Advertisment

ಚಿತ್ತಾಪುರದಲ್ಲಿ ಆರ್‌ಎಸ್ಎಸ್‌ ಪಥ ಸಂಚಲನ ವಿವಾದ: ನವಂಬರ್‌ 5 ರಂದು ಮತ್ತೊಂದು ಸುತ್ತಿನ ಶಾಂತಿ ಸಭೆ ನಿಗದಿ, ಬಳಿಕ ದಿನಾಂಕ ನಿಗದಿ

ನವಂಬರ್ 2 ರಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಯಲ್ಲ. ನವಂಬರ್ 5 ರಂದು ಬೆಂಗಳೂರಿನ ಅಡ್ವೋಕೇಟ್ ಜನರಲ್ ಕಚೇರಿಯಲ್ಲಿ ಮತ್ತೊಂದು ಸುತ್ತಿನ ಶಾಂತಿ ಸಭೆ ನಡೆಸಲು ಹೈಕೋರ್ಟ್ ಸೂಚಿಸಿದೆ. ನವಂಬರ್ 7 ರಂದು ಹೈಕೋರ್ಟ್ ನಲ್ಲಿ ಮತ್ತೆ ವಿಚಾರಣೆ ನಿಗದಿಯಾಗಿದೆ.

author-image
Chandramohan
PRIYANK_KHARGE_RSS

RSS V/S ಪ್ರಿಯಾಂಕ್ ಖರ್ಗೆ

Advertisment

ನವಂಬರ್ 2 ರಂದು ಕಲ್ಬುರ್ಗಿಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ನಡೆಸಲು ಉದ್ದೇಶಿಸಿರುವ ಪಥ ಸಂಚಲನ ನಡೆಯಲ್ಲ. ನವಂಬರ್ 5  ರಂದು ಬೆಂಗಳೂರಿನ ಅಡ್ವೋಕೇಟ್ ಜನರಲ್ ಕಚೇರಿಯಲ್ಲಿ ಮತ್ತೊಂದು ಸುತ್ತಿನ ಶಾಂತಿ ಸಭೆ ನಡೆಯಲಿದೆ. ಹೈಕೋರ್ಟ್ ಸೂಚನೆಯ ಮೇರೆಗೆ ಈ ಶಾಂತಿಸಭೆ ನಡೆಯಲಿದೆ. ಶಾಂತಿ ಸಭೆಯಲ್ಲಿ ಹೈಕೋರ್ಟ್ ನ ರಿಟ್ ಅರ್ಜಿದಾರರು ಹಾಗೂ ಉಳಿದ ಅರ್ಜಿದಾರರು ಕೂಡ ಭಾಗಿಯಾಗುವರು.   ಶಾಂತಿ ಸಭೆಯಲ್ಲಿ ಆರ್‌ಎಸ್ಎಸ್ ಪಥ ಸಂಚಲನವನ್ನು  ಯಾವಾಗ ನಡೆಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತೆ. ಬಳಿಕ ಶಾಂತಿ ಸಭೆಯ ತೀರ್ಮಾನವನ್ನು ಹೈಕೋರ್ಟ್ ಗೆ ತಿಳಿಸಲಾಗುತ್ತೆ. ಹೈಕೋರ್ಟ್ ಆದೇಶದ ಮೇರೆಗೆ ಆರ್‌ಎಸ್‌ಎಸ್ ಪಥ ಸಂಚಲನವನ್ನು ಯಾವಾಗ, ಹೇಗೆ ನಡೆಸಬೇಕೆಂದು ತೀರ್ಮಾನಿಸಲಾಗುತ್ತೆ.

Advertisment

HIGH COURT OF KARNATAKA



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

RSS ROUTE MARCH IN CHITTAPURA
Advertisment
Advertisment
Advertisment