/newsfirstlive-kannada/media/media_files/2026/01/26/governor-thawar-chand-ghelot-speech-2026-01-26-09-22-46.jpg)
ಇನ್ನು, ಬೆಂಗಳೂರಿನಲ್ಲೂ ಗಣರಾಜ್ಯೋತ್ಸವದ ಸಂಭ್ರಮ ಎಲ್ಲೆಲ್ಲೂ ಮೇಳೈಸಿತ್ತು.. ಜಂಟಿ ಭಾಷಣ ಅಪೂರ್ಣಗೊಳಿಸಿದ್ದ ರಾಜ್ಯಪಾಲರು ಇವತ್ತು ಪೂರ್ಣ ಭಾಷಣ ಮಾಡಿದ್ರು.. ಭಾಷಣದಲ್ಲಿ ಕೇಂದ್ರದ ವಿರುದ್ಧ ಯಾವುದೇ ಆರೋಪಗಳನ್ನ ಸೇರಿಸಿರಲಿಲ್ಲ.. ಆದ್ರೆ, ಒಕ್ಕೂಟ ವ್ಯವಸ್ಥೆ ಬಗ್ಗೆ ಪರೋಕ್ಷವಾಗಿ ಟಾಂಗ್​​​ ಕೊಟ್ಟಂತಿತ್ತು.. ಇನ್ನು, ಭಾಷಣದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಶಂಸೆ ಇತ್ತು.. ಇದರಿಂದ ಕುಟುಂಬಗಳು ಆರ್ಥಿಕವಾಗಿ ಸಬಲವಾಗ್ತಿವೆ ಅಂತ ಉಲ್ಲೇಖಿಸಿದ್ರು.. ಇನ್ನು, ಪರೇಡ್​​​ ಆಕರ್ಷಕವಾಗಿತ್ತು.. ಜೊತೆಗೆ ದೈನಂದಿನ ಗ್ರಾಮೀಣ ಬದುಕಿನ ಪರಿಚಯವಾಯ್ತು..
ಎಲ್ಲೆಲ್ಲೂ ತ್ರಿವರ್ಣ ಧ್ವಜ.. ದೇಶ ಭಕ್ತಿಗೀತೆಗಳ ಗಾನಸುಧೆ.. ನಾಡಗೀತೆ, ರೈತಗೀತೆ, ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ.. ಪ್ರೇಕ್ಷಕರ ಮನಸೂರೆಗೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು.. ಇದು ಮಾಣಿಕ್ ಶಾ ಪರೇಡ್ ಮೈದಾನದಲ್ಲಿನ 77ನೇ ಗಣರಾಜೋತ್ಸವದ ಸಂಭ್ರಮ..
ಮಾಣಿಕ್​​ ಷಾ ಪರೇಡ್​​​​ ಮೈದಾನದಲ್ಲಿ ರಿಪಬ್ಲಿಕ್​​​​ ಡೇ ವೈಭವ
‘ತ್ರಿವರ್ಣ’ ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲರು!
77ನೇ ಗಣರಾಜ್ಯೋತ್ಸವ ಕರ್ನಾಟಕದ ಎಲ್ಲೆಲ್ಲೂ ಸಂಭ್ರಮ ಕಳೆಗಟ್ಟಿತ್ತು.. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಪಥಸಂಚಲನ ಕಣ್ಮನ ಸಳೆಯಿತು.. ಸಮಾರಂಭದ ಆರಂಭದಲ್ಲಿ ತೆರೆದ ಜೀಪ್‌ನಲ್ಲಿ ರಾಜ್ಯಪಾಲರು ಪೆರೇಡ್ ವೀಕ್ಷಣೆ ಮಾಡಿ ಗೌರವರಕ್ಷೆ ಸ್ವೀಕರಿಸಿದ್ರು.. ಬಳಿಕ ಮಾತನಾಡಿದ ರಾಜ್ಯಪಾಲರು, ಸರ್ಕಾರದ ಪಂಚ ಗ್ಯಾರಂಟಿಗಳ ಗುಣಗಾನ ಮಾಡಿದ್ರು.
ಸರ್ಕಾರದ ಸಾಧನೆಗಳೇ ಗವರ್ನರ್​​​​ ಭಾಷಣದ ಹೈಲೈಟ್ಸ್!
ಒಕ್ಕೂಟ ವ್ಯವಸ್ಥೆ ಉಲ್ಲೇಖಿಸಿ ಕೇಂದ್ರಕ್ಕೆ ಕೊಟ್ರಾ ಟಾಂಗ್?
ಇಡೀ ರಾಜ್ಯದ ಕಣ್ಣು ಇವತ್ತು ರಾಜ್ಯಪಾಲರ ಭಾಷಣದ ಮೇಲೆ ನೆಟ್ಟಿತ್ತು.. ಜಂಟಿ ಅಧಿವೇಶನದಲ್ಲಿ ಭಾಷಣದ ವಿಚಾರಕ್ಕೆ ವಿವಾದ ಭುಗಿಲೆದ್ದು ಹಸಿಯಾಗೇ ಇದೆ. ಈ ಹೊತ್ತಲ್ಲಿ ರಾಜ್ಯಪಾಲರ ಭಾಷಣ ಕುತೂಹಲಕ್ಕೆ ಕಾರಣ ಆಗಿತ್ತು.. ಫೈನಲಿ ರಾಜ್ಯ ಸರ್ಕಾರದ ಯೋಜನೆಗಳನ್ನ ಪ್ರಸ್ತಾಪಿಸಿದ ರಾಜ್ಯಪಾಲರು, ಪೂರ್ಣ ಭಾಷಣ ಓದಿದ್ರು.. ಕೇಂದ್ರದ ವಿರುದ್ಧ ನೇರ ಅಂಶಗಳು ಇಲ್ಲವಾದ್ರೂ, ಒಕ್ಕೂಟ ವ್ಯವಸ್ಥೆಯ ಬಗ್ಗೆ ಪರೋಕ್ಷ ಉಲ್ಲೇಖ ಆಗಿದ್ದು, ಅದನ್ನು ಉಳಿಸುವ ಜವಾಬ್ದಾರಿಯ ಬಗ್ಗೆ ಪ್ರಸ್ತಾಪಿಸಿದ್ರು..
ಗ್ಯಾರಂಟಿಯಿಂದ ಜನಕಲ್ಯಾಣ!
ರಾಜ್ಯಪಾಲರ ಭಾಷಣದಲ್ಲಿ ಗ್ಯಾರಂಟಿ ಯೋಜನೆಗಳ ಗುಣಗಾನ
2024-25ರಲ್ಲಿ 1.37 ಕೋಟಿ ಕುಟುಂಬಗಳು ಯೋಜನೆಯ ಲಾಭ
ಸರ್ಕಾರ ಯೂನಿವರ್ಸಲ್ ಬೇಸಿಕ್ ಇನ್‌ಕಂ ಎಂಬ ತತ್ವ ಪಾಲನೆ
ಗ್ಯಾರಂಟಿಗಳಿಗಾಗಿ ಈವರೆಗೆ 1.13 ಲಕ್ಷ ಕೋಟಿ ರೂ. ವಿನಿಯೋಗ
ಗ್ಯಾರಂಟಿಗಳ ಪರಿಣಾಮ ಜನರಲ್ಲಿ ಕೊಳ್ಳುವ ಶಕ್ತಿಯನ್ನ ಹೆಚ್ಚಿಸಿದೆ
ಮಹಿಳಾ ಸಮುದಾಯಕ್ಕೆ ಹೊಸ ಆರ್ಥಿಕ ಸಾಮಾಜಿಕ ಉತ್ಸಾಹ
ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಬೆಂಗಳೂರು ಮೊದಲ ಸ್ಥಾನ
ಗ್ರಾಹಕ ಬೆಲೆ ಸೂಚ್ಯಂಕಗಳು ಆರೋಗ್ಯಕರ, ರಾಜ್ಯ ಮುಂಚೂಣಿ
ಬೆಂಗಳೂರಿನಲ್ಲಿ ₹1.5 ಲಕ್ಷ ಕೋಟಿ ವೆಚ್ಛದ ಯೋಜನೆ ಕಾಮಗಾರಿ
ರಾಜ್ಯದಲ್ಲಿ ಜಗತ್ತಿನ ದೊಡ್ಡ ಕಂಪೆನಿಗಳು ಹೂಡಿಕೆ ಆಸಕ್ತಿ ತೋರಿವೆ
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಲ್​ಕೆಜಿ, ಯುಕೆಜಿ ತರಗತಿ ಆರಂಭ
ಕಲ್ಯಾಣ ಕರ್ನಾಟಕ ಭಾಗಲ್ಲಿ ಅಕ್ಷರ ಆವಿಷ್ಕಾರ ಯೋಜನೆ ಜಾರಿ
ರಾಜ್ಯಪಾಲರ ಭಾಷಣದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಗುಣಗಾನ ಮಾಡಲಾಗಿದೆ.. 2024-25ನೇ ಸಾಲಿನಲ್ಲಿ ರಾಜ್ಯದಲ್ಲಿ 1.37 ಕೋಟಿ ಕುಟುಂಬಗಳು ಸರ್ಕಾರದ ಒಂದಲ್ಲಾ ಒಂದು ಯೋಜನೆಯ ನೇರ ಆರ್ಥಿಕ ಸೌಲಭ್ಯ ಪಡೆದಿವೆ.. ಸರ್ಕಾರವು 'ಯೂನಿವರ್ಸಲ್ ಬೇಸಿಕ್ ಇನ್‌ಕಂ' ಎಂಬ ತತ್ವದ ಆಧಾರದ ಮೇಲೆ ಗ್ಯಾರಂಟಿ ಯೋಜನೆಗಳಿಗಾಗಿ ಈವರೆಗೆ 1.13 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅನುದಾನವನ್ನು ವಿನಿಯೋಗಿಸಲಾಗಿದೆ.. ಗ್ಯಾರಂಟಿಗಳ ಪರಿಣಾಮ ಜನರ ಕೊಳ್ಳುವ ಶಕ್ತಿಯನ್ನ ಹೆಚ್ಚಿಸಿದೆ.. ಇನ್ನು, ಮಹಿಳಾ ಸಮುದಾಯದಲ್ಲಿ ಹೊಸ ಆರ್ಥಿಕ ಸಾಮಾಜಿಕ ಉತ್ಸಾಹ ಬಂದಿದೆ.. ಇವೆಲ್ಲದರ ಜೊತೆಗೆ ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ಬೆಂಗಳೂರು ದೇಶದಲ್ಲೆ ಮೊದಲ ಸ್ಥಾನದಲ್ಲಿದೆ ಅಂತ ಉಲ್ಲೇಖಿಸಿದ್ರು.. ಗ್ರಾಹಕ ಬೆಲೆ ಸೂಚ್ಯಂಕಗಳು ಆರೋಗ್ಯಕರವಾಗಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ.. ಬೆಂಗಳೂರಿನಲ್ಲಿ ಸುಮಾರು 1.5 ಲಕ್ಷ ಕೋಟಿ ರೂ.ಗಳ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗ್ತಿದ್ದು, ಜಗತ್ತಿನ ದೊಡ್ಡ ಕಂಪೆನಿಗಳ ಹೂಡಿಕೆ ಮಾಡ್ತಿವೆ.. ಸರ್ಕಾರಿ ಶಾಲೆಗಳಲ್ಲಿ ಎಲ್​ಕೆಜಿ, ಯುಕೆಜಿ ತರಗತಿ ಪ್ರಾರಂಭಿಸುವ ಇರಾದೆ ಹೊಂದಿದೆ.. ಕಲ್ಯಾಣ ಕರ್ನಾಟಕ ಭಾಗಲ್ಲಿ ಅಕ್ಷರ ಆವಿಷ್ಕಾರ ಯೋಜನೆ ಕೈಗೆತ್ತಿಕೊಳ್ತಿದೆ ಅಂತ ರಾಜ್ಯಪಾಲರು ಹೇಳಿದ್ರು.
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಪಥಸಂಚಲನ ಎಲ್ಲರ ಗಮನಸೆಳೆಯಿತು.. ಪೊಲೀಸರು, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಸೇವಾದಳಗಳಿಂದ ವಿಶೇಷ ಪರೇಡ್ ನಡೀತು. ಜೊತೆಗೆ ವಿವಿಧ ಶಾಲೆಗಳ ಮಕ್ಕಳು ನಡೆಸಿದ ಪಥಸಂಚಲನ ನೋಡುಗರ ಕಣ್ಮನ ಸೆಳೆಯಿತು. ಪ್ರತಿವರ್ಷದಂತೆ ಈ ವರ್ಷವೂ ಕವಾಯತು ಮತ್ತು ಬ್ಯಾಂಡ್ ಎಲ್ಲರ ಗಮನ ಸೆಳೆಯಿತು..
ವರ್ಣರಂಜಿತ ವೇಷಭೂಷಣದೊಂದಿಗೆ ಮೈದಾನಕ್ಕಿಳಿದ ಮಕ್ಕಳು, ಗ್ರಾಮೀಣ ಆಟಗಳನ್ನ ನೆನಪಿಸಿದ್ರು.. ಮಕರ ಸಂಕ್ರಾಂತಿ ಹಬ್ಬವು ವಿವಿಧ ಧರ್ಮಗಳ ನಡುವಿನ ವೈಷಮ್ಯಗಳನ್ನು ಮರೆತು ಹೊಸ ಸ್ನೇಹ ಮತ್ತು ಸಹಬಾಳ್ವೆಯನ್ನು ಬೆಳೆಸುವ ಸಂದೇಶದ ಸೊಬಗು ಬಡಿಸಿದ್ರು.. ರಾಜ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಬೆಳಕು ಚೆಲ್ಲಲಾಯ್ತು..
ಹರೀಶ್​ ಕಾಕೋಳ್​, ಪೊಲಿಟಿಕಲ್​ ಬ್ಯೂರೋ, ನ್ಯೂಸ್​ಫಸ್ಟ್​
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us