/newsfirstlive-kannada/media/media_files/2025/08/13/karnataka-assembly-2025-08-13-12-38-56.jpg)
ನಾಳೆಯಿಂದ ವಿಧಾನಸಭೆ ವಿಶೇಷ ಅಧಿವೇಶನ ಶುರು
ನಾಳೆಯಿಂದ ವಿಶೇಷ ವಿಧಾನಸಭೆ ಜಂಟಿ ಅಧಿವೇಶನ.ಜಿ ರಾಮ್ ಜಿ ವಿರುದ್ಧ ಸಮರಕ್ಕೆ ಸನ್ನದ್ಧವಾಗಿರುವ ಸರ್ಕಾರ. ಸರ್ಕಾರಕ್ಕೆ ಕೌಂಟರ್ ಕೊಡಲು ದೋಸ್ತಿಗಳಿಂದಲೂ ಪ್ರತ್ಯಸ್ತ್ರ. ಅಸ್ತ್ರ, ಪ್ರತ್ಯಸ್ತ್ರಗಳನ್ನ ಬತ್ತಳಿಕೆಯಲ್ಲಿ ತುಂಬಿಸಿಕೊಂಡು ಸನ್ನದ್ಧ. ಹತ್ತು ಹಲವು ಅಸ್ತ್ರಗಳಿದ್ರೂ ಜಿ ರಾಮ್ ಜಿ ಪ್ರಮುಖ ಅಜೆಂಡಾ.
ರಾಜ್ಯ ವಿಧಾನಮಂಡಲದ ಅಧಿವೇಶನ ನಾಳೆಯಿಂದ ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ತಾಲೀಮು ಶುರುವಾಗಿದೆ.. ಕರ್ನಾಟಕದ 16ನೇ ವಿಧಾನಸಭೆಯ 9ನೇ ಅಧಿವೇಶನ ಕರೆದಿರುವ ಸರ್ಕಾರ, ಮನರೇಗಾ ಮರು ಸ್ಥಾಪನೆ, ವಿಬಿಜಿ ರಾಮ್‌ಜಿ ಕಾಯ್ದೆ ಸಂಬಂಧ ಚರ್ಚೆಗೆ ಆಹ್ವಾನಿಸಿದೆ.. ಇದು ಆಡಳಿತ ಮತ್ತು ವಿಪಕ್ಷಗಳ ನಡುವಿನ ಮಾತಿನ ಸಮರ ಏರ್ಪಡಿಸಲಿದೆ..
2021ರ ಬಳಿಕ ಜನವರಿ ತಿಂಗಳಲ್ಲಿ ಸರ್ಕಾರ ಬಜೆಟ್​​ ಪೂರ್ವ ಅಧಿವೇಶನ ಕರೆದಿದೆ.. ವರ್ಷದ ಮೊದಲ ವಿಧಾನಮಂಡಲದ ಅಧಿವೇಶನ ಕಾರಣ, ಮೊದಲ ದಿನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​, ಉಭಯ ಸದನಗಳನ್ನುದ್ದೇಶಿಸಿ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ . ತಮ್ಮ ಭಾಷಣದಲ್ಲಿ ರಾಜ್ಯಪಾಲರು ಸರ್ಕಾರದ ಸಾಧನೆ, ರಾಜ್ಯದ ಅಭಿವೃದ್ಧಿಯ ಮುನ್ನೋಟದ ನಕ್ಷೆ ನೀಡಲಿದ್ದಾರೆ.
ರಾಜ್ಯಪಾಲರ ಭಾಷಣದ ನಂತ್ರ ಸದನವನ್ನು ಮರುದಿನ ಅಂದ್ರೆ ಶುಕ್ರವಾರಕ್ಕೆ ಮುಂದೂಡಿಕೆ ಆಗಲಿದೆ. ಶುಕ್ರವಾರ ಇತ್ತೀಚೆಗೆ ಅಗಲಿದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಭೀಮಣ್ಣ ಖಂಡ್ರೆ ಸೇರಿದಂತೆ ಗಣ್ಯರಿಗೆ ಕಲಾಪವು ಸಂತಾಪ ಸಲ್ಲಿಸಲಿದೆ.. ಬಳಿಕ ಜಟಾಪಟಿಗಳಿಂದ ಸಮರ ಕಾವೇರಲಿದೆ.. ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳುವ ಉದ್ದೇಶ ಹೊತ್ತೇ ಈ ಸ್ಪೆಷಲ್​ ಸೆಷನ್​ ಕರೆದಿರುವ ರಾಜ್ಯ ಸರ್ಕಾರ, ಈ ಬಗ್ಗೆ ತನ್ನ ಬತ್ತಳಿಕೆಯನ್ನ ಹರಿತ ಮಾಡ್ಕೊಳ್ತಿದೆ.
ರಾಜ್ಯದ ಸರ್ಕಾರದ ಬತ್ತಳಿಕೆ ರೆಡಿ!
1. ಮನರೇಗಾ ವಿಚಾರ ಪ್ರಸ್ತಾಪಿಸಿ ಕೇಂದ್ರದ ವಿರುದ್ಧ ಪ್ರಹಾರ
2. ಕೇಂದ್ರದ ಈ ನೂತನ ಕಾಯ್ದೆಯಿಂದ ಬಡವರಿಗೆ ಅನ್ಯಾಯ
3. ಕೇಂದ್ರದ ಈ ನಿರ್ಧಾರಕ್ಕೆ ರಾಜ್ಯದಿಂದ ಖಂಡನಾ ನಿರ್ಣಯ
4. ಪ್ರತಿಪಕ್ಷಗಳ ಆರೋಪಕ್ಕೆ ದಾಖಲೆಗಳ ಸಮೇತ ಕೌಂಟರ್​
5. ಬಿಜೆಪಿ ಅಧಿಕಾರ ಅವಧಿಯಲ್ಲಿನ ಒತ್ತುವರಿ ತೆರವು ವಿಚಾರ
6. ಮತ್ತೆ 40% ಭ್ರಷ್ಟಾಚಾರ ಆರೋಪವನ್ನ ಪ್ರಸ್ತಾಪಿಸುವ ತಂತ್ರ
7. ಬಿಜೆಪಿ ಅವಧಿಯ ಭೂ ಹಂಚಿಕೆ ದುರ್ಬಳಕೆಯನ್ನ ಪ್ರಸ್ತಾಪ
ಮನರೇಗಾ ವಿಚಾರ ಪ್ರಸ್ತಾಪಿಸಿ ಕೇಂದ್ರದ ವಿರುದ್ಧ ಮುಗಿಬೀಳಲು ಕಾಂಗ್ರೆಸ್​​​ ಸರ್ಕಾರ ಸರ್ವ ರೀತಿ ಸನ್ನದ್ಧಗೊಂಡಿದೆ.. ಕೇಂದ್ರದ ನೂತನ ಕಾಯ್ದೆಯಿಂದ ಬಡವರಿಗೆ ಅನ್ಯಾಯವೆಂದು ಬಿಂಬಿಸುವ ಲೆಕ್ಕಾಚಾರದಲ್ಲಿದೆ.. ಅಲ್ಲದೆ, ಕೇಂದ್ರದ ನಿರ್ಧಾರಕ್ಕೆ ಖಂಡನಾ ನಿರ್ಣಯ ಪಾಸ್ ಮಾಡುವ ಸಾಧ್ಯತೆ ಇದೆ.. ಪ್ರತಿಪಕ್ಷಗಳ ಆರೋಪಕ್ಕೆ ದಾಖಲೆಗಳ ಸಮೇತ ಕಾಂಗ್ರೆಸ್​​​ ಕೌಂಟರ್​ಗೆ ಸಜ್ಜಾಗಿದ್ದು, ಬಿಜೆಪಿ ಅವಧಿಯ ಒತ್ತುವರಿ ತೆರವು, 40% ಭ್ರಷ್ಟಾಚಾರ ಪ್ರಸ್ತಾಪಿಸಲಿದೆ.. ಬಿಜೆಪಿ ಅವಧಿಯ ಭೂ ಹಂಚಿಕೆ ದುರ್ಬಳಕೆಯನ್ನ ಪ್ರಸ್ತಾಪಿಸುವ ಲೆಕ್ಕಾಚಾರದಲ್ಲಿದೆ..
ಆದ್ರೆ, ಇದಕ್ಕೆ ಕೌಂಟರ್​​​ ಕೊಡಲು ಸನ್ನದ್ಧವಾದ ದೋಸ್ತಿ ಪಡೆ, ಅಂಕಿ ಅಂಶಗಳ ಸಮೇತ ದಾಳಿಗೆ ಸಜ್ಜಾಗಿದೆ.. ಹಾಗಾದ್ರೆ ವಿಪಕ್ಷಗಳು ಏನೆಲ್ಲಾ ತಯಾರಿ ನಡೆಸಿವೆ ಅನ್ನೋದನ್ನು ವಿವರಿಸುತ್ತೇವೆ ನೋಡಿ..
ಕೈ ವಿರುದ್ಧ ದೋಸ್ತಿಗಳ ಕಹಳೆ
1. ವಿಬಿಜಿ ರಾಮ್‌ಜಿ ಕಾಯ್ದೆ ಲಾಭಗಳು, ಜನಪರ ಅಂತ ಪ್ರಸ್ತಾಪ
2. ಪ್ರತಿಧ್ವನಿಸಲಿದೆ ಅಬಕಾರಿ ಇಲಾಖೆ ಭ್ರಷ್ಟಾಚಾರ ಕರ್ಮಕಾಂಡ
3. ರಾಜ್ಯದಲ್ಲಿ ಮಹಾರಾಷ್ಟ್ರ ಪೊಲೀಸರು ಡ್ರಗ್ಸ್ ಕಾರ್ಯಾಚರಣೆ
4. ರಾಜ್ಯದಲ್ಲಿ ಹದಗೆಡ್ತಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆ
5. ಕೋಗಿಲು ಬಡಾವಣೆ ವಿಚಾರದಲ್ಲಿ ಸರ್ಕಾರದ ನಡೆಗೆ ತರಾಟೆ
ಹೀಗೆ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಳ್ಳಲು ಪ್ಲಾನ್​​ ಆಗಿದೆ.. ಜೊತೆಗೆ ಪೌರಾಯುಕ್ತೆ ಮೇಲಿನ ದಬ್ಬಾಳಿಕೆ, ಮೈಸೂರಿನ ಘಟನೆ ಪ್ರಸ್ತಾಪ ಆಗಲಿದೆ.. ಇನ್ನು, ಇತ್ತೀಚಿನ ಬಳ್ಳಾರಿಯ ಫ್ಲೆಕ್ಸ್​​ ಸಂಘರ್ಷ ವಿಧಾನಸಭೆಯಲ್ಲಿ ಪ್ರತಿಧ್ವನಿಸುವ ಸಾಧ್ಯತೆಗಳಿವೆ..
ವಿಶೇಷ ಅಧಿವೇಶನದಲ್ಲಿ ‘ಕೈ’ ವಿರುದ್ಧ ಕದನಕ್ಕೆ ಬಿಜೆಪಿ ಕೂಡ ಸಿದ್ಧತೆ ನಡೆಸಿದೆ. ವಿಬಿ ಜಿ ರಾಮ್ ಜಿ ಅಸ್ತ್ರ ಪ್ರಯೋಗಿಸಲು ಕೇಸರಿಪಡೆ ತಾಲೀಮು ನಡೆಸಿದೆ. ಯೋಜನೆ ಬಗ್ಗೆ BJP ಶಾಸಕರಿಗೆ ಕೇಂದ್ರ ಕೃಷಿ ಸಚಿವರೇ ಖುದ್ದಾಗಿ ಬಂದು ಮಾಹಿತಿ ನೀಡುತ್ತಿದ್ದಾರೆ. ಬಿಜೆಪಿ ಶಾಸಕರಿಗೆ ಕೇಂದ್ರ ಕೃಷಿ ಶಿವರಾಜ್ ಸಿಂಗ್ ಚೌಹಾಣ್​ರ ತರಬೇತಿ ನೀಡುತ್ತಿದ್ದಾರೆ. ಎಚ್ಚರಿಕೆಯಿಂದ ಸದನದಲ್ಲಿ ಉತ್ತರಿಸುವಂತೆ ಶಿವರಾಜ್ ಸಿಂಗ್ ಚೌಹಾಣ್​ ಸಲಹೆ ನೀಡಿದ್ದಾರೆ. ಈ ಹಿಂದೆ ಮನರೇಗಾ ಯೋಜನೆಗೂ ಈಗ ಜಾರಿಗೆ ತಂದಿರು ವಿಕಸಿತ ಭಾರತ್ ರಾಮ್ ಜಿ ಕಾಯಿದೆಗೂ ಇರುವ ವ್ಯತ್ಯಾಸಗಳೇನು? ವಿಬಿ ರಾಮ್ ಜಿ ಕಾಯಿದೆ ಹೇಗೆ ಜನರಿಗೆ ಅನುಕೂಲಕಾರಿಯಾಗಿದೆ ಎಂಬ ಬಗ್ಗೆ ಬಿಜೆಪಿ ಹಾಗೂ ಮಿತ್ರಪಕ್ಷ ಜೆಡಿಎಸ್ ಶಾಸಕರಿಗೆ ಕೇಂದ್ರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ ನೀಡಿ ವಿಧಾನಸಭೆಯಲ್ಲಿ ಕೈ ಪಕ್ಷದ ವಿರುದ್ಧ ಹೋರಾಟಕ್ಕೆ ಸಜ್ಜುಗೊಳಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us