ರಾಜಣ್ಣ ನುಡಿದ ಸತ್ಯ ಕಾಂಗ್ರೆಸ್​ಗೆ ಮೆಣಸಿನಕಾಯಿ ಇಟ್ಟಂಗೆ ಆಗಿದೆ -ಅಶೋಕ್ ವ್ಯಂಗ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬಣದ ಮೊದಲ ವಿಕೆಟ್ ಪತನವಾಗಿದೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದಾರೆ. ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಸೃಷ್ಟಿಯಾಗಿದೆ.

author-image
Ganesh
R ashok on KN Rajanna

ರಾಜಣ್ಣ ರಾಜೀನಾಮೆ ಬಗ್ಗೆ ಅಶೋಕ್ ವ್ಯಂಗ್ಯ

Advertisment

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬಣದ ಮೊದಲ ವಿಕೆಟ್ ಪತನವಾಗಿದೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದಾರೆ. ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಸೃಷ್ಟಿಯಾಗಿದೆ.

ಇನ್ನು ರಾಜಣ್ಣ ಅವರ ರಾಜೀನಾಮೆ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್​.ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್​ನಲ್ಲಿಯೇ ಪ್ರಜಾಪ್ರಭುತ್ವ ಇಲ್ಲ. ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಎಲ್ಲಿಗೆ ಹೋದರೂ ಅಂಬೇಡ್ಕರ್ ಅವರ ಸಂವಿಧಾನ ಪುಸ್ತಕವನ್ನು ಹಿಡಿದುಕೊಂಡು ಹೋಗ್ತಾರೆ. ಆದರೆ, ಕಾಂಗ್ರೆಸ್​ನಲ್ಲಿಯೇ ಪ್ರಜಾಪ್ರಭುತ್ವ ಇಲ್ಲ. 

ಮಾತು ಎತ್ತಿದ್ರೆ ಸಂವಿಧಾನದ ಬಗ್ಗೆ ರಾಹುಲ್ ಗಾಂಧಿ ಮಾತನ್ನಾಡ್ತಾರೆ. ಇನ್ಮುಂದೆ ರಾಹುಲ್ ಗಾಂಧಿ, ಸಂವಿಧಾನದ ಪುಸ್ತಕವನ್ನು ಹಿಡಿದುಕೊಂಡು ಹೋಗುವಂತಿಲ್ಲ. ರಾಜಣ್ಣ ಸತ್ಯ ಹೇಳಿದ್ದಾರೆ. ಹಾಗಿದ್ದರೆ ರಾಜಣ್ಣ ಏನು ಹೇಳಿದರು? ಅವತ್ತು ರಾಜ್ಯದಲ್ಲಿ ಇದ್ದಿದ್ದು ನಮ್ಮ ಸರ್ಕಾರ. ನಾವು ಸರಿ ಮಾಡಿದ್ದರೆ ಮತಗಳ್ಳತನ ಆಗುತ್ತಿರಲಿಲ್ಲ ಅಂತಾ ಸತ್ಯ ಹೇಳಿದ್ದಾರೆ. ಸತ್ಯ ಹೇಳಿದ್ದಕ್ಕೆ ಈ ರೀತಿಯ ಶಿಕ್ಷೆ ಆಗಿದೆ. 

ರಾಹುಲ್ ಗಾಂಧಿ ಮೊನ್ನೆಯಷ್ಟೇ ಮತಗಳ್ಳತನದ ಆರೋಪ ಮಾಡಿದ್ದರು. ಅದಕ್ಕೆ ರಾಜಣ್ಣ ಸತ್ಯವನ್ನು ಹೇಳಿದ್ದರು. ಇದಕ್ಕೆ ಕಾಂಗ್ರೆಸ್​ನವರ ಹೊಟ್ಟೆಯೊಳಗೆ ಮೆಣಸಿನಕಾಯಿ ಇಟ್ಟಂಗೆ ಆಗಿದೆ. ಇದು ರಾಜಣ್ಣಗೆ ಆಗಿರುವ ಅವಮಾನ ಅಲ್ಲ. ಕಾಂಗ್ರೆಸ್​ಗೆ ಆಗಿರುವ ಅವಮಾನ ಅಕ್ಟೋಬರ್​ನಲ್ಲಿ ಕಾಂಗ್ರೆಸ್​ನಲ್ಲಿ ಪ್ರಳಯ ಆಗ್ತಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು. 

ಇದನ್ನೂ ಓದಿ: BREAKING ಸಚಿವ ಸ್ಥಾನಕ್ಕೆ ಕೆ.ಎನ್.ರಾಜಣ್ಣ ರಾಜೀನಾಮೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KN Rajanna K N Rajanna resignation R Ashok on Rajanna resignation
Advertisment