/newsfirstlive-kannada/media/media_files/2026/03/04/rupees-against-dollar-down-2026-03-04-11-42-55.jpg)
ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ
ಜಾಗತಿಕ ಸಂಘರ್ಷ, ಕಚ್ಚಾತೈಲದ ಬೆಲೆ ಏರಿಕೆಯ ಕಾರಣದಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಇದೇ ಮೊದಲ ಭಾರಿಗೆ 92 ರೂಪಾಯಿಗೆ ಕುಸಿದಿದೆ. ಇಂದು ಅಮೆರಿಕಾದ ಡಾಲರ್ ಎದುರು ರೂಪಾಯಿ ಮೌಲ್ಯ 92 ರೂಪಾಯಿ 17 ಪೈಸೆಗೆ ಕುಸಿದಿದೆ. ಇಂದು ಒಂದೇ ದಿನ ಡಾಲರ್ ಎದುರು ರೂಪಾಯಿ ಮೌಲ್ಯ 68 ಪೈಸೆ ಕುಸಿದಿದೆ. ಕಳೆದ ಜನವರಿಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 91.98 ಪೈಸೆಗೆ ಕುಸಿದಿತ್ತು.
ಭಾರತವು ತನ್ನ ಅಗತ್ಯತೆಯ ಶೇ.80 ರಷ್ಟು ಕಚ್ಚಾತೈಲವನ್ನು ಅಮದು ಮಾಡಿಕೊಳ್ಳುತ್ತೆ. ಈಗ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 65 ಡಾಲರ್ ನಿಂದ 82 ಡಾಲರ್‌ಗೆ ಏರಿಕೆಯಾಗಿದೆ. ಇದರಿಂದ ಕಚ್ಚಾತೈಲದ ಅಮದಿಗೆ ಭಾರತವು ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತೆ. ಇದರಿಂದಾಗಿ ಭಾರತದ ಚಾಲ್ತಿ ಖಾತೆ ಕೊರತೆ ಹೆಚ್ಚಾಗುತ್ತೆ ಮತ್ತು ಹಣದುಬ್ಬರ ಕೂಡ ಏರಿಕೆಯಾಗುತ್ತೆ.
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದ್ದು ಏಕೆ?
ಇದೇ ವೇಳೆ ಭಾರತದಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಬಂಡವಾಳ ಹಿಂತೆಗೆದುಕೊಳ್ಳುವುದು ಕೂಡ ಹೆಚ್ಚಾಗುತ್ತೆ. ಮಧ್ಯಪ್ರಾಚ್ಯದ ಸಂಘರ್ಷದ ಪರಿಸ್ಥಿತಿಗಳು ಭಾರತದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತಾವೆ. ಮಧ್ಯಪ್ರಾಚ್ಯದಲ್ಲಿರುವ ಅನಿವಾಸಿ ಭಾರತೀಯರ ಆದಾಯದಲ್ಲಿ ಕುಸಿತವಾಗಿ ಭಾರತಕ್ಕೆ ತಾವು ಕಳಿಸುತ್ತಿದ್ದ ದುಡಿಮೆಯ ಹಣ ಕೂಡ ಕಡಿಮೆಯಾಗುತ್ತೆ.
ಮಧ್ಯಪ್ರಾಚ್ಯದ ಸಂಘರ್ಷ, ಬಿಕ್ಕಟ್ಟುಗಳಿಂದ ಭಾರತದ ರಿಮೇಟೆನ್ಸ್ ಮೇಲೆ ಪರಿಣಾಮ ಬೀರುತ್ತೆ. ಇರಾನ್ ಮೇಲಿನ ಇಸ್ರೇಲ್, ಅಮೆರಿಕಾ ಯುದ್ಧ ಮುಂದುವರಿಕೆ, ಗಲ್ಪ್ ರಾಷ್ಟ್ರಗಳಲ್ಲಿನ ಸಮಸ್ಯೆಗಳಿಂದ ಭಾರತದ ಆರ್ಥಿಕತೆಯ ಮೇಲೆ ನೆಗೆಟಿವ್ ಇಂಪ್ಯಾಕ್ಟ್ ಆಗುತ್ತೆ. ಭಾರತದ ಚಾಲ್ತಿ ಖಾತೆ ಕೊರತೆ ಹೆಚ್ಚಾಗುತ್ತೆ. ಭಾರತದ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತೆ. ಹಣದುಬ್ಬರ ಏರಿಕೆಯಾಗುತ್ತೆ. ಇಂಥ ಸ್ಥಿತಿಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತೆ. ಜಿಡಿಪಿ ಬೆಳವಣಿಗೆ ಕೂಡ ಕುಸಿಯುತ್ತೆ. ಇದೆಲ್ಲದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗುತ್ತೆ.
ಡಾಲರ್ ಎದುರು ರೂಪಾಯಿ ಮೌಲ್ಯ ಸ್ಟ್ರಾಂಗ್ ಆಗಲು ಏನು ಮಾಡಬೇಕು?
ಡಾಲರ್ ಎದುರು ರೂಪಾಯಿ ಮೌಲ್ಯ ಪ್ರಬಲವಾಗಲು ಭಾರತವು ಅಮದಿಗಿಂತ ಹೆಚ್ಚಿನ ರಫ್ತು ಮಾಡಬೇಕಾಗುತ್ತೆ. ಭಾರತದ ಆರ್ಥಿಕತೆಯೂ ಸದೃಢವಾಗಿರಬೇಕು. ಕೃಷಿ, ಕೈಗಾರಿಕೆ, ಸೇವಾ ವಲಯದ ಉತ್ಪಾದನೆ ಹೆಚ್ಚಾಗಬೇಕು. ಕೃಷಿ, ಕೈಗಾರಿಕೆ ರಫ್ತು ಹೆಚ್ಚಾಗಬೇಕು. ವಿತ್ತೀಯ ಕೊರತೆಯ ಬದಲು ಉಳಿತಾಯ ಬಜೆಟ್ ಮಂಡನೆಯಾಗಬೇಕು. ಭಾರತದ ದೇಶೀಯ, ವಿದೇಶಿ ಸಾಲದ ಪ್ರಮಾಣ ನಗಣ್ಯವಾಗಿರಬೇಕು. ವಿದೇಶಿ ರಾಷ್ಟ್ರಗಳ ಮೇಲಿನ ವಿವಿಧ ಉತ್ಪನ್ನಗಳಿಗಾಗಿ ಅವಲಂಬನೆ ಕಡಿಮೆಯಾಗಬೇಕು. ಅಂಥ ಸ್ಥಿತಿಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಸ್ಟ್ರಾಂಗ್ ಆಗುತ್ತೆ.
ಆದರೇ, ಈಗ ವರ್ಷದಿಂದ ವರ್ಷಕ್ಕೆ ಭಾರತದ ಸಾಲದ ಪ್ರಮಾಣ ಹೆಚ್ಚಾಗುತ್ತಿದೆ. ಭಾರತದ ವಿದೇಶಿ ರಫ್ತು ಕಡಿಮೆಯೇ ಇದೆ. ವಿತ್ತೀಯ ಕೊರತೆಯೂ ಹೆಚ್ಚಾಗುತ್ತಿದೆ. ಇದರಿಂದಾಗಿ ಭಾರತದ ಕರೆನ್ಸಿಯಾದ ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿಯುತ್ತಿದೆ. ಇದರ ಜೊತೆಗೆ ಜಾಗತಿಕ ಸಂಘರ್ಷ, ಯುದ್ಧದ ಬೆಳವಣಿಗೆ ಹಾಗೂ ಕಚ್ಚಾತೈಲದ ಬೆಲೆ ಏರಿಕೆಯಿಂದ ಭಾರತದ ಆರ್ಥಿಕತೆಗೂ ಹೊಡೆತ ಬೀಳುವುದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ.
/filters:format(webp)/newsfirstlive-kannada/media/media_files/2026/03/04/rupees-against-dollar-down-1-2026-03-04-11-52-17.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us