/newsfirstlive-kannada/media/media_files/2025/11/14/raghopura-tejaswi-yadav-win-2025-11-14-17-47-45.jpg)
ಬಿಜೆಪಿಯ ಸತೀಶ್ ಯಾದವ್ ವರ್ಸಸ್ ತೇಜಸ್ವಿ ಯಾದವ್
ಬಿಹಾರದ ರಾಘೋಪುರ ವಿಧಾನಸಭಾ ಕ್ಷೇತ್ರದಲ್ಲಿ ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್ 11 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ರಾಘೋಪುರ ವಿಧಾನಸಭಾ ಕ್ಷೇತ್ರವು ಲಾಲೂ ಪ್ರಸಾದ್ ಯಾದವ್ ಕುಟುಂಬದ ಸಂಪ್ರದಾಯಿಕ ಭದ್ರಕೋಟೆ. 2020 ರ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ತೇಜಸ್ವಿ ಯಾದವ್ 38 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಭಾರಿ ಗೆಲುವಿನ ಅಂತರ 11 ಸಾವಿರಕ್ಕೆ ಕುಸಿದಿದೆ. ಈ ಭಾರಿ ತೇಜಸ್ವಿ ಯಾದವ್ ವಿರುದ್ಧ ಬಿಜೆಪಿಯಿಂದ ಸತೀಶ್ ಕುಮಾರ್ ಯಾದವ್ ಸ್ಪರ್ಧಿಸಿದ್ದರು. ಇನ್ನೂ ಈ ಭಾರಿ ಜನಶಕ್ತಿ ಜನತಾದಳದಿಂದ ಪ್ರೇಮ್ ಕುಮಾರ್ ಎಂಬ ಅಭ್ಯರ್ಥಿ ಕೂಡ ಕಣಕ್ಕಿಳಿದಿದ್ದರು. ತೇಜ್ ಪ್ರತಾಪ್ ಯಾದವ್ , ಜನಶಕ್ತಿ ಜನತಾದಳ ಪಕ್ಷವನ್ನು ಸ್ಥಾಪಿಸಿ, ತನ್ನ ಸೋದರನ ವಿರುದ್ಧವೇ ಪ್ರೇಮ್ ಕುಮಾರ್ ರನ್ನು ಕಣಕ್ಕಿಳಿಸಿದ್ದರು.
2010 ರಲ್ಲಿ ಇದೇ ರಾಘೋಪುರ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸತೀಶ್ ಕುಮಾರ್ ಯಾದವ್, ಮಾಜಿ ಸಿಎಂ ರಾಬ್ರಿ ದೇವಿ ಅವರನ್ನು ಸೋಲಿಸಿದ್ದರು.
/filters:format(webp)/newsfirstlive-kannada/media/media_files/2025/11/14/rahul-gandhi-and-tejaswi-yadav-2025-11-14-14-35-45.jpg)
ರಾಘೋಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಆರ್‌ಜೆಡಿ ಪಕ್ಷದ ತೇಜಸ್ವಿ ಯಾದವ್, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಬಹುದು. ಆರ್.ಜೆ.ಡಿ. ಪಕ್ಷ ಒಟ್ಟಾರೆ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದರಿಂದ ಆರ್‌ಜೆಡಿಗೆ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಹಾಗೂ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗಲಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us