/newsfirstlive-kannada/media/media_files/2025/08/28/mohan-bhagwat-2025-08-28-21-01-09.jpg)
ಮೋಹನ್ ಭಾಗವತ್
ಆರ್ಎಸ್ಎಸ್ ಸ್ಥಾಪನೆಗೆ ಶತಮಾನೋತ್ಸವ ಸಂಭ್ರಮ.. ಈ ಸಂಭ್ರಮದ ನಿಮಿತ್ತ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಹತ್ತಾರು ಸಂಶಯಗಳಿಗೆ ತೆರೆ ಎಳೆದಿದ್ದಾರೆ.. ಮುಖ್ಯವಾಗಿ ಮೋದಿ ವಯಸ್ಸಿನ ನಿವೃತ್ತಿ ಮತ್ತು ಪ್ರತಿ ಕುಟುಂಬವೂ ಮೂರು ಮಕ್ಕಳನ್ನು ಹೊಂದುವುದು ಅಗತ್ಯ ಅನ್ನೋ ಸಂದೇಶ ನೀಡಿದ್ದಾರೆ.. ಇದೇ ವೇಳೆ, 1947ರ ದೇಶ ವಿಭಜನೆ ಬಗ್ಗೆಯೂ ಮಾತ್ನಾಡಿದ್ದಾರೆ..
ಸೆಪ್ಟೆಂಬರ್ 17, 1950.. ಅಂದ್ರೆ ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿಗೆ 75ರ ವಯಸ್ಸು.. ಭಾರತದ ರಾಜಕೀಯ ಇತಿಹಾಸದಲ್ಲಿ ಮೊದಲ ಸಲ ಪ್ರಧಾನಿಯೊಬ್ಬರ ವಯಸ್ಸಿನ ಬಗ್ಗೆ ಚರ್ಚೆ ಆಗ್ತಿದೆ.. ಇದಕ್ಕೆ ಕಾರಣ ಬಿಜೆಪಿಯ ಹೊಂದಿರುವ ಅಲಿಖಿತ ನಿಯಮ.. ಅಂದ್ಹಾಗೆ ಪ್ರಧಾನಿ ಮೋದಿ ಸೆಪ್ಟೆಂಬರ್‌ನಲ್ಲಿ ನಿವೃತ್ತಿ ಆಗ್ತಾರ? ದಟ್ಟವಾಗಿ ಹಬ್ಬಿದ ಊಹಾಪೋಹಗಳಿಗೆ ತೆರೆಬಿದ್ದಿದೆ.. 75 ವರ್ಷ ದಾಟಿದ ಮೇಲೆ ಹುದ್ದೆಯಿಂದ ಕೆಳಗಿಳಿಯಬೇಕು ಎಂಬ ನಿಯಮವಿಲ್ಲ ಎಂದು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಇಷ್ಟವಿರಲಿ, ಇಲ್ಲದಿರಲಿ, ವಹಿಸಿರುವ ಜವಾಬ್ದಾರಿ ನಿರ್ವಹಿಸಬೇಕು!
ಪ್ರಧಾನಿ ಮೋದಿ ಜನ್ಮದಿನಕ್ಕೂ ಮೊದಲೇ ಭಾಗವತ್ ಯೂಟರ್ನ್
ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಮಾತೃಸಂಸ್ಥೆ ಆರ್‌ಎಸ್‌ಎಸ್ ಎದ್ದ ವದಂತಿಗೆ ತೆರೆ ಎಳೆದಿದೆ.. 75 ವರ್ಷ ದಾಟಿದ ನಾಯಕರಿಗೆ ನಿವೃತ್ತಿ ನೀಡುವ ಅಲಿಖಿತ ನಿಯಮದ ಚರ್ಚೆಗಳಿಗೆ ಪೂರ್ಣ ವಿರಾಮ ಹಾಕಿದ್ದಾರೆ.. ಕಳೆದ ತಿಂಗಳಷ್ಟೆ ನಿವೃತ್ತಿಯ ಸೂಚನೆ ರವಾನಿಸಿದ್ದ ಸಂಘದ ಸರ್ವೋಚ್ಛ ನಾಯಕ ಮೋಹನ್ ಭಾಗವತ್, ದಿಢೀರ್ ತಮ್ಮ ಮಾತಿನಿಂದ ಯೂಟರ್ನ್ ಹೊಡೆದಿದ್ದಾರೆ..
75 ವರ್ಷವಾದಾಗ ನಾನು ನಿವೃತ್ತಿಯಾಗುತ್ತೇನೆ ಅಥವಾ ಬೇರೆಯವರು ನಿವೃತ್ತಿಯಾಗಬೇಕು ಅಂತ ಹೇಳಿಲ್ಲ.. ಸಂಘ ನಮಗೆ ಏನು ಹೇಳುತ್ತದೆಯೋ ಅದನ್ನು ನಾವು ಮಾಡುತ್ತೇವೆ. ನಾವೆಲ್ಲರೂ ಸಂಘದ ಸ್ವಯಂ ಸೇವಕರು. ನಮಗೆ ಇಷ್ಟವಿರಲಿ, ಇಲ್ಲದಿರಲಿ, ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ನನಗೆ 80 ವರ್ಷವಾದ್ರೂ ಸಂಘ ನಡೆಸು ಅಂದ್ರೆ ಮುನ್ನಡೆಸಬೇಕು. ಇಲ್ಲ ನನಗೆ 75 ವರ್ಷ ಆಗಿದೆ. ನಾನು ವಿಶ್ರಾಂತ ಜೀವನ ಕಳೆಯಲು ಬಯಸ್ತೇನೆ ಅಂತ ಹೇಳುವಂತಿಲ್ಲ.
- ಮೋಹನ್ ಭಾಗವತ್, ಆರ್ಎಸ್ಎಸ್ ಮುಖ್ಯಸ್ಥ
ನಾನು 80 ವರ್ಷವಾದ್ರೂ ಸಂಘವನ್ನ ಮುನ್ನಡೆಸ್ತೇನೆ ಅನ್ನೋ ಮೂಲಕ ಮೋಹನ್ ಭಾಗವತ್ ಅವರು ವದಂತಿಗೆ ಬ್ರೇಕ್ ಹಾಕಿದ್ದಾರೆ..
ಮತಾಂತರ ಜನಸಂಖ್ಯೆಯ ಅಸಮತೋಲನಕ್ಕೆ ಕಾರಣ
ಜನಸಂಖ್ಯೆ ಸಮತೋಲನಕ್ಕೆ 3 ಮಕ್ಕಳನ್ನ ಮಾಡಿಕೊಳ್ಳಿ
ಇದೇ ವೇಳೆ, ಜನಸಂಖ್ಯಾ ಅಸಮತೋಲನ ಬಗ್ಗೆ ಮಾತ್ನಾಡಿದ ಭಾಗವತ್, ಪ್ರತಿಯೊಬ್ಬ ದಂಪತಿ, ಮೂರು ಮಕ್ಕಳನ್ನು ಹೊಂದುವುದು ಸೂಕ್ತ ಅಂತ ಅಭಿಪ್ರಾಯ ಪಟ್ಟಿದ್ದಾರೆ..
ಒಟ್ಟಾರೆ, ಮೋಹನ್ ಭಾಗವತ್ ಕೊಟ್ಟ ನಿನ್ನೆಯ ಸಂದೇಶ, ಬಿಜೆಪಿಯಲ್ಲಿನ ಸಂಘರ್ಷಕ್ಕೆ ವಿರಾಮ ನೀಡಿದೆ.. ತಮ್ಮ ಹೇಳಿಕೆಯಿಂದ ಪ್ರಧಾನಿ ಮೋದಿ ನಿವೃತ್ತಿ ಕುರಿತಾದ ರಾಜಕೀಯ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ..
ಆದರೇ, ಮೋಹನ್ ಭಾಗವತ್ ಅವರನ್ನು ಹೇಳಿಕೆಯನ್ನು ಕಾಂಗ್ರೆಸ್ ಟೀಕಿಸಿದೆ. ಆರ್.ಎಸ್.ಎಸ್ ಹಾಗೂ ಬಿಜೆಪಿ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಬೇರೆಯವರಿಗೆಲ್ಲಾ 75 ವರ್ಷ ವಯಸ್ಸಿನ ಮಿತಿ ವಿಧಿಸಿದ್ದ ಬಿಜೆಪಿ ಹಾಗೂ ಆರ್‌ಎಸ್ಎಸ್ ಈಗ ಮೋಹನ್ ಭಾಗವತ್ ಮತ್ತು ಪ್ರಧಾನಿ ಮೋದಿಗೆ ಮಾತ್ರ ವಯಸ್ಸಿನ ಮಿತಿ ಇಲ್ಲ ಎಂದು ಹೇಳುತ್ತಿದ್ದಾರೆ. ಇದು ಆರ್‌ಎಸ್ಎಸ್ ಹಾಗೂ ಬಿಜೆಪಿಯ ಅನುಕೂಲ ಸಿಂಧು ರಾಜಕಾರಣ ಎಂದು ಕಾಂಗ್ರೆಸ್ ಟೀಕಿಸಿದೆ.
75 ವರ್ಷ ದಾಟಿದ ಮೇಲೆ ಹುದ್ದೆಯಿಂದ ಕೆಳಗಿಳಿಯಬೇಕು ಎಂಬ ನಿಮಯ ಇಲ್ಲ ಎನ್ನುವುದಾದರೇ, ಲಾಲ್ ಕೃಷ್ಣ ಅಡ್ವಾಣಿ, ಮುರುಳಿ ಮನೋಹರ್ ಜೋಷಿ, ಶಾಂತಾಕುಮಾರ್, ಕರ್ನಾಟಕದ ಬಿ.ಎಸ್.ಯಡಿಯೂರಪ್ಪರನ್ನು ಹುದ್ದೆಯಿಂದ ಕೆಳಗೆ ಇಳಿಸಿದ್ದು ಏಕೆ, ಮತ್ತೆ ಎಂಪಿ ಎಲೆಕ್ಷನ್ ಗೆ ಹಿರಿಯ ನಾಯಕರಿಗೇಕೆ ಟಿಕೆಟ್ ನೀಡದೇ ಮಾರ್ಗದರ್ಶಕ ಮಂಡಳಿಗೆ ಸೇರಿಸಿ ನಿವೃತ್ತಿ ನೀಡಿದ್ದು ಏಕೆ ಎಂದು ಕಾಂಗ್ರೆಸ್ ನಾಯಕರು ಹಾಗೂ ಬಿಜೆಪಿಯೊಳಗಿನ ನಾಯಕರೇ ಪ್ರಶ್ನಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.