/newsfirstlive-kannada/media/media_files/2025/11/26/priyank-kharge-2025-11-26-08-24-20.jpg)
ಸಿದ್ದರಾಮಯ್ಯ 2 ದಶಕದಿಂದ ಕಾಂಗ್ರೆಸ್ ನಲ್ಲಿದ್ದಾರೆ ಎಂದ ಪ್ರಿಯಾಂಕ್ ಖರ್ಗೆ!
ಯಾರೋ ಒಬ್ಬರಿಂದ ಪಾರ್ಟಿ ಇಲ್ಲ, ಸಿದ್ದರಾಮಯ್ಯ ಎರಡು ದಶಕದಿಂದ ಕಾಂಗ್ರೆಸ್ ನಲ್ಲಿ ಇದ್ದಾರೆ. ಅದಕ್ಕಿಂತ ಮೊದಲು ಕಾಂಗ್ರೆಸ್ ಪಕ್ಷ ಇತ್ತು ಅಲ್ಲವೇ. ಅವರನ್ನ ಸಿಎಂ ಮಾಡಿದ್ದು ಕಾಂಗ್ರೆಸ್ ಅಲ್ಲವೇ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ಈ ಹೇಳಿಕೆಯೂ ಗೂಡಾರ್ಥದಿಂದ ಕೂಡಿದೆ.
ಪ್ರಿಯಾಂಕ್ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಗ. ಇತ್ತೀಚೆಗೆ ದೆಹಲಿಗೆ ತೆರಳಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಬಂದಿದ್ದಾರೆ. ರಾಹುಲ್ ಗಾಂಧಿ ಜೊತೆ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಚರ್ಚಿಸಿದ್ದಾರೆ. ಹೀಗಾಗಿ ಈ ಎಲ್ಲ ಚರ್ಚೆ ಬಳಿಕ ಪ್ರಿಯಾಂಕ್ ಖರ್ಗೆ ಹೇಳಿಕೆಯೂ ಕಾಂಗ್ರೆಸ್ ಹೈಕಮ್ಯಾಂಡ್ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಬಿಂಬಿಸುತ್ತಿದೆ. ಪ್ರಿಯಾಂಕ್ ಖರ್ಗೆ ಹೇಳಿಕೆಯೂ ಮಲ್ಲಿಕಾರ್ಜುನ ಖರ್ಗೆ ಮುಂದೆ ಕೈಗೊಳ್ಳುವ ತೀರ್ಮಾನದ ಮುನ್ಸೂಚನೆಯೂ ಆಗಿರಬಹುದು ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ.
ಸಿದ್ದರಾಮಯ್ಯನವರು ಪ್ರಬಲ ನಾಯಕರು. ಸಾಕಷ್ಟು ಪ್ರಬಲ ನಾಯಕರು ಪಕ್ಷದಲ್ಲಿ ಇದ್ದಾರೆ, ಎಲ್ಲರೂ ಸೇರಿದರೆ ಪಾರ್ಟಿ ಆಗುತ್ತೆ. ಪಾರ್ಟಿ ಕಾರ್ಯಕರ್ತರನ್ನ ಬೆಳೆಸುತ್ತೆ, ಕಾರ್ಯಕರ್ತರು ನಾಯಕರನ್ನ ಬೆಳೆಸುತ್ತಾರೆ. ಹೀಗೆ ಸಿದ್ದರಾಮಯ್ಯ, ಡಿಕೆಶಿ, ಜಾರಕಿಹೊಳಿ ಎಲ್ಲರೂ ಕಾರ್ಯಕರ್ತರು ಬೆಳೆಸಿದ ನಾಯಕರು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಹೇಳಿರುವುದನ್ನು ನೋಡಿದರೇ, ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಇಳಿಸಲು ಕಾಂಗ್ರೆಸ್ ಹೈಕಮ್ಯಾಂಡ್ ಒಲವು ತೋರುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತೆ.
/filters:format(webp)/newsfirstlive-kannada/media/media_files/2025/11/26/priyank-kharge-1-2025-11-26-08-21-41.jpg)
ಏನೇ ಇದ್ದರೂ ವರಿಷ್ಠರು ತೀರ್ಮಾನ ಮಾಡ್ತಾರೆ . ಶಾಸಕರು ಅವರ ಅಭಿಪ್ರಾಯ ತಿಳಿಸಬಹುದು . ಆದರೆ ಅಂತಿಮವಾಗಿ ಹೈ ಕಮಾಂಡ್ ತೀರ್ಮಾನ ಕೈಗೊಳ್ಳುತ್ತೆ. ಸಿಎಂ, ಡಿಸಿಎಂಗೆ ನಾನು ಯಾಕೆ ಹೋಗಿದ್ದೆ ಅನ್ನೋದು ತಿಳಿಸಿದ್ದೇನೆ . ವೋಟ್ ಚೋರಿ ಪ್ರಕರಣ, ಚಿಲುಮೆ ವಿಚಾರ ಚರ್ಚೆ ಮಾಡಿ ಬಂದಿದ್ದೇನೆ. ಪವರ್ ಶೇರಿಂಗ್ ಬಗ್ಗೆ 3-4 ಜನರಿಗೆ ಗೊತ್ತಿದೆ. ಅವರೆೇ ಚರ್ಚೆ ಮಾಡಿರೋದು, ಅದೆಲ್ಲ ಹೈ ಕಮ್ಯಾಂಡ್‌ಗೆ ಬಿಟ್ಟಿದ್ದು . ನಾವು ಮಾಧ್ಯಮದಲ್ಲಿ ಪ್ರೈಮ್ ಟೈಮಲ್ಲಿ ಕುಳಿತು ನಿರ್ಧಾರ ಮಾಡೋಕೆ ಆಗುತ್ತಾ..? ಅದನ್ನು ಹೈಕಮಾಂಡ್ ಚರ್ಚೆ ಮಾಡುತ್ತೆ. ಸಿಎಂ, ಡಿಸಿಎಂ ಇಬ್ಬರು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದಾರೆ, ಮತ್ಯಾಕೆ ಗೊಂದಲ..? ಮಲ್ಲಿಕಾರ್ಜುನ ಖರ್ಗೆ ಹೆಸರು ಇಲ್ಲಿ ಚುನಾವಣೆ ನಡೆದಾಗ ಸಿಎಂ ರೇಸ್ ನಲ್ಲಿ ಬರುತ್ತೆ . ಅವರು ಸಿಎಂ ರೇಸ್ ಗೆ ಬರುವ ವಿಚಾರದ ಬಗ್ಗೆ ಹಿಂದೆಯೇ ಹೇಳಿದ್ದಾರೆ . ಈಗ ಮತ್ತೆ ಹೇಳೋದು ಏನಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ನಾನು ರಾಹುಲ್ ಗಾಂಧಿ ಭೇಟಿ ಆಗದೆ ಮೋಹನ ಭಾಗವತ್ ಗೆ ಭೇಟಿ ಆಗೋದಾ..?ಸಿಎಂ, ಡಿಸಿಎಂ ಭೇಟಿ ಬಗ್ಗೆ ಹೇಳದೆ ಕೇಶವ ಕೃಪಾಕ್ಕೆ ಹೇಳೋದಾ..? ಎಐ ಟೆಕ್ನಾಲಾಜಿ ಬಗ್ಗೆ ರಾಹುಲ್ ಗಾಂಧಿ ಜೊತೆ ಚರ್ಚೆ ಮಾಡಲು ಭೇಟಿ ಆಗಿದ್ದೆ . ನಾನು ರಾಹುಲ್ ಗಾಂಧಿಗೆ ವರದಿ ಕೊಟ್ಟೆ ಅಂತ ಯಾರು ಹೇಳಿದ್ದು...?ರಾಜ್ಯದ ವಿಚಾರ ಮಾತಾಡಿರಬಹುದು, ಮಾತನಾಡದೆ ಇರಬಹುದು . ಕಾಂಗ್ರೆಸ್ ನಲ್ಲಿ ಗೊಂದಲ ಇಲ್ಲ . ಬಿಜೆಪಿಯಲ್ಲಿ, ಮಾಧ್ಯಮದಲ್ಲಿ ಗೊಂದಲ ಇದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us