/newsfirstlive-kannada/media/media_files/2026/01/05/devaraj-urs-and-siddaramaiah-2026-01-05-16-29-48.jpg)
ದೇವರಾಜ ಅರಸು ಹಾಗೂ ಸಿಎಂ ಸಿದ್ದರಾಮಯ್ಯ
ಇಂದಿಗೆ ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದ ಸಿದ್ದರಾಮನಹುಂಡಿಯಿಂದ ಸಾರ್ವಜನಿಕ ಜೀವನದ ಕನಸನ್ನು ಕಂಡಿದ್ದ ಒಬ್ಬ ವ್ಯಕ್ತಿ, ಅಲ್ಲಲ್ಲ ಒಂದು ಶಕ್ತಿ, ರಾಜ್ಯ ರಾಜಕೀಯದಲ್ಲಿ ದೈತ್ಯವಾದ ಬೆಳೆದು, ರೆಕಾರ್ಡ್​ ಬ್ರೇಕ್​ ಮಾಡಿದ ದಿನ. ಒಬ್ಬ ಎಂಎಲ್​ಎ ಆದ್ರೆ ಸಾಕು ಅಂತ ಆಸೆ ಹೊತ್ತು, ಊರಿಂದ ಬಂದ ಸಿದ್ದರಾಮಯ್ಯನವರು, ಇಂದು ಕರ್ನಾಟಕವನ್ನು ಮುಖ್ಯಮಂತ್ರಿಯಾಗಿ ದೀರ್ಘಕಾಲ ಆಳಿದ ಸಿಎಂ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.. ಇವತ್ತಿಗೆ 2,792 ದಿನವನ್ನು ಸಿಎಂ ಆಗಿ ಅವರು ಪೂರ್ಣಗೊಳಿಸಿದ್ದಾರೆ.. ಆದ್ರೆ ಈ ಸಂದರ್ಭದಲ್ಲಿ, ಸಿದ್ದುರನ್ನು ಮುಂದಿನ ದೇವರಾಜ ಅರಸು ಅಥವಾ ಅವರ ಮೌಲ್ಯಗಳನ್ನು ಕೊಂಡೊಯ್ದ ನಾಯಕ ಎಂದೇ ಸಿದ್ದರಾಮಯ್ಯರನ್ನು ರಾಜಕೀಯ ಪಂಡಿತರು ಹಾಘೂ ಅಭಿಮಾನಿಗಳು ಕರೆಯುತ್ತಾರೆ.. ಆದ್ರೆ ಎಷ್ಟೋ ಬಾರಿ ಇದನ್ನು ಸಿದ್ದರಾಮಯ್ಯರವರು ನಿರಾಕರಿಸಿದ್ದಾರೆ.. ದೇವರಾಜ ಅರಸು, ದೇವರಾಜ ಅರಸೇ.. ಸಿದ್ದರಾಮಯ್ಯ, ಸಿದ್ದರಾಮಯ್ಯನೇ ಅಂತ ಹೇಳಿದ್ದಿದೆ..
ಆದ್ರೆ 1970ರ ದಶಕದಲ್ಲಿ ಕ್ರಾಂತಿಕಾರಕ ಆಡಳಿತ ನೀಡಿದ ಹಾಗೂ ಸಾಮಾಜಿಕ- ಆರ್ಥಿಕ ಸಮಾನತೆ ತರೋದಕ್ಕೆ ಶ್ರಮಿಸಿದ ಬಹುದೊಡ್ಡ ಹೆಸರು.. 1980ರಲ್ಲಿ ಸಿಎಂ ಆಗಿ ತಮ್ಮ ಆಡಳಿತ ಕೊನೆಗೊಳಿಸಿದ್ರೂ ಕೂಡ, ಇವತ್ತಿಗೂ ಸಾಮಾಜಿಕ ನ್ಯಾಯದ ಹರಿಕಾರ ಅಂದ್ರೆ ಮೊದಲಿಗರಾಗಿ ಕೇಳಿಬರೋ ಹೆಸರೇ ಡಿ. ದೇವರಾಜ ಅರಸು... ಸುಮಾರು ನಾಲ್ಕುವರೆ ದಶಕಗಳು ಕಳೆದ್ರೂ ಇಂದಿಗೂ ಮಾಸದ ಹೆಸರು.. ಡಿ. ದೇವರಾಜ ಅರಸು.. ಹಾಗಾದ್ರೆ ಹುಣಸೂರಿನ ಕಲ್ಲಹಳ್ಳಿಯ ದೇವರಾಜ ಅರಸುರವರು, ಸಾಮಾಜಿಕ ನ್ಯಾಯದ ಹರೀಕಾರ, CHAMPION OF BACKWARD CLASS, ಬಡವರ ಉದ್ಧಾರಕ ಅನ್ನೋ ಹೆಸರುಗಳನ್ನು ಇವರು ಪಡೆದಿದ್ದಾದರೂ ಹೇಗೆ? ಇವರ ಯಾವ ನಿರ್ಧಾರಗಳು, ಇಂದಿಗೂ ಶೋಷಿತ ವರ್ಗ ಇವರನ್ನು ನೆನೆಯೋ ಹಾಗೆ ಮಾಡಿದೆ? ಅನ್ನೋದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ.
ಉಳುವವನೆ ಭೂಮಿಯ ಒಡೆಯ ಕಾಯಿದೆ ಜಾರಿಗೆ ತಂದ ಅರಸು
ಭೂಮಿ ಉಳುಮೆ ಮಾಡುತ್ತಿದ್ದವರನ್ನು ಭೂಮಾಲೀಕರಾಗಿಸಿದ್ದ ಅರಸು
ಅದು.. 1972ರ ಸಮಯ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೊಟ್ಟ ಮೊದಲ ಹಿಂದುಳಿದ ವರ್ಗದ ಮುಖ್ಯಮಂತ್ರಿಯಾಗಿ ದೇವರಾಜ ಅರಸು ಮುಖ್ಯಮಂತ್ರಿಯಾಗ್ತಾರೆ.. ಆಗಿನ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರ ಗರೀಬಿ ಹಠಾವೋ ಕರೆ, ದೇಶದಲ್ಲಿ ಮಾರ್ಧನಿಸುತ್ತಾ ಇದ್ದ ದಿನಗಳು.. ಆಗ 1974 ಸಮಯದಲ್ಲಿ ಉಳುವವನೇ ಭೂಮಿಯ ಒಡೆಯ ಅನ್ನೋ ಕ್ರಾಂತಿಕಾರಕ ಭೂ ಸುಧಾರಣ ಕಾಯ್ದೆಯನ್ನು ದೇವರಾಜ ಅರಸರು ಜಾರಿಗೆ ತರ್ತಾರೆ.. ಅಂದ್ರೆ ಇದರ ಮೂಲ ಉದ್ದೇಶ, ಜಮೀನ್ದಾರಿ ಪದ್ದತಿಯನ್ನು ಹೋಗಲಾಡಿಸಿ, ಬಡವರಿಗೆ, ಶೋಷಿತರಿಗೆ, ಹಾಗೂ ಬೇರೆಯವರ ಜಮೀನಿನಲ್ಲಿ ಬಾಡಿಗೆಗೆ, ಭೋಗ್ಯಕ್ಕೆ ಉಳುಮೆ ಮಾಡುತ್ತಿದ್ದವರಿಗೆ ಭೂಮಿ ನೀಡಿ ಅವರನ್ನು ಸಬಲರನ್ನಾಗಿ ಮಾಡುವ ಗುರಿ ಹೊಂದಿದ್ದರು. ಅದರಲ್ಲಿ ಬಹುಪಾಲು ಫಲಾನುಭವಿಗಳು ದಲಿತರು ಹಾಗೂ ಹಿಂದುಳಿದವರೇ.. ಇದರಿಂದ ಸಾಕಷ್ಟು ಸಶಕ್ತರ (ಮೇಲ್ವರ್ಗದವರ)ವಿರೋಧವನ್ನು ಅವರು ಕಟ್ಟಿಕೊಳ್ಳಬೇಕಾಯಿತು.. ಕೇವಲ ಇದರಿಂದಷ್ಟೇ ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಅನ್ನೋದಿಲ್ಲ.. ಬಹುಪಾಲು ಅವರ ಸರ್ಕಾರದ ನಿಧಾರಗಳೆಲ್ಲವೂ ಕೂಡ ಶೋಷಿತ ಸಮುದಾಯದ ಪರವೇ ಇದ್ದವು... ಇದಿಷ್ಟೇ ಅಲ್ಲದೇ ಮೈಸೂರು ರಾಜ್ಯ ಅಂತ ಕರೆಯಲ್ಪಡುತ್ತಿದ್ದ ರಾಜ್ಯ ಕರ್ನಾಟಕ ಅಂತ ಮರುನಾಮಕರಣವಾಗಿದ್ದು ಇವರ ಅವಧಿಯಲ್ಲೇ
/filters:format(webp)/newsfirstlive-kannada/media/media_files/2026/01/06/d-devaraja-urs-2026-01-06-15-39-48.jpg)
ಹಿಂದುಳಿದ ವರ್ಗಗಳ ಆಯೋಗ ರಚಿಸಿ ಮೀಸಲಾತಿ ನೀಡಿಕೆ
1972ರಲ್ಲಿ ಮೊಟ್ಟ ಮೊದಲ ಎಲ್​​ಜಿ ಹಾವನೂರು ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿದ್ರು. ಈ ಆಯೋಗವು ವಿದ್ಯಾಭ್ಯಾಸದಲ್ಲಿ ಹಾಗೂ ಸರ್ಕಾರಿ ಕೆಲಸಗಳಲ್ಲಿರುವ ಮೀಸಲಾತಿಗೆ ಅಡಿಪಾಯ ಹಾಕಿತು.. ತಮ್ಮ ಆಡಳಿತ ಅವಧಿಯಲ್ಲಿ ಜೀತ ಪದ್ದತಿ ಹಾಗೂ ಮಲ ಹೊರುವ ಪದ್ದತಿಯನ್ನು ರದ್ದುಗೊಳಿಸುವುದಕ್ಕೆ ಕಾನೂನು ಜಾರಿ ಮಾಡಿದ್ರು.. 1976ರಲ್ಲಿ ಕರ್ನಾಟಕ ಋಣ ಪರಿಹಾರ ಕಾಯ್ದೆ ಜಾರಿಗೊಳಿಸಿದ್ರು.. ಈಗಿನ ಸರ್ಕಾರಗಳ ಸಾಲಮನ್ನಾ ಕಾರ್ಯಕ್ರಮಗಳ ಅಡಿಪಾಯವೇ ಆ ಕಾಯ್ದೆ ಆಗಿತ್ತು.. ಇದು ಸಣ್ಣ ರೈತರು, ಕೃಷಿ ಕೂಲಿ ಕಾರ್ಮಿಕರು ಮತ್ತು ಹಿಂದುಳಿದ ವರ್ಗದವರನ್ನು ಸಾಲದ ಕಷ್ಟದಿಂದ ಪಾರು ಮಾಡಲು ಜಾರಿಗೆ ತರಲಾಗಿತ್ತು..
ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಬಡ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್​​ ವ್ಯವಸ್ಥೆ ಮಾಡಿದ್ರು.. ಇದು ಇಂದಿಗೂ ಪ್ರಸ್ತುತ ಹಾಗೂ ಜಾರಿಯಲ್ಲಿದೆ.. ಹೀಗೆ ಅನೇಕ PRO BACKWARD ನಿರ್ಧಾರಗಳು ಹಾಗೂ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ. ಅಹಿಂದ ಚ್ಯಾಂಪಿಯನ್​ ಅಂತ ಕರೆಸಿಕೊಂಡ್ರು.. ಮತ್ತೊಂದು ವಿಶೇಷ ಅಂದ್ರೆ ಮೇಲ್ವರ್ಗದ ನೇತೃತ್ವವಿದ್ದ ರಾಜಕೀಯದಲ್ಲಿ, ಅನೇಕ ಹಿಂದುಳಿದ ನಾಯಕರನ್ನು ಹುಟ್ಟುಹಾಕಿ, ಪೋಷಿಸಿದ ಕೀರ್ತಿ ಇವರಿಗೆ ಸಲ್ಲುತ್ತೆ.. ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಎಲ್ಲರೂ ಇವರ ಗರಡಿಯಲ್ಲಿ ಪಳಗಿದವರೇ.
ತಳ ಸಮುದಾಯಕ್ಕೆ ರಾಜಕೀಯ ನಾಯಕತ್ವ ನೀಡಿದ್ದ ಧೀಮಂತ
ಅಧಿಕಾರ ಅಂದ್ರೆ ಕೆಲವರಿಗೆ ಮಾತ್ರ ಸೀಮಿತವಾಗಿದ್ದ ಕಾಲದಲ್ಲಿ, ಸದ್ದಿಲ್ಲದ ಕ್ರಾಂತಿಯನ್ನು ತಂದು, ತಮ್ಮ ನಿರ್ಧಾರಗಳ ಮೂಲಕ, ಕಾಯ್ದೆಗಳ ಮೂಲಕ ಸಾಮಾಜಿಕ- ಶೈಕ್ಷಣಿಕವಾಗಿ ದಲಿತರನ್ನು,ಹಿಂದುಳಿದವರನ್ನು ರಾಜಕೀಯ ಮುಖ್ಯವಾಹಿನಿಗೆ ತಂದು, ಮೇಲ್ವರ್ಗದ ಪ್ರಬಲ್ಯವಿದ್ದ ಸಮಾಜದಲ್ಲಿ ಬಡವರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ, ಶೋಷಿತ ಸಮುದಾಯಗಳಿಗೆ.. ಅಧಿಕಾರ, ಅವಕಾಶ ನೀಡುವಲ್ಲಿ ಶಕ್ತಿಯಾಗಿ ನಿಂತ.. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಕೇವಲ ದೇವಾರಾಜ ಅರಸರಲ್ಲ... ಅಹಿಂದ ಅರಸ..
ದೇವರಾಜ ಅರಸ ಅವರ ದಾಖಲಾತಿಗಳಲ್ಲಿ ಇರುವ ಹೆಸರು... ಜನರು ಕೊಟ್ಟ ಹೆಸರು... ಅಹಿಂದ ಅರಸ..
ವರದಿ : ರಾಹುಲ್ ದಯಾನ್​​, ನ್ಯೂಸ್​​ಫಸ್ಟ್​ ಬ್ಯೂರೋ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us