/newsfirstlive-kannada/media/media_files/2025/10/16/priyank_kharge_rss-2025-10-16-16-25-53.jpg)
RSS V/S ಪ್ರಿಯಾಂಕ ಖರ್ಗೆ
ಕಲಬುರಗಿಯ ಚಿತ್ತಾಪುರದಲ್ಲಿ ನವೆಂಬರ್ 2ರ ಆರ್‌ಎಸ್‌ಎಸ್ ಪಥಸಂಚಲನ ವಿಚಾರಕ್ಕೆ ಸಂಬಂಧಿಸಿದಂತೆ ಸಂಘರ್ಷ ಮುಂದುವರಿದಿದೆ. ಆರ್‌ಎಸ್‌ಎಸ್ ಪಥಸಂಚನಕ್ಕೆ ಪ್ರತಿಯಾಗಿ ಜೈ ಭೀಮ್ ಸಂಘಟನೆಯಿಂದಲೂ ಪಥಸಂಚಲನಕ್ಕೆ ಪ್ಲಾನ್ ಮಾಡಲಾಗಿದೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರದಲ್ಲಿ RSS ಪಥ ಸಂಚಲನಕ್ಕೆ ಮನವಿ ಸಲ್ಲಿಸಿದ ಬೆನ್ನಲ್ಲೇ ದಲಿತ ಸಂಘಟನೆಗಳು ಅರ್ಜಿ ಸಲ್ಲಿಸಿವೆ. ನವೆಂಬರ್ 2 ರಂದೇ ನಮಗೂ ಪಥ ಸಂಚಲನಕ್ಕೆ ಅನುಮತಿ ಕೊಡಿ ಎಂದು ಭೀಮ್ ಆರ್ಮಿ, ದಲಿತ ಸಂಘಟನೆಗಳು ಮನವಿ ಸಲ್ಲಿಕೆ ಮಾಡಿವೆ. ಜಿಲ್ಲಾಡಳಿತಕ್ಕೆ ಭೀಮ್ ಆರ್ಮಿ ಹಾಗೂ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಮುಖಂಡರು ಮನವಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ RSS V/s ದಲಿತ ಸಂಘಟನೆಗಳ ಮಧ್ಯೆ ಪಥ ಸಂಚಲನ ಸಮರ ಶುರುವಾಗಿದೆ. ಚಿತ್ತಾಪುರದಲ್ಲಿ ಒಂದೇ ದಿನ ಎರಡು ಬೇರೆ ಬೇರೆ ಸಂಘಟನೆಗಳು ಱಲಿ ಮತ್ತು ಪಥ ಸಂಚಲನಕ್ಕೆ ಮನವಿ ಮಾಡಿವೆ.
ಈಗ ಕಲ್ಬುರ್ಗಿ ಜಿಲ್ಲಾಡಳಿತ ನವಂಬರ್ 2 ರಂದು ಚಿತ್ತಾಪುರದಲ್ಲಿ ಯಾವ ಸಂಘಟನೆಗೆ ಱಲಿ ಮತ್ತು ಪಥ ಸಂಚಲನಕ್ಕೆ ಅವಕಾಶ ಕೊಡುತ್ತೆ , ಯಾವ ಸಂಘಟನೆಯ ಮನವಿಯನ್ನು ತಿರಸ್ಕರಿಸುತ್ತೆ ಎಂಬ ಕುತೂಹಲ ಮನೆ ಮಾಡಿದೆ. ಜಿಲ್ಲಾಡಳಿತವು ಯಾವುದಾದರೊಂದು ಸಂಘಟನೆಗೆ ಮಾತ್ರವೇ ನವಂಬರ್ 2 ರಂದು ಱಲಿ, ಪಥಸಂಚಲನ ನಡೆಸಲು ಅವಕಾಶ ನೀಡಿ, ಮತ್ತೊಂದು ಸಂಘಟನೆಯ ಮನವಿಯನ್ನು ತಿರಸ್ಕರಿಸಬಹುದು. ಹೀಗಾಗಿ ಜಿಲ್ಲಾಡಳಿತದ ತೀರ್ಮಾನವೇ ಈಗ ಕುತೂಹಲಕ್ಕೆ ಕಾರಣವಾಗಿದೆ.
ಮೊನ್ನೆ ಭೀಮ್ ಆರ್ಮಿ,ದಲಿತ ಪ್ಯಾಂಥರ್ಸ್ ಸಂಘಟನೆಗಳು ಅನುಮತಿ ಕೇಳಿವೆ. ಚಾಮರಾಜನಗರ ಇನ್ನಿತರೆ ಕಡೆಯೂ ಅನುಮತಿ ಕೇಳಿದ್ದಾರೆ. ಎಲ್ಲರಿಗೂ ಒಂದೇ, ಮಾನದಂಡ ಎಲ್ಲರಿಗೂ ಅನ್ವಯಿಸುತ್ತದೆ. ಅವರು ಯಾರೇ ಇರಲಿ ಎಲ್ಲರಿಗೂ ಒಂದೇ ಮಾನದಂಡ. ಹೈಕೋರ್ಟ್ ಅನುಮತಿ ಬಗ್ಗೆ ಹೇಳಿದೆ. ವಾತಾವರಣ ಚೆನ್ನಾಗಿದ್ರೆ ಮಾಡಲಿ, ಸರಿಯಿಲ್ಲ ಅಂದ್ರೆ ಹೇಗೆ ಮಾಡೋಕೆ ಸಾಧ್ಯ. ಯಾವುದೇ ಸಂಘಟನೆ ಮಾಹಿತಿ ಕೊಡಬೇಕು. ನಾವು ಇಷ್ಟು ಜನ ಹೋಗ್ತೇವೆ ಅಂತ ಲೈನ್ ಒನ್ ಲೈನ್ ಟು ಕೊಡಬೇಕು. ಏನಾಗುತ್ತೆ ಅನ್ನೋದನ್ನು ನೋಡೋಣ ಎಂದು ಚಿತ್ತಾಪುರ ಕ್ಷೇತ್ರದ ಶಾಸಕರೂ ಆದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ದಲಿತ ಸಂಘಟನೆಗೆ ಪ್ರಿಯಾಂಕ ಖರ್ಗೆ ಪ್ರಾಯೋಕರು ಎಂಬ ಆರೋಪಕ್ಕೆ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಹೌದು.. ನಾನು ಪ್ರಾಯೋಜಕ ಅಂತ ತಿಳಿದುಕೊಳ್ಳಿ. ಆರ್‌ಎಸ್‌ಎಸ್ ಗೆ ಯಾರಿದ್ದಾರೆ ಹೇಳಲಿ, ಅವರಿಗೆ ಎಲ್ಲಿಂದ ದುಡ್ಡು ಬರುತ್ತೆ. ನೋಂದಣಿ ಆಗದ ಸಂಸ್ಥೆಗೆ ಎಲ್ಲಿಂದ ಬರುತ್ತೆ. ಬಟ್ಟೆ ತೆಗೆಯೋಕೆ, ಬಿಲ್ಡಿಂಗ್ ಕಟ್ಟೋಕೆ ಎಲ್ಲಿಂದ ದುಡ್ಡು ಬರುತ್ತೆ. ಅಧಿಕೃತ ಇದ್ದರೆ ಎಲ್ಲದಕ್ಕೆ ರಿಜಿಸ್ಟರ್ ಇರುತ್ತೆ, ಅನ್ ರಿಜಿಸ್ಟರ್ ಇದ್ರೆ ಏನೂ ತೋರಿಸೋಕೆ ಆಗಲ್ಲ. ಯಾರೂ ಕೇಳೋದಿಲ್ಲ ಅಂತ, ಟ್ಯಾಕ್ಸ್ ಮತ್ತೊಂದು ಕೇಳುವುದೇ ಇಲ್ಲವಲ್ಲ, ಯಾರು ರಸ್ತೆಯಲ್ಲಿ ನಮಾಜ್ ಮಾಡೋಕೆ ಬರೋದಿಲ್ಲ. ಪರ್ಮಿಷನ್ ಕೊಟ್ರೆ ಮಾಡಿ, ಇಲ್ಲವಾದರೆ ಬಿಡಿ, ಎಲ್ಲರಿಗೂ ಸಂವಿಧಾನ ಅನ್ವಯ ಆಗುವುದಿಲ್ಲವೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/09/18/priyank_kharge-2025-09-18-22-56-09.jpg)
ಪ್ರಚಾರ ಪಡೆಯಲು ಸಚಿವ ಪ್ರಿಯಾಂಕ ಖರ್ಗೆ ಹೀಗೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ ಮಾಡಿದ್ದಾರೆ. ನವಂಬರ್ 2 ರಂದು ಆರ್ ಎಸ್ ಎಸ್ ಪಥಸಂಚಲಕ್ಕೆ ಅವಕಾಶ ಕೇಳಿದೆ. ಭೀಮ ಆರ್ಮಿಯೂ ಅಂದೇ ಅವಕಾಶ ಕೊಡುವಂತೆ ಕೇಳಿದೆ. ಸೌಹಾರ್ದಯುತವಾಗಿ ಮೆರವಣಿಗೆ ಮಾಡಲು ಎಲ್ಲ ಸಂಘಟನೆಗಳಿಗೂ ಹಕ್ಕಿದೆ . ಭೀಮ ಆರ್ಮಿ ರಾಲಿ ಮಾಡೋದಕ್ಕೆ ನಮ್ಮ ತಕರಾರಿಲ್ಲ . ಡಾ.ಅಂಬೇಡ್ಕರ್ ಹೆಸರಲ್ಲಿ ರಾಲಿ ಮಾಡೋದಕ್ಕೆ ನಮ್ಮ ಸ್ವಾಗತ ಇದೆ . ಯಾರಿಗೆ ಯಾವತ್ತು ಅನುಮತಿ ಕೊಡಬೇಕು ಅನ್ನೋದನ್ನ ಜಿಲ್ಲಾಡಳಿತ ನಿರ್ಧರಿಸಲಿ . ಜಿಲ್ಲಾಡಳಿತ ಅನುಮತಿ ಕೊಟ್ಟ ದಿನದಂದು ಆರ್ ಎಸ್ ಎಸ್ ಪಥ ಸಂಚಲನ ನಡೆಸಲಿದೆ . ಸಚಿವ ಪ್ರಿಯಾಂಕಾ ಖರ್ಗೆ ಉದ್ದೇಶವೇ ಬೇರೆ ಇದೆ ಎಂದು ಕೇಂದ್ರದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಕಲಬುರಗಿಯ ಚಿತ್ತಾಪುರದಲ್ಲಿ ನವೆಂಬರ್ 2ರ ಆರ್‌ಎಸ್‌ಎಸ್ ಪಥಸಂಚಲನ ವಿಚಾರಕ್ಕೆ ಸಂಬಂಧಿಸಿದಂತೆ ಸಂಘರ್ಷ ಮುಂದುವರಿದಿದೆ. ಆರ್‌ಎಸ್‌ಎಸ್ ಪಥಸಂಚನಕ್ಕೆ ಪ್ರತಿಯಾಗಿ ಜೈ ಭೀಮ್ ಸಂಘಟನೆಯಿಂದಲೂ ಪಥಸಂಚಲನಕ್ಕೆ ಪ್ಲಾನ್ ಮಾಡಲಾಗಿದೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರೀಯಾಂಕ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರದಲ್ಲಿ RSS ಪಥ ಸಂಚಲನಕ್ಕೆ ಮನವಿ ಸಲ್ಲಿಸಿದ ಬೆನ್ನಲ್ಲೇ ದಲಿತ ಸಂಘಟನೆಗಳು ಅರ್ಜಿ ಸಲ್ಲಿಸಿವೆ. ನವೆಂಬರ್ 2 ರಂದೇ ನಮಗೂ ಪಥ ಸಂಚಲನಕ್ಕೆ ಅನುಮತಿ ಕೊಡಿ ಎಂದು ಮನವಿ ಸಲ್ಲಿಕೆ ಮಾಡಿವೆ. ಜಿಲ್ಲಾಡಳಿತಕ್ಕೆ ಭೀಮ್ ಆರ್ಮಿ ಹಾಗೂ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಮುಖಂಡರು ಮನವಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ RSS V/s ದಲಿತ ಸಂಘಟನೆಗಳ ಮಧ್ಯೆ ಪಥ ಸಂಚಲನ ಸಮರ ಶುರುವಾಗಿದೆ.
ಮೊನ್ನೆ ಭೀಮ್ ಆರ್ಮಿ,ದಲಿತ ಪ್ಯಾಂಥರ್ಸ್ ಸಂಘಟನೆಗಳು ಅನುಮತಿ ಕೇಳಿವೆ. ಚಾಮರಾಜನಗರ ಇನ್ನಿತರೆ ಕಡೆಯೂ ಅನುಮತಿ ಕೇಳಿದ್ದಾರೆ. ಎಲ್ಲರಿಗೂ ಒಂದೇ, ಮಾನದಂಡ ಎಲ್ಲರಿಗೂ ಅನ್ವಯಿಸುತ್ತದೆ. ಅವರು ಯಾರೇ ಇರಲಿ ಎಲ್ಲರಿಗೂ ಒಂದೇ ಮಾನದಂಡ. ಹೈಕೋರ್ಟ್ ಅನುಮತಿ ಬಗ್ಗೆ ಹೇಳಿದೆ. ವಾತಾವರಣ ಚೆನ್ನಾಗಿದ್ರೆ ಮಾಡಲಿ, ಸರಿಯಿಲ್ಲ ಅಂದ್ರೆ ಹೇಗೆ ಮಾಡೋಕೆ ಸಾಧ್ಯ. ಯಾವುದೇ ಸಂಘಟನೆ ಮಾಹಿತಿ ಕೊಡಬೇಕು. ನಾವು ಇಷ್ಟು ಜನ ಹೋಗ್ತೇವೆ ಅಂತ ಲೈನ್ ಒನ್ ಲೈನ್ ಟು ಕೊಡಬೇಕು. ಏನಾಗುತ್ತೆ ಅನ್ನೋದನ್ನು ನೋಡೋಣ ಎಂದು ಚಿತ್ತಾಪುರ ಕ್ಷೇತ್ರದ ಶಾಸಕರೂ ಆದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ದಲಿತ ಸಂಘಟನೆಗೆ ಪ್ರಿಯಾಂಕ ಖರ್ಗೆ ಪ್ರಾಯೋಕರು ಎಂಬ ಆರೋಪಕ್ಕೆ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಹೌದು.. ನಾನು ಪ್ರಾಯೋಜಕ ಅಂತ ತಿಳಿದುಕೊಳ್ಳಿ. ಆರ್‌ಎಸ್‌ಎಸ್ ಗೆ ಯಾರಿದ್ದಾರೆ ಹೇಳಲಿ, ಅವರಿಗೆ ಎಲ್ಲಿಂದ ದುಡ್ಡು ಬರುತ್ತೆ. ನೋಂದಣಿ ಆಗದ ಸಂಸ್ಥೆಗೆ ಎಲ್ಲಿಂದ ಬರುತ್ತೆ. ಬಟ್ಟೆ ತೆಗೆಯೋಕೆ, ಬಿಲ್ಡಿಂಗ್ ಕಟ್ಟೋಕೆ ಎಲ್ಲಿಂದ ದುಡ್ಡು ಬರುತ್ತೆ. ಅಧಿಕೃತ ಇದ್ದರೆ ಎಲ್ಲದಕ್ಕೆ ರಿಜಿಸ್ಟರ್ ಇರುತ್ತೆ, ಅನ್ ರಿಜಿಸ್ಟರ್ ಇದ್ರೆ ಏನೂ ತೋರಿಸೋಕೆ ಆಗಲ್ಲ. ಯಾರೂ ಕೇಳೋದಿಲ್ಲ ಅಂತ, ಟ್ಯಾಕ್ಸ್ ಮತ್ತೊಂದು ಕೇಳುವುದೇ ಇಲ್ಲವಲ್ಲ, ಯಾರು ರಸ್ತೆಯಲ್ಲಿ ನಮಾಜ್ ಮಾಡೋಕೆ ಬರೋದಿಲ್ಲ. ಪರ್ಮಿಷನ್ ಕೊಟ್ರೆ ಮಾಡಿ, ಇಲ್ಲವಾದರೆ ಬಿಡಿ, ಎಲ್ಲರಿಗೂ ಸಂವಿಧಾನ ಅನ್ವಯ ಆಗುವುದಿಲ್ಲವೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಪ್ರಚಾರ ಪಡೆಯಲು ಸಚಿವ ಪ್ರಿಯಾಂಕ ಖರ್ಗೆ ಹೀಗೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ ಮಾಡಿದ್ದಾರೆ. ನವಂಬರ್ 2 ರಂದು ಆರ್ ಎಸ್ ಎಸ್ ಪಥಸಂಚಲಕ್ಕೆ ಅವಕಾಶ ಕೇಳಿದೆ. ಭೀಮ ಆರ್ಮಿಯೂ ಅಂದೇ ಅವಕಾಶ ಕೊಡುವಂತೆ ಕೇಳಿದೆ. ಸೌಹಾರ್ದಯುತವಾಗಿ ಮೆರವಣಿಗೆ ಮಾಡಲು ಎಲ್ಲ ಸಂಘಟನೆಗಳಿಗೂ ಹಕ್ಕಿದೆ . ಭೀಮ ಆರ್ಮಿ ರಾಲಿ ಮಾಡೋದಕ್ಕೆ ನಮ್ಮ ತಕರಾರಿಲ್ಲ . ಡಾ.ಅಂಬೇಡ್ಕರ್ ಹೆಸರಲ್ಲಿ ರಾಲಿ ಮಾಡೋದಕ್ಕೆ ನಮ್ಮ ಸ್ವಾಗತ ಇದೆ . ಯಾರಿಗೆ ಯಾವತ್ತು ಅನುಮತಿ ಕೊಡಬೇಕು ಅನ್ನೋದನ್ನ ಜಿಲ್ಲಾಡಳಿತ ನಿರ್ಧರಿಸಲಿ . ಜಿಲ್ಲಾಡಳಿತ ಅನುಮತಿ ಕೊಟ್ಟ ದಿನದಂದು ಆರ್ ಎಸ್ ಎಸ್ ಪಥ ಸಂಚಲನ ನಡೆಸಲಿದೆ . ಸಚಿವ ಪ್ರಿಯಾಂಕಾ ಖರ್ಗೆ ಉದ್ದೇಶವೇ ಬೇರೆ ಇದೆ ಎಂದು ಕೇಂದ್ರದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2023/12/Joshi-hari.jpg)
ಆರ್ಎಸ್ಎಸ್ ಸಂಘಟನೆಯ ಶಿವರಾಮ್‌ಮುಂಜೆ ಇಟಲಿಯಲ್ಲಿ ಮುಸೊಲಿನಿ ಭೇಟಿಯಾಗಿ ಅಲ್ಲಿಯ ಪ್ಯಾಸಿಸ್ಟ್ ಪದ್ದತಿಯನ್ನು ಇಲ್ಲಿ ಜಾರಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಆರ್‌ಎಸ್‌ಎಸ್ ಸಂವಿಧಾನ ಒಪ್ಪಲಿಲ್ಲ, ವಿದೇಶಿ ಬಳುವಳಿ ಎಂದರು. ಆದರೆ ಅವರು ಫ್ಯಾಸಿಸ್ಟ್ ಪದ್ದತಿ ಅನುಸರಿಸುತ್ತಿದ್ದಾರೆ. ಆರ್‌ಎಸ್‌ಎಸ್ ಪಥ ಸಂಚಲನ ಮಾಡುವುದಾದರೆ ಪಾಕ್, ಚೀನಾ ಗಡಿಯಲ್ಲಿ ಮಾಡಲಿ. ಈ ದೇಶದಲ್ಲಿ ಕಾನೂನು ಸುವ್ಯವಸ್ಥೆ ಇದೆ, ಅದನ್ನು ಕೆಡಿಸಲು ಪ್ರಯತ್ನ ಮಾಡುತ್ತಾರೆ. ಅದಕ್ಕೆ ಪಥಸಂಚಲನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ ಎಂದು ಬಿ.ಕೆ.ಹರಿಪ್ರಸಾದ್ ದೆಹಲಿಯಲ್ಲಿ ಹೇಳಿದ್ದಾರೆ.
ರಾಜ್ಯ ಸರ್ಕಾರದಿಂದ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಕ್ರಮದ ಬಗ್ಗೆ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ . RSS ದೇಶಕ್ಕಾಗಿ ಕೆಲಸ ಮಾಡುವ ಸಂಸ್ಥೆ. ಕರ್ನಾಟಕದಲ್ಲಿ ಆಗಿರುವ ಘಟನೆಯನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ. ಇದು ಒಳ್ಳೆಯ ಪದ್ಧತಿ ಅಲ್ಲ. ಆರ್​ಎಸ್​ಎಸ್​ ಒಂದು ರಾಜಕೀಯ ಪಕ್ಷ ಅಲ್ಲ. ಒಂದು ಸಾಂಸ್ಕೃತಿಕ, ರಾಷ್ಟ್ರೀಯವಾದಿ ಸಂಸ್ಥೆ ಅಂತ ಮಾನ್ಯ ಸುಪ್ರೀಂಕೋರ್ಟ್​ ಹೇಳಿದೆ. ಹಲವು ರಾಜ್ಯಗಳಲ್ಲಿ ಮಾನ್ಯ ಹೈಕೋರ್ಟ್​ಗಳೂ ತೀರ್ಪುಗಳನ್ನ ಕೊಟ್ಟಿವೆ. ಅದನ್ನ ಕರ್ನಾಟಕ ಸರ್ಕಾರ ಗುರುತಿಸಬೇಕು ಎಂದು ಕೇಂದ್ರ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಹೇಳಿದ್ದಾರೆ.
ಒಟ್ಟಿನಲ್ಲಿ ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಆರ್‌ಎಸ್ಎಸ್ ಪಥ ಸಂಚಲನ ಈಗ ಭಾರಿ ವಾಕ್ ಸಮರಕ್ಕೆ , ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಆಲ್ ಐಸ್ ಆನ್ ಚಿತ್ತಾಪುರ ಎಂದು ಸಂಘ ಪರಿವಾರದ ಸಂಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಮಾಡುತ್ತಿವೆ.
ಜೊತೆಗೆ ಮುಂದಿನ 2028 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಲ್ಲೇ ಪ್ರಿಯಾಂಕ್ ಖರ್ಗೆ ರನ್ನು ಸೋಲಿಸಲೇಬೇಕೆಂದು ಬಿಜೆಪಿ ಕೂಡ ಪಣ ತೊಟ್ಟಿದೆ. ಇದಕ್ಕೆ ಈಗಿನಿಂದಲೇ ಸಿದ್ದತೆ ನಡೆಸುವಂತೆ ಆರ್‌ಎಸ್ಎಸ್ ಕೂಡ ಬಿಜೆಪಿಗೆ ಸ್ಪಷ್ಟ ಸೂಚನೆ ನೀಡಿದೆ. ಆರ್‌ಎಸ್ಎಸ್ ಸಂಘಟನೆಯನ್ನು ಕೆಣಕಿದವರನ್ನು ಅವರದ್ದೇ ಕ್ಷೇತ್ರದಲ್ಲೇ ಸೋಲಿಸಬೇಕೆಂದು ಆರ್‌ಎಸ್ಎಸ್ ಹಾಗೂ ಬಿಜೆಪಿ ಈಗ ಪಣ ತೊಟ್ಟಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಲ್ಬುರ್ಗಿ ಲೋಕಸಭಾ ಕ್ಷೇತ್ರದಲ್ಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದಂತೆ, 2028 ರಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಮರಿ ಖರ್ಗೆ , ಪ್ರಿಯಾಂಕ್ ಖರ್ಗೆರನ್ನು ಸೋಲಿಸಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us