/newsfirstlive-kannada/media/media_files/2025/10/22/yathindra-siddaramaiah-1-2025-10-22-16-48-49.jpg)
ಬದಲಾವಣೆ ಜಗದ ನಿಯಮ.. ರಾಜಕೀಯದಲ್ಲಿ ಬದಲಾವಣೆ ಹೈಕಮಾಂಡ್ ನಿಯಮ. ಆದ್ರೆ, ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಕದನ ಆರಕ್ಕೆ ಏರುತ್ತಿಲ್ಲ.. ಮೂರಕ್ಕೆ ಇಳಿಯುತ್ತಿಲ್ಲ. ಸಿಎಂ ಬಜೆಟ್ ಮಂಡನೆಗೆ ಸಜ್ಜಾಗಿರೋ ಹೊತ್ತಲ್ಲೇ ಪಟ್ಟದ ಆಟ ಮತ್ತೆ ಸದ್ದು ಮಾಡಿದೆ. ಐದು ವರ್ಷದ ಆಟಕ್ಕೆ ಕಾಂಗ್ರೆಸ್ ಕಲಿಗಳು ಮಾತಿನಲ್ಲೇ ಕಿಚ್ಚು ಹಚ್ಚಿದ್ದಾರೆ. ಅಧಿಕಾರದ ಚದುರಂಗದ ಆಟದಲ್ಲಿ ಎರಡು ಬಣಗಳ ನಾಯಕರು ಪರಸ್ಪರ ಚೆಕ್‌ಮೇಟ್ ಇಟ್ಟಿದ್ದಾರೆ.
ಸಂಕ್ರಾಂತಿ ಮುಗಿದ್ರೂ ಆಗದ ಕ್ರಾಂತಿಗೆ ಕಾಂಗ್ರೆಸ್ ಕಲಿಗಳೇ ತುಪ್ಪ ಸುರಿದು ಬೆಂಕಿ ಹಚ್ಚುತ್ತಿದ್ದಾರೆ. ವಿಶೇಷ ಅಧಿವೇಶನ ಮುಗಿಸಿ ಸಿದ್ದು ಬಜೆಟ್ ಅಧಿವೇಶನಕ್ಕೆ ಸಜ್ಜಾಗ್ತಿರೋ ಹೊತ್ತಲ್ಲೇ ಮತ್ತೆ ಪಟ್ಟದ ಆಟ ತಾಂಡವವಾಡ್ತಿದೆ. ಸಿಎಂ ಪುತ್ರನ ಪಂಚ ವಾರ್ಷಿಕ ಮಾತು ಮತ್ತೆ ಕೈನಲ್ಲಿ ಮಾತಿನ ರಂಗೆಬ್ಬಿಸಿದೆ.
ಮುಂದಿನ 5 ವರ್ಷ ಸಿದ್ದರಾಮಯ್ಯರೇ ಮುಖ್ಯಮಂತ್ರಿ’
ಡಿಕೆಶಿ ಟೀಂ ಌಕ್ಟಿವ್ ಬೆನ್ನಲ್ಲೇ ಯತೀಂದ್ರ ಸಂದೇಶ
ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಕಿತ್ತಾಟ ಮತ್ತೆ ಮುನ್ನೆಲೆಗೆ ಬಂದಿದೆ. ದಾಖಲೆಯ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಇಲಾಖಾ ವಾರು ಸಭೆ ನಡೆಸ್ತಿರೋ ಹೊತ್ತಲ್ಲೇ ಗದ್ದುಗೆ ಗುದ್ದಾಟ ಮತ್ತೆ ಕಾಲು ಕೆರೆದು ನಿಂತಿದೆ. ಸಿದ್ದು-ಡಿಕೆಶಿ ಬಣದ ನಾಯಕರು ಅಧಿಕಾರದ ಕಚ್ಚಾಟದಲ್ಲಿ ನಿರತರಾಗಿದ್ದಾರೆ. ಇದ್ರ ಮಧ್ಯೆ ಸಿಎಂ ಸಿದ್ದರಾಮಯ್ಯ ಪುತ್ರ, ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಡಿಕೆಶಿ ಬಣಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಮುಂದಿನ 5 ವರ್ಷ ಸಿದ್ದರಾಮಯ್ಯರೇ ಮುಖ್ಯಮಂತ್ರಿ ಅಂತ ಯತೀಂದ್ರ ಸಿದ್ದರಾಮಯ್ಯ ಪುನರುಚ್ಛರಿಸಿದ್ದಾರೆ.
ಸಿಎಂ ಬದಲಾವಣೆ ಒಪ್ಪಂದದ ಬಗ್ಗೆ ಶಿವಗಂಗಾ ಬಾಂಬ್!
ಡಿಕೆಶಿ ಈ ಅವಧಿಗೆ ಸಿಎಂ ಆಗ್ತಾರೆ ಎಂದ ಇಕ್ಬಾಲ್ ಹುಸೇನ್
ಸಿದ್ದರಾಮಯ್ಯ ಬಣ ಪಂಚ ವರ್ಷದ ಫೈಟ್ ಮಾಡ್ತಿದ್ರೆ, ಇತ್ತ ಡಿಕೆಶಿ ಬಣ ಎರಡೂವರೆ ವರ್ಷದ ಜಪ ಮಾಡ್ತಿದೆ. ಎರಡೂವರೆ ವರ್ಷಕ್ಕೆ ಸಿಎಂ ಚೇಂಜ್​​ ಒಪ್ಪಂದ ಆಗಿದ್ದು ನಿಜ.. ನೂರಕ್ಕೆ ನೂರು ಇದೆ ಅವಧಿಯಲ್ಲಿ ಡಿ.ಕೆ, ಶಿವಕುಮಾರ್ ಸಿಎಂ ಆಗ್ತಾರೆ ಅಂತ ಶಾಸಕ ಬಸವರಾಜ್ ಶಿವಗಂಗಾ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇತ್ತ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಕೂಡಾ ಇದೇ ಮಾತಿಗೆ ತಾಳ ಹಾಕಿದ್ದಾರೆ. ಇತ್ತ ಡಿಕೆಶಿ ಬಣದ ಸಚಿವರ ಮಾತಿಗೆ ಸಚಿವ ಪ್ರಿಯಾಂಕ್ ಖರ್ಗೆ ಟಕ್ಕರ್ ಕೊಟ್ಟಿದ್ದಾರೆ.
ಯತೀಂದ್ರರೇ ನಮ್ಮ ಹೈಕಮಾಂಡ್.. ಡಿಕೆಶಿ ವ್ಯಂಗ್ಯ
ಯತೀಂದ್ರ ಸಿದ್ದರಾಮಯ್ಯ ಮಾತಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯದ ಬಾಣ ಬಿಟ್ಟಿದ್ದಾರೆ. ಯತೀಂದ್ರ ಅವರೇ ನಮ್ಮ ಹೈಕಮಾಂಡ್ ಎನ್ನುತ್ತಾ ಅವರು ಏನ್ ಹೇಳ್ತಾರೋ, ಗೌರವದಿಂದ ಸ್ವೀಕರಿಸೋಣ ಅಂತ ಡಿಕೆಶಿ ಗೇಲಿ ಮಾಡಿದ್ದಾರೆ.
ಕಾಂಗ್ರೆಸ್‌ನಲ್ಲಿ ನಡೀತಿರೋ ಕುರ್ಚಿ ಕಿತ್ತಾಟ ಬಿಜೆಪಿ ನಾಯಕರಿಗೆ ಆಡಿಕೊಳ್ಳಲು ಟಾಪಿಕ್ ಸಿಕ್ಕಂತಾಗಿದೆ. ಯತೀಂದ್ರ ಸಿದ್ದರಾಮಯ್ಯ ಆಡಿರೋ ಮಾತನ್ನೇ ಮೆನ್ಶನ್ ಮಾಡಿ ವಿಪಕ್ಷ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್‌ದು ಪವರ್ ಲೆಸ್ ಹೈಕಮಾಂಡ್ ಅಂತ ಮೂದಲಿಸಿದ್ದಾರೆ.
ಅಧಿಕಾರ ಹಂಚಿಕೆ ಆಟದಲ್ಲಿ ಕಾಂಗ್ರೆಸ್ ನಾಯಕರ ಮಧ್ಯೆ ತಾಳಮೇಳ ಇಲ್ಲದಂತಾಗಿದೆ. ರಾಜ್ಯ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಸಜ್ಜಾಗ್ತಿರೋ ಹೊತ್ತಲ್ಲಿ ಕುರ್ಚಿ ಕಿತ್ತಾಟ ಕುಯ್ಯ್‌ಗುಟ್ಟಿದೆ. ಈ ಸವಾಲನ್ನ ಮೆಟ್ಟಿ ಸಿದ್ದರಾಮಯ್ಯ ದಾಖಲೆಯ ಬಜೆಟ್‌ನ ಹೇಗೆ ಮಂಡಿಸ್ತಾರೆ ಅನ್ನೋದೆ ಸದ್ಯದ ಚಾಲೆಂಜ್.
ಮೈಸೂರಿನಿಂದ ರವಿಪಾಂಡವಪುರ ಜೊತೆ ಗಣಪತಿ, ಪೊಲಿಟಿಕಲ್ ಬ್ಯುರೋ, ನ್ಯೂಸ್‌ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ..
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us