್ತೆ. ದಾಖಲೆಗೆ ಸಹಿ ಮಾಡಿದವರು, ಮಾರಾಟ ಮಾಡಿದವರು, ಆಕ್ರಮವಾಗಿ ರಿಜಿಸ್ಟಾರ್ ಮಾಡಿದವರು, ಬದಲಾವಣೆ ಮಾಡಿದವರನ್ನು ಒಳಗೊಳ್ಳುತ್ತೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ತಮ್ಮ ಪುತ್ರ ಪಾರ್ಥ ಪವಾರ್ ರನ್ನು ಏಕೆ ಎಫ್ಐಆರ್ ನಲ್ಲಿ ಉಲ್ಲೇಖಿಸಿಲ್ಲ ಎಂಬುದಕ್ಕೆ ಡಿಸಿಎಂ ಅಜಿತ್ ಪವಾರ್ ಪ್ರತಿಕ್ರಿಯಿಸಿದ್ದಾರೆ. ರಿಜಿಸ್ಟ್ರೇಷನ್ ದಾಖಲೆಗೆ ಸಹಿ ಮಾಡಿದವರ ವಿರುದ್ಧ ಮಾತ್ರವೇ ಎಫ್‌ಐಆರ್ ದಾಖಲಿಸಲಾಗಿದೆ, ಪಾರ್ಥಗೆ ಈ ಭೂಮಿಯನ್ನು ಆಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬುದೇ ಗೊತ್ತೇ ಇರಲಿಲ್ಲ ಎಂದಿದ್ದಾರೆ.
ಈ ವಿವಾದಿತ ಭೂಮಿಯು ಪುಣೆ ಸಿಟಿಯ ಮಧ್ವಾನ್ ಪ್ರದೇಶದಲ್ಲಿ ಕೋರೆಂಗಾವ್ ಪಾರ್ಕ್ ಬಳಿ ಇದ್ದು 40 ಎಕರೆ ವಿಸ್ತೀರ್ಣ ಹೊಂದಿದೆ. ಇದನ್ನು 272 ಮಂದಿಗೆ ಮಹಾರಾಷ್ಟ್ರ ಸರ್ಕಾರವು ಮಹರ್ ವತನ್ ಸಮುದಾಯದ ಜನರಿಗೆ ಮಂಜೂರು ಮಾಡಲಾಗಿತ್ತು. ಮೇ, 19, 2025 ರಂದು ಪಾರ್ಥ ಪವಾರ್ ಮಾಲೀಕತ್ವದ ಕಂಪನಿಯು ಖರೀದಿಸಿತ್ತು. ಆದರೇ, ಇದುವರೆಗೂ ಯಾವುದೇ ಹಣ ಪಾವತಿ ಮಾಡಿಲ್ಲ ಎಂದು ಅಜಿತ್ ಪವಾರ್ ಹೇಳಿದ್ದಾರೆ. ಭೂಮಿ ಮಾರಾಟ, ಖರೀದಿಯನ್ನೇ ರದ್ದುಪಡಿಸಲಾಗಿದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಮಹರ್ ಸಮುದಾಯವು ಪರಿಶಿಷ್ಟ ಜಾತಿಯ ಸಮುದಾಯವಾಗಿದೆ. ಸಂಪ್ರದಾಯಿಕವಾಗಿ ಗ್ರಾಮಗಳಲ್ಲಿ ಜಾತಿ ಆಧರಿತ ವೃತ್ತಿ ಮಾಡುತ್ತಿದ್ದು, ಜಾತಿ ತಾರತಮ್ಯ ನಿವಾರಣೆ ಮಾಡುವ ಉದ್ದೇಶದಿಂದ ಮಹಾರ್ ಜಾತಿಯ ಜನರಿಗೆ ಭೂಮಿಯನ್ನು ನೀಡಲಾಗಿತ್ತು. ಸರ್ಕಾರವೇ ಈ ಭೂಮಿಗೆ ಮಾಲೀಕರು. ಭೂಮಿಯನ್ನು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡುವಂತಿಲ್ಲ ಅಥವಾ ಸರ್ಕಾರದ ಅನುಮೋದನೆ ಇಲ್ಲದೇ ಮಾರಾಟ ಮಾಡುವಂತಿಲ್ಲ ಎಂದು ಸರ್ಕಾರವೇ ಈ ಹಿಂದೆ ಷರತ್ತು ವಿಧಿಸಿ ಮಂಜೂರು ಮಾಡಿದೆ.
ಈಗ ಈ ಸರ್ಕಾರಿ ಭೂಮಿಯನ್ನು ಡಿಸಿಎಂ ಅಜಿತ್ ಪವಾರ್ ಪುತ್ರ ಪಾರ್ಥ ಪವಾರ್ ಮಾಲೀಕತ್ವದ ಕಂಪನಿ ಖರೀದಿಸಿ ವಿವಾದಕ್ಕೆ ಗುರಿಯಾಗಿದೆ.
ಇನ್ನೂ ಈ ವಿವಾದಕ್ಕೆ ಸಂಬಂಧಿಸಿದಂತೆ, ಡಿಸಿಎಂ ಅಜಿತ್ ಪವಾರ್, ಸಿಎಂ ದೇವೇಂದ್ರ ಫಡ್ನವೀಸ್ ರನ್ನು ಭೇಟಿಯಾಗಿ ವಿವರಣೆ ನೀಡಿದ್ದಾರೆ. ತಮ್ಮ ಪುತ್ರ ಪಾರ್ಥ ಪವಾರ್ ಗೆ ಅದು ಸರ್ಕಾರಿ ಭೂಮಿ ಎಂಬುದೇ ಗೊತ್ತೇ ಇರಲಿಲ್ಲ ಎಂದು ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/11/08/maha-land-deal-cancelled02-2025-11-08-12-54-43.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us