ಕಾಂಗ್ರೆಸ್ನಲ್ಲಿ ಪ್ರಜಾಪ್ರಭುತ್ವ ಇಲ್ಲ. ರಾಹುಲ್ ಗಾಂಧಿ ಮಾತು ಎತ್ತಿದರೇ ಸಂವಿಧಾನದ ಪುಸ್ತಕ ಹಿಡಿದುಕೊಂಡಿರುತ್ತಾರೆ. ಇದೇನಾ ನಿಮ್ಮ ಸಂವಿಧಾನ. ರಾಜಣ್ಣ ಏನು ಹೇಳಿದರು?. ಅವರು ಸತ್ಯ ಹೇಳಿದರು. ಮತಗಳ್ಳತನ ಹೆಂಗಾಗುತ್ತಿತ್ತು, ಹಿಂದೆ ಹೆಂಗಾಗುತ್ತಿತ್ತು, ವೋಟರ್ ಲಿಸ್ಟ್ನಲ್ಲಿ ಸೇರಿಸೋದು ಯಾರು?. ನಮ್ಮ ಅಧಿಕಾರಿಗಳು ತಾನೇ ಅಂತ ರಾಜಣ್ಣ ಹೇಳಿದ್ದರು. ಇಲ್ಲಿ ತಪ್ಪು ಏನಿದೆ? ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷ ಇರಲಿ ಅಧಿಕಾರಿಗಳು ತಾನೇ ವೋಟರ್ ಲಿಸ್ಟ್ಗೆ ಜನರನ್ನು ಸೇರ್ಪಡೆ ಮಾಡುವುದು. ಪ್ರತಿ ಸಿಬ್ಬಂದಿಗೆ ಮೋದಿ ಬಂದು ಹೇಳಿಕೊಡಲು ಆಗುತ್ತದೆಯಾ?. ಸತ್ಯ ಹೇಳಿದ್ದಾರೆ, ಅದಕ್ಕೆ ರಾಜಣ್ಣ ತಲೆದಂಡ ಆಗಿದೆ ಅಷ್ಟೇ. ಕಾಂಗ್ರೆಸ್ನಲ್ಲಿ ಪ್ರಜಾಪ್ರಭುತ್ವ ಇಲ್ಲ ಎನ್ನುವುದಕ್ಕೆ ಇದು ಸ್ಪಷ್ಟ. ಇನ್ಮುಂದೆ ಯಾವಾತ್ತಾದರೂ ರಾಹುಲ್ ಗಾಂಧಿ ಅವರು ಸಂವಿಧಾನ ಪುಸ್ತಕ ಇಟ್ಟುಕೊಂಡು ಹೋಗಬಾರದು ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ 3 ಸಾವಿರ ಅಲ್ಲ, 30 ಸಾವಿರ ಮತಗಳನ್ನು ಕಳ್ಳತನ ಮಾಡಿರೋದು. ಇಲ್ಲಂದ್ರೆ ಗೆಲ್ಲುತ್ತನೆ ಇರಲಿಲ್ಲ. ವರುಣದಲ್ಲಿ 30 ಸಾವಿರ ಮೈನಸ್ನಿಂದಲೇ ಸೋತಿದ್ದಾರೆ. ಸಿಎಂ ಇಬ್ರಾಹಿಂ 1 ಸೊನ್ನೆ ತೆಗೆದಿದ್ದಾರೆ. ಅವರು 3 ಸಾವಿರ ಅಂದಿದ್ದಾರೆ. ಆದರೆ ಬಾದಾಮಿಯಲ್ಲಿ 30 ಸಾವಿರ ಮತಗಳನ್ನು ಹಣ ಕೊಟ್ಟು, ಬೋಗಸ್ ಮತ ಹಾಕಿಸಿ ಸಿಎಂ ಸಿದ್ದರಾಮಯ್ಯ ಗೆದ್ದಿರೋದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ