/newsfirstlive-kannada/media/media_files/2025/10/18/nirmala-seethraman-and-piyush-goyal-2025-10-18-13-29-31.jpg)
ಸೆಪ್ಟೆಂಬರ್ ತಿಂಗಳಿನಿಂದಲೇ ದೇಶದಲ್ಲಿ ಜಿಎಸ್‌ಟಿ ದರ ಇಳಿಕೆಯೂ ಆರಂಭವಾಗಿದೆ. ಇದರಿಂದಾಗಿ ದೇಶದಲ್ಲಿ ಎಲ್ಲ ಉತ್ಪನ್ನಗಳ ಬೆಲೆಯೂ ಇಳಿಕೆಯಾಗಿದೆ. ಎಲ್ಲ ಉತ್ಪನ್ನಗಳ ಮಾರಾಟ, ಬೇಡಿಕೆಯೂ ಹೆಚ್ಚಾಗಿದೆ. ಈ ಬಗ್ಗೆ ಇಂದು ಕೇಂದ್ರ ಸರ್ಕಾರದ ಮೂವರು ಪ್ರಮುಖ ಸಚಿವರು ಪತ್ರಿಕಾಗೋಷ್ಠಿ ನಡೆಸಿ ಜಿಎಸ್‌ಟಿ ಸುಧಾರಣೆಯ ಇಂಫ್ಯಾಕ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರದ ವಾಣಿಜ್ಯ ಖಾತೆ ಸಚಿವ ಪಿಯೂಶ್ ಗೋಯಲ್ ಹಾಗೂ ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನ್ ವೈಷ್ಣವ್ ಪತ್ರಿಕಾಗೋಷ್ಠಿ ನಡೆಸಿದ್ದರು.
ನಾವು ಜಿಎಸ್‌ಟಿ ಸರಳೀಕರಣಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜಿಎಸ್‌ಟಿ ಫೈಲಿಂಗ್ ಅನ್ನು ಕೂಡ ಸರಳೀಕರಣ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪ್ರತಿಯೊಬ್ಬರಿಗೂ 2025 ವರ್ಷ ನೆನಪಿನಲ್ಲಿರುವ ವರ್ಷ. ಹೊಸ ತಲೆಮಾರಿನ ಜಿಎಸ್‌ಟಿ ಜಾರಿಯಿಂದ ಹೊಸ ಉತ್ಸಾಹ ಕಂಡು ಬರುತ್ತಿದೆ. ಎಲ್ಲೆಡೆ ಹೊಸ ಉತ್ಸಾಹ ಕಂಡು ಬಂದಿದೆ. ಗ್ರಾಹಕರ ವೆಚ್ಚ ಹೆಚ್ಚಾಗುತ್ತಿದೆ. ಹೂಡಿಕೆಯ ಮೇಲೆ ಅನೇಕ ಸಕಾರಾತ್ಮಕ ಪರಿಣಾಮ ಬೀರಿದೆ. ಉದ್ಯಮ ಸರಳೀಕರಣವಾಗಿದೆ. ಹೂಡಿಕೆಯು ವೇಗವಾಗಿ ಹೆಚ್ಚಾಗುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಭಾರತದ ಬಗ್ಗೆ ರೇಟಿಂಗ್ ಅನ್ನು ಪರಿಷ್ಕರಿಸಿದೆ ಎಂದು ಕೇಂದ್ರದ ವಾಣಿಜ್ಯ ಖಾತೆ ಸಚಿವ ಪಿಯೂಶ್ ಗೋಯಲ್ ಹೇಳಿದ್ದರು.
ಮಾರುತಿ ಸುಜುಕಿಯು ಕೂಡ ತನ್ನ ವಾಹನಗಳು ಹೆಚ್ಚು ಮಾರಾಟವಾಗಿವೆ ಎಂದು ಹೇಳಿದೆ. ಮಹೀಂದ್ರ ಮತ್ತು ಟಾಟಾ ವಾಹನಗಳ ಮಾರಾಟಗಲ್ಲಿ ಹೆಚ್ಚಾಗಿದೆ. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲೂ ಭಾರಿ ಮಾರಾಟವಾಗಿವೆ.
ಆರೋಗ್ಯ ಕ್ಷೇತ್ರದಲ್ಲಿ ಭಾರಿ ಸುಧಾರಣೆಯಾಗಿದೆ. ಹೆಲ್ತ್ ಇನ್ಸೂರೆನ್ಸ್ ಮೇಲಿನ ಜಿಎಸ್‌ಟಿ ಯನ್ನು ಶೂನ್ಯಕ್ಕೆ ಇಳಿಸಲಾಗಿದೆ ಎಂದು ಕೇಂದ್ರದ ವಾಣಿಜ್ಯ ಖಾತೆ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
ನವರಾತ್ರಿಯಿಂದ ದೇಶದಲ್ಲಿ ಹೊಸ ವಾತಾವರಣ ಸೃಷ್ಟಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿ, ಮನೆಯಲ್ಲೂ ಸ್ವದೇಶಿ ಉತ್ಪನ್ನಗಳ ಖರೀದಿ ಆರಂಭವಾಗಿದೆ. ಎಲ್ಲೆಲ್ಲೂ ಹೊಸ ವಾತಾವರಣ, ಶಕ್ತಿ ಬಂದಿದೆ. ನಾವೆಲ್ಲಾ ಮೋದಿಯ ನಾಯಕತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ಭಾರತವು ಸ್ವದೇಶಿ ಭಾವನೆಯೊಂದಿಗೆ, ಹೊಸ ಉತ್ಸಾಹದೊಂದಿಗೆ ಮುನ್ನೆಡೆಯುತ್ತಿದೆ. ನಿಮ್ಮೆಲ್ಲರಿಗೂ ದೀಪಾವಳಿ ಹಾಗೂ ಎಲ್ಲ ಹಬ್ಬಗಳ ಶುಭಾಶಯಗಳು ಎಂದು ವಾಣಿಜ್ಯ ಖಾತೆ ಸಚಿವ ಪಿಯೂಶ್ ಗೋಯಲ್ ಹೇಳಿದ್ದರು.
ಈ ನವರಾತ್ರಿಯಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ರೆಕಾರ್ಡ್ ಮಾರಾಟವಾಗಿದೆ ಎಂದು ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ಹಾಗೂ ಎಲೆಕ್ಟ್ಕಾನಿಕ್ಸ್ ಮತ್ತು ಐಟಿ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೇ, ಶೇ.25 ರಷ್ಟು ಹೆಚ್ಚಿನ ಮಾರಾಟವಾಗಿದೆ. ಹಳೆಯ ಟಿವಿಗಳನ್ನು ಬದಲಿಸಿ, ಜನರು ಹೊಸ ಟಿವಿಗಳನ್ನು ಖರೀದಿ ಮಾಡಿದ್ದಾರೆ. ಹೊಸ ಸ್ಮಾರ್ಟ್ ಪೋನ್ ಗಳನ್ನು ಖರೀದಿಸಿದ್ದಾರೆ. ಈ ನವರಾತ್ರಿಯಲ್ಲಿ ಶೇ.20-25 ರಷ್ಟು ಹೆಚ್ಚಿನ ಮಾರಾಟವಾಗಿದೆ.
ಜಿಎಸ್‌ಟಿ ಸುಧಾರಣೆಯಿಂದಾಗಿ ಆಹಾರ ಹಣದುಬ್ಬರ ಕಡಿಮೆಯಾಗಿದೆ.
ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಬೇಡಿಕೆ ಹೆಚ್ಚಾಗಿರುವುದರಿಂದ ಉತ್ಪಾದನೆ ಕೂಡ ಹೆಚ್ಚಾಗಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಯಿಂದ 25 ಲಕ್ಷ ಜನರಿಗೆ ನೇರ ಉದ್ಯೋಗ ಸಿಗುತ್ತಿದೆ. ಯುಎಸ್‌ಎ ಗೆ ರಫ್ತಾಗುವ ಸ್ಮಾರ್ಟ್ ಪೋನ್ ನಲ್ಲಿ ಭಾರತವು, ನೆರೆಹೊರೆ ದೇಶಗಳನ್ನು ಹಿಂದಿಕ್ಕಿದೆ. ಅಂದರೇ, ಚೀನಾ ದೇಶವನ್ನು ಭಾರತ ಹಿಂದಿಕ್ಕಿದೆ. ಸೆಮಿಕಂಡಕ್ಟರ್ ಪ್ಲಾಂಟ್ ಕೂಡ ಉತ್ಪಾದನೆ ಆರಂಭಿಸಿದೆ.
ಜಿಎಸ್‌ಟಿ ಸುಧಾರಣೆಯಿಂದಾಗಿ ಅನುಭೋಗ ಹೆಚ್ಚಾಗಿದೆ. ಗ್ರಾಹಕರ ಬಳಕೆಯೂ 20 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೂ ಹೂಡಿಕೆಯು ಕಳೆದ ವರ್ಷ 98 ಲಕ್ಷ ಕೋಟಿ ರೂಪಾಯಿ ಇತ್ತು. ಈ ವರ್ಷ ಹೂಡಿಕೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇನ್ನೂ ನಿರ್ಮಲಾ ಸೀತಾರಾಮನ್ ಹೇಳಿದ್ದೇನೆಂದರೇ, ಸೆಪ್ಟೆಂಬರ್ ತಿಂಗಳಲ್ಲಿ ಜಿಎಸ್‌ಟಿ ದರ ಇಳಿಕೆಯ ಬಳಿಕ 21.60 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಪ್ಯಾಸೆಂಜರ್ ವಾಹನಗಳು 3.72 ಲಕ್ಷ ವಾಹನಗಳು ಸೆಪ್ಟೆಂಬರ್ ತಿಂಗಳಿನಲ್ಲೇ ಮಾರಾಟವಾಗಿವೆ. ಇನ್ನೂ 1.46 ಲಕ್ಷ ಟ್ರಾಕ್ಟರ್ ಗಳು ಸೆಪ್ಟೆಂಬರ್ ನಲ್ಲಿ ಮಾರಾಟವಾಗಿವೆ. ಸೆಪ್ಟೆಂಬರ್ ನಲ್ಲಿ ಟ್ರಾಕ್ಟರ್ ಮಾರಾಟ ಡಬಲ್ ಆಗಿದೆ.
ಫ್ರೀಬುಕ್ಕಿಂಗ್ ಕೂಡ ಉತ್ಪಾದನೆಗಿಂತ ಮುಂಚೆಯೇ ಆಗುತ್ತಿದೆ. ಜಿಎಸ್‌ಟಿ 2.0 ಜಾರಿಯಾದ ದಿನದಿಂದಲೇ ಟಿವಿ ಮಾರಾಟ ಕೂಡ ಹೆಚ್ಚಾಗಿದೆ. ಎಲ್‌ಜಿ ಎಲೆಕ್ಟ್ರಾನಿಕ್ಸ್ ಕಂಪನಿಯ ಮಾರಾಟದಲ್ಲೂ ನವರಾತ್ರಿ ವೇಳೆ ಭಾರಿ ಮಾರಾಟವಾಗಿದೆ ಎಂದು ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ