/newsfirstlive-kannada/media/media_files/2025/11/05/harayana-vote-chori-2025-11-05-15-50-24.jpg)
ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಮತ್ತೆ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ. ಹರಿಯಾಣಾದಲ್ಲಿ ಮತಗಳ್ಳತನ ನಡೆದಿದೆ ಎಂದು ದಾಖಲೆ ಸಮೇತ ವಿವರಣೆ ನೀಡಿದ್ದಾರೆ. ಅನಾಮಧೇಯ ಹೆಸರುಗಳನ್ನ ಬಳಸಿ ಮತದಾನ ಮಾಡಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ. ಕೆಲ ಮಾಡೆಲ್‌ಗಳ ಹೆಸರು ಮತದಾರರ ಪಟ್ಟಿಯಲ್ಲಿದೆ ಎಂದು ಸಾಕ್ಷಿ ಪ್ರದರ್ಶಿಸಿದ್ದಾರೆ.
ಹರಿಯಾಣದಲ್ಲಿ ಓರ್ವ ಮಹಿಳೆ 10 ವಿವಿಧ ಮತಗಟ್ಟೆಗಳಲ್ಲಿ 22 ಬಾರಿ ಮತದಾನ ಮಾಡಿದ್ದಾಳೆ. ಪ್ರತಿಯೊಂದು ಕಡೆ ಈಕೆಯ ಹೆಸರು ಬದಲಾಗಿದೆ..ಲಕ್ಷ್ಮೀ. ಸರಸ್ವತಿ. ಸೀಮಾ ಹೀಗೆ ವಿವಿಧ ರೀತಿಯಲ್ಲಿ ಹೆಸರು ಬದಲಾಯಿಸಲಾಗಿದೆ.. ಬ್ರೆಜಿಲ್ ದೇಶದ ಮಾಡಲ್ ಕೂಡ ಹರಿಯಾಣದಲ್ಲಿ ಮತದಾನ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬ್ರೆಜಿಲ್ ಮಹಿಳೆ ಹರಿಯಾಣ ಚುನಾವಣೆಯಲ್ಲಿ ಏನ್ಮಾಡ್ತಿದ್ದಾಳೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ
𝐖𝐡𝐚𝐭 𝐢𝐬 𝐚 𝐁𝐫𝐚𝐳𝐢𝐥𝐢𝐚𝐧 𝐰𝐨𝐦𝐚𝐧 𝐝𝐨𝐢𝐧𝐠 𝐨𝐧 𝐇𝐚𝐫𝐲𝐚𝐧𝐚'𝐬 𝐞𝐥𝐞𝐜𝐭𝐨𝐫𝐚𝐥 𝐥𝐢𝐬𝐭?
— Congress (@INCIndia) November 5, 2025
❓ Who is this lady?
❓ How old is she?
❓ Where is she from?
She voted 22 times in Haryana, across 10 different booths in the state, using multiple names: Seema,… pic.twitter.com/3VHdBDLc14
25 ಲಕ್ಷ ಮತಗಳನ್ನ ಹರಿಯಾಣದಲ್ಲಿ ಕಳ್ಳತನಮಾಡಲಾಗಿದೆ. ಒಟ್ಟು 5 ವಿಭಾಗದಲ್ಲಿ ಮತಗಳ್ಳತನ ಮಾಡಲಾಗಿದೆ. ಮೋದಿ ಕ್ಷೇತ್ರ ವಾರಾಣಸಿಯಲ್ಲೂ ಮತಗಳ್ಳತನವಾಗಿರುವುದಾಗಿ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
ಹರಿಯಾಣದಲ್ಲಿ ಒಟ್ಟು 25 ಲಕ್ಷ ಮತಗಳ ಕಳ್ಳತನವಾಗಿದೆ. ಡುಪ್ಲಿಕೇಟ್ ಮತಗಳು 5,21,619. ಇನ್ ವ್ಯಾಲಿಡ್ ಮತಗಳು 93,174 . ಬಲ್ಕ್ ಮತಗಳ ವಿವರ( ಒಂದಕ್ಕಿಂತ ಹೆಚ್ಚು ಮತ) 19,26,351 . ಒಟ್ಟು 25,41,144 ಮತಗಳನ್ನ ಕಳ್ಳತನ ಮಾಡಲಾಗಿದೆ. ಒಬ್ಬನೆ ವ್ಯಕ್ತಿ ನೂರಕ್ಕೂ ಹೆಚ್ಚು ಕಡೆಯಲ್ಲಿ ಮತದಾನ ಮಾಡಿದ್ದಾರೆ. ಫಾರ್ಮ್ ನಂಬರ್ 6 ಮೂಲಕ ಮತಗಳ ಸೇರ್ಪಡೆ ಮಾಡಲಾಗಿದೆ. ಫಾರ್ಮ್ ನಂಬರ್ 7 ಮೂಲಕ ಮತಗಳನ್ನ ತೆಗೆದುಹಾಕಲಾಗಿದೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
/filters:format(webp)/newsfirstlive-kannada/media/media_files/2025/09/18/rahul-gandhi-1-2025-09-18-12-31-13.jpg)
ಈ ಹಿಂದೆ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರ ಹಾಗೂ ಕಲ್ಬುರ್ಗಿ ಜಿಲ್ಲೆಯ ಅಳಂದ ಕ್ಷೇತ್ರದಲ್ಲಿ ಮತಕಳ್ಳತನ ಮಾಡಲಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us