/newsfirstlive-kannada/media/media_files/2026/01/13/dcm-dk-shivakumar-met-rahul-gandhi-1-2026-01-13-18-18-02.jpg)
ಸಿಎಂ, ಡಿಸಿಎಂ ಇಬ್ಬರನ್ನೂ ದೆಹಲಿಗೆ ಕರೆದ ರಾಹುಲ್ ಗಾಂಧಿ
ಸಿಎಂ-ಡಿಸಿಎಂ ಜೊತೆ ರಾಹುಲ್ ಗಾಂಧಿ ಜೊತೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹೇಳಿಕೆ ನೀಡಿದ್ದಾರೆ. ನಿನ್ನೆ ಏನು ಮಾತುಕತೆ ನಡೆದಿಲ್ಲ. ಇಬ್ಬರಿಗೂ ರಾಹುಲ್ ಗಾಂಧಿಯವರು ದೆಹಲಿಗೆ ಬರುವಂತೆ ಹೇಳಿದ್ದಾರೆ. ದೆಹಲಿಗೆ ಹೋದ ಮೇಲೆ ಎಲ್ಲವನ್ನೂ ಸರಿಪಡಿಸುವುದಾಗಿ ಹೇಳಿದ್ದಾರೆ . ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಇಬ್ಬರನ್ನು ದೆಹಲಿಗೆ ಕರೆದಿದ್ದಾರೆ. ಮೊದಲು ಡಿ.ಕೆ ಶಿವಕುಮಾರ್ ಮಾತನ್ನಾಡಬೇಕು ಅಂತ ಕೇಳಿದ್ರು . ಆಗ ಇಬ್ಬರು ದೆಹಲಿಗೆ ಬನ್ನಿ ಅಂತಾ ರಾಹುಲ್ ಗಾಂಧಿ ಹೇಳಿದರು . ಸಂಕ್ರಾಂತಿ ಬಳಿಕ ಇಬ್ಬರನ್ನೂ ಕರೆಯಬಹುದು. ನೂರಕ್ಕೆ ನೂರು ಗೊಂದಲ ಸರಿ ಹೋಗುತ್ತದೆ. ನಾವೆಲ್ಲ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳು. ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದು ಕಾಂಗ್ರೆಸ್ ನ ಮುಖ್ಯ ಸಚೇತಕ, ಶಾಸಕ ಅಶೋಕ್ ಪಟ್ಟಣ್ ಹೇಳಿದ್ದಾರೆ.
ರನ್ ವೇಯಲ್ಲಿ ಚರ್ಚೆ ಅಂತ ಅಲ್ಲ, ರಾಹುಲ್ ಅಲ್ಲಿಗೆ ಬಂದಿದ್ದರು . ಬಂದಾಗ ಮಾತನ್ನಾಡಿದ್ದಾರೆ ಅಷ್ಟೇ. ಸಂಪುಟ ವಿಸ್ತರಣೆ ಸೇರಿ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಸಂಪುಟ ಪುನರ್ ರಚನೆ ಆಗಬೇಕು ಅಂತ ಇದೆ. ನನ್ನದು ಬೇಡಿಕೆ ಇದೆ, ನಾನು ಮಂತ್ರಿ ಆಗಬೇಕು. ಎಲ್ಲದರ ಬಗ್ಗೆ ದೆಹಲಿಯಲ್ಲಿ ಕರೆದು ಮಾತನ್ನಾಡುತ್ತಾರೆ ಎಂದು ಕಾಂಗ್ರೆಸ್ ಶಾಸಕ, ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹೇಳಿದ್ದಾರೆ.
ನಿನ್ನೆ ಮೈಸೂರು ಏರ್ ಪೋರ್ಟ್ ನಲ್ಲಿ ರಾಹುಲ್ ಗಾಂಧಿ ಜೊತೆ ಸಿಎಂ, ಡಿಸಿಎಂ ಪ್ರತೇಕವಾಗಿ ಚರ್ಚೆ ನಡೆಸಿದಾಗ, ಅಶೋಕ್ ಪಟ್ಚಣ್ ಸ್ಥಳದಲ್ಲೇ ಇದ್ದರು. ಅಶೋಕ್ ಪಟ್ಟಣ್ , ಸಿಎಂ ಸಿದ್ದರಾಮಯ್ಯಗೆ ಆಪ್ತ ವಲಯದಲ್ಲಿದ್ದಾರೆ. ಸದಾ ಸಿಎಂ ಜತೆ ಅಶೋಕ್ ಪಟ್ಟಣ್ ಇರುತ್ತಾರೆ. ಹೀಗಾಗಿ ಸಿಎಂ ಕಡೆಯಿಂದಲೇ ಈ ಎಲ್ಲ ಮಾಹಿತಿಯೂ ಶಾಸಕ ಅಶೋಕ್ ಪಟ್ಟಣ್ ಗೂ ಸಿಕ್ಕಿರಬಹುದು. ಜೊತೆಗೆ ಸ್ಥಳದಲ್ಲೇ ಇದ್ದು ನಾಯಕರಿಂದ ಮಾಹಿತಿಯನ್ನು ಅಶೋಕ್ ಪಟ್ಟಣ್ ಪಡೆದಿದ್ದಾರೆ.
/filters:format(webp)/newsfirstlive-kannada/media/media_files/2026/01/14/congress-mla-ashok-pattana-2026-01-14-12-51-59.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us