Advertisment

ತೀಟೆ ತಿರಿಸಿಕೊಳ್ಳೋಕೆ, ಪ್ರಚಾರಕ್ಕಾಗಿ ಮಾತಾಡ್ತಿದ್ದಾರೆ; ಪ್ರಿಯಾಂಕ್ ಖರ್ಗೆ ವಿರುದ್ಧ R ಅಶೋಕ್ ಕೆಂಡಾಮಂಡಲ

ಇಡೀ ಕಲಬುರಗಿ ಬೆಂಕಿಯಲ್ಲಿ ಉರಿಯುತ್ತಿದೆ. ರೈತರು ಹೋರಾಟ ಮಾಡುತ್ತಿದ್ದಾರೆ. ಅಲ್ಲಿ ನೋಡಲು, ಕೇಳಲು ಯೋಗ್ಯತೆ ಇಲ್ಲ. ಆರ್​​ಎಸ್​ಎಸ್ ಬಗ್ಗೆ ಮಾತಾಡಿದರೆ ಪ್ರಚಾರ ಆಗುತ್ತೆ, ದೇಶದಲ್ಲಿ ನಾನು ದೊಡ್ಡ ಫೇಮಸ್ ಆಗಬಹುದು ಅಂತ ಮಾತಾಡ್ತಿದ್ದಾರೆ

author-image
Bhimappa
Advertisment

ಸಚಿವ ಪ್ರಿಯಾಂಕ್ ಖರ್ಗೆ ಅಪ್ಪ ಆರ್​ಎಸ್​ಎಸ್​ ಕ್ಯಾಂಪ್​​ಗೆ ಬಂದು ಹೋದರಲ್ಲ, ಅವಾಗ ಇವರಿಗೆ ಬುದ್ಧಿ ಹೇಳೋಕೆ ಆಗಲಿಲ್ವಾ?. ಇವರು ಹೇಳಿಕೆ ಕೊಡುವುದರಲ್ಲೇ ಜೀವನ ಕಳೆದಿದ್ದಾರೆ. ಇಲಾಖೆಯಲ್ಲಿ ಏನು ಕೆಲಸ ಮಾಡಿದ್ದಾರೆ?. ಇಡೀ ಕಲಬುರಗಿ ಬೆಂಕಿಯಲ್ಲಿ ಉರಿಯುತ್ತಿದೆ. ರೈತರು ಹೋರಾಟ ಮಾಡುತ್ತಿದ್ದಾರೆ. ಅಲ್ಲಿ ನೋಡಲು, ಕೇಳಲು ಯೋಗ್ಯತೆ ಇಲ್ಲ. ಆರ್​​ಎಸ್​ಎಸ್ ಬಗ್ಗೆ ಮಾತಾಡಿದರೆ ಪ್ರಚಾರ ಆಗುತ್ತೆ, ದೇಶದಲ್ಲಿ ನಾನು ದೊಡ್ಡ ಫೇಮಸ್ ಆಗಬಹುದು ಅಂತ ಮಾತಾಡ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್​. ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Advertisment

ಕಾಂಗ್ರೆಸ್​ನವರು ಏನು ಮಾಡೋಕೆ ಸಾಧ್ಯ. ಇನ್ನು ಎರಡು ವರ್ಷ ಎಲ್ಲರೂ ಓಡಿ ಹೋಗಿ ಬಿಲ ಸೇರಿಕೊಳ್ಳುತ್ತಾರೆ. ಇವತ್ತು ದೇಶದಲ್ಲಿ ಪ್ರಧಾನಿ, ರಾಜ್ಯಪಾಲರಿಂದ ಇಡಿದು ಎಲ್ಲರೂ ಬಿಜೆಪಿಯವರೇ ಇರೋದು. ಇವರು ಯಾವುದೋ ಮೂಲೆಯಲ್ಲಿ ಬಿದ್ದಿದ್ದಾರೆ ಅಷ್ಟೇ. ಕಾಂಗ್ರೆಸ್​ಗೆ ಇಷ್ಟು ಧಮ್ ಇರಬೇಕಾದರೆ, ಪಾರ್ಲಿಮೆಂಟ್​ನಲ್ಲಿ ಪ್ರಧಾನಿ, ದೇಶದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಎಲ್ಲರೂ ನಮ್ಮವರು, ಎಲ್ಲ ರಾಜ್ಯದಲ್ಲೂ ಬಿಜೆಪಿ ಬಹುತೇಕ ಸರ್ಕಾರ ಇರಬೇಕಾದರೆ ನಮಗೆ ಎಷ್ಟು ಧಮ್ ಇರಬೇಕು. ಇವರನ್ನು ಯಾರು ಕೇಳುತ್ತಾರೆ ಎಂದು ಆರ್​. ಅಶೋಕ್ ಹೇಳಿದ್ದಾರೆ.    

ತೀಟೆ ತಿರಿಸಿಕೊಳ್ಳೋಕೆ, ಪ್ರಚಾರಕ್ಕಾಗಿ ಮಾತಾನಾಡುತ್ತಿದ್ದಾರೆ. ಆರ್​ಎಸ್​ಎಸ್​ಗೆ ನೂರು ವರ್ಷಗಳು ತುಂಬಿವೆ. ಅದು ದೊಣ್ಣೆ ಹಿಡಿದುಕೊಂಡು ಹೋಗುವುದಲ್ಲ, ಅದು ದಂಡ ಎನ್ನುತ್ತಾರೆ. ರೂಟ್ ಮಾರ್ಚ್​ ಮಾಡೋದು, ವ್ಯಾಯಾಮ ಮಾಡೋದು ಎಲ್ಲ ಇದೆ. ಈ ಹಿಂದೆ ಕುಸ್ತಿಯಲ್ಲೂ ದಂಡ ಹಿಡಿದುಕೊಳ್ಳುತ್ತಿದ್ದರು. ದಂಡ ಹಿಡಿದುಕೊಳ್ಳುವುದು ಸಂಘದ ಪದ್ಧತಿ. ಅದು ಹೊಸದಾಗಿ ಏನು ಆಗಿಲ್ಲ ಎಂದು ಆರ್ ಅಶೋಕ್ ಅವರು ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RSS R Ashok
Advertisment
Advertisment
Advertisment