/newsfirstlive-kannada/media/media_files/2025/11/22/jenukal-siddeshwara-swamy-temple-2025-11-22-16-28-55.jpg)
ಹಾಸನದ ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇವಾಲಯ
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗ ಸಿಎಂ ಹುದ್ದೆಗಾಗಿ ಒಂದೆಡೆ ಕಾಂಗ್ರೆಸ್ ಹೈಕಮ್ಯಾಂಡ್ ಮೊರೆ ಹೋಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಶಾಸಕರ ಬೆಂಬಲ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನು ನಡೆಸಿದ್ದಾರೆ . ಇದರ ಜೊತೆಗೇ ದೈವ ಭಕ್ತರೂ ಆಗಿರುವ ಡಿ.ಕೆ.ಶಿವಕುಮಾರ್ ದೇವರ ಮೊರೆ ಕೂಡ ಹೋಗಿದ್ದಾರೆ.
ಹಾಸನ ಜಿಲ್ಲೆಯ ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇವರು ಅನ್ನು ತಮ್ಮ ಮನೆಗೆ ಕರೆಸಿಕೊಂಡು ನಿನ್ನೆ ರಾತ್ರಿ ಪೂಜೆ ಸಲ್ಲಿಸಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅವರು ಕೂಡ ಜೇನುಕಲ್ ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಸಂಕಷ್ಟದಿಂದ ಪಾರಾಗಿದ್ದರಂತೆ. ಜೊತೆಗೆ ಸಿಎಂ ಹುದ್ದೆಗೇರಿ ರಾಜ್ಯದ ಅಡಳಿತವನ್ನು ನಡೆಸಿದ್ದಾರೆ. ಈಗ ಡಿ.ಕೆ.ಶಿವಕುಮಾರ್ ಸಿಎಂ ಹುದ್ದೆಗಾಗಿ ಜೇನುಕಲ್ ಸಿದ್ದೇಶ್ವರಸ್ವಾಮಿಯ ಮೊರೆ ಹೋಗಿದ್ದಾರೆ. ಈ ಬಗ್ಗೆ ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇಗುಲದ ಕಾರ್ಯದರ್ಶಿ ವೀರಭದ್ರಪ್ಪ ಪ್ರತಿಕ್ರಿಯಿಸಿದ್ದಾರೆ.
ಸೂರ್ಯ, ಚಂದ್ರ ಹುಟ್ಟಿದಾಗಿನಿಂದಲೂ ಇದರ ಪವಾಡ ಅಪಾರ . ಅಂದಿನಿಂದಲೂ ಲಕ್ಷಾಂತರ ಭಕ್ತರು ಬಂದು, ಹೋಗುವ ಜಾಗ ಇದು . ಈಗ ಕಷ್ಟ ಸುಖಕ್ಕೆ ದೇವರು ಸ್ಪಂದಿಸಿದರು. ಸಮಸ್ಯೆಗೆ ಪರಿಹಾರ ಆಗಿದೆ . ಹೀಗಾಗಿ ಅನುಕೂಲ ಪರಿಸ್ಥಿತಿ ಬಂದ ಬಳಿಕ ರಾಜಕೀಯ ದವರು ಜಾಸ್ತಿ ದೇವಸ್ಥಾನಕ್ಕೆ ಬರುವುದಕ್ಕೆ ಶುರುವಾದರು . ಈ ಹಿಂದೆ ಯಡಿಯೂರಪ್ಪ ಒಮ್ಮೆ ಜೈಲಿಗೆ ಹೋಗುವ ಪರಿಸ್ಥಿತಿ ಬಂದಿತ್ತು . ಮಾಜಿ ಶಾಸಕ ಎ.ಎಸ್ ಬಸವರಾಜ್ ರವರು ಯಡಿಯೂರಪ್ಪ ನವರನ್ನು ಜೇನುಕಲ್ ಸ್ವಾಮಿಗೆ ಕರೆದುಕೊಂಡು ಬಂದಿದ್ದರು. ಜೇನುಕಲ್ ಸ್ವಾಮಿ ದೇಗುಲಕ್ಕೆ ಬಂದಾಗ ಹಾರ್ಟ್ ಸಮಸ್ಯೆನೂ ಇತ್ತು . ಆದರೂ ಜೇನುಕಲ್ ಬೆಟ್ಟ ಹತ್ತಿದ್ದರು . ಬೆಟ್ಟದಲ್ಲಿ ಸಂಪೂರ್ಣ ಪೂಜೆ ಮಾಡಿದರು. ಪೂಜೆ ಆದ ಮೇಲೆ ಪ್ರೆಸ್ ನವರು ಏನು ಹೇಳುತ್ತೀರಾ ಎಂದು ಕೇಳಿದ್ದರು. ಈಗ ಪೂಜೆ ಮುಗಿಸಿದ್ದೀನಿ, ಸ್ವಲ್ಪ ಟೈಮ್ ಕೊಡಿ ಹೇಳ್ತೀನಿ ಅಂದರು. ದೇವರಿಗೆ ನಮಸ್ಕರಿಸಿ ಯಡಿಯೂರಪ್ಪ ಅವರು ಎದ್ದಾಗ ಅವರ ಹಣೆ ಮೇಲೆ 9 ತುಂಬೆ ಹೂ ಅಂಟಿಕೊಂಡಿದ್ದವು . ಆಗ ಅವರು ನಾನು ಗೆದ್ದೇ ಎಂದು ಹೇಳಿದ್ದರು. ಏನು ಗೆದ್ದೀರಿ ಎಂದು ಪ್ರಶ್ನಿಸಿದಾಗ, ನಾಳೆ ಜೈಲಿಗೆ ಹೋಗೋ ಪರಿಸ್ಥಿತಿ ಇತ್ತು . ಸಿದ್ದಪ್ಪನಿಗೆ ಪೂಜೆ ಸಲ್ಲಿಸಿದ ಮೇಲೆ ಒಳ್ಳೆದಾಯ್ತು . ಈಗ ತಾನೆ ಬೆಳಕಿಗೆ ಬರುತ್ತಿದ್ದಿನಿ ಅಂದ್ರು . ಅನಂತರ ಕಷ್ಟ ಪರಿಹಾರವಾಗಿ ಒಳ್ಳೆದು ಆಯ್ತು, ಸಿಎಂ ಆದರು. ನಂತರ ಜೇನುಕಲ್ ಕ್ಷೇತ್ರಕ್ಕೆ ಸಿಮೆಂಟ್ ರಸ್ತೆ ಸೇರಿ ಹಲವು ಅಭಿವೃದ್ಧಿ ಕೆಲಸ ಮಾಡಿದರು. ದಾವಣಗೆರೆ, ಮೈಸೂರಿನಿಂದಲೂ ಜನರು ಬರುತ್ತಾರೆ ಎಂದು ದೇವಾಲಯದ ಕಾರ್ಯದರ್ಶಿ ವೀರಭದ್ರಪ್ಪ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/11/22/jenukal-siddeshwara-swamy-temple02-2025-11-22-16-31-35.jpg)
ಡಿಕೆಶಿ ಯವರದ್ದು ಅರಸೀಕೆರೆಯಲ್ಲಿ ಪ್ರೋಗ್ರಾಂ ಇತ್ತು. ಕಾರ್ಯಕ್ರಮ ಮುಗಿಸಿ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಹೋಗಿದ್ದರು. ಜೇನುಕಲ್ ಗೆ ಹೋಗಿದ್ದೆ ಅಂತ ಹಲವು ಕಡೆ ಹೇಳುತ್ತಿದ್ದರು. ಒಳ್ಳೆದಾಯ್ತೋ ಏನೋ, ನಿನ್ನೆ ಮನೆಗೆ ಸ್ವಾಮಿ ಕರೆಸಿ ಪೂಜೆ ಮಾಡಿಸಿದ್ದಾರೆ. ಅವರವರ ಇಷ್ಟದ ಪ್ರಕಾರ ಪೂಜೆ ಸಲ್ಲಿಸುತ್ತಾರೆ. ಪೂಜೆಗೆ ಮನೆಗೆ ಕರೆಸೋರು ಮೊದಲು ಅಪ್ಲಿಕೇಶನ್ ಕೊಟ್ಟಿರುತ್ತಾರೆ. ನಂತರ ಸೀನಿಯಾರಿಟಿ ಪ್ರಕಾರ ಮನೆಗೆ ಪೂಜೆಗೆ ದೇವರು ಅನ್ನು ಕಳಿಸುತ್ತೇವೆ. ಒಳ್ಳೆಯದಾದರೇ, ಮತ್ತೆ ಬರುತ್ತಾರೆ.
ಡಿಕೆಶಿ ಸಿಎಂ ಕುರ್ಚಿಗೆ ಫೈಟ್ ಮಾಡೋ ಸಂದರ್ಭ ಸ್ವಾಮಿ ಪೂಜೆ ಮಾಡಿಸಿರೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ದೇವಾಲಯದ ಪ್ರಧಾನ ಕಾರ್ಯದರ್ಶಿ ವೀರಭದ್ರಪ್ಪ, ಇರಬಹುದೇನೋ ಅದು ನಮಗೆ ಗೊತ್ತಿಲ್ಲ . ಮಾಜಿ ಎಂ. ಪಿ. ಸಿದ್ದೇಶ್ ಸಹ ಈ ದೇವರಿಗೆ ಅಪಾರವಾಗಿ ನಡೆದುಕೊಳ್ಳುತ್ತಾರೆ. ಬಸವರಾಜ ಬೊಮ್ಮಾಯಿ ಸಹ ಬಂದು ಹೋಗಿದ್ದಾರೆ . ಅವರದು ಜಾಸ್ತಿ ಪ್ರಚಾರ ಆಗಿಲ್ಲ. ಡಿಕೆಶಿ ಅವರು ಏನು ಸಂಕಲ್ಪ ಮಾಡಿಸಿದ್ದಾರೋ ಗೊತ್ತಿಲ್ಲ. ದೇವರು ಆಶೀರ್ವಾದ ಮಾಡಿರಬಹುದು . ಬೆಟ್ಟದ ಮೇಲೆಯೂ ಸಹ ಹೂ ಪ್ರಸಾದ ಆಶೀರ್ವಾದ ಮಾಡುತ್ತಾರೆ . ಮೂಲಸ್ಥಾನದಲ್ಲಿ ಮೊಗ್ಗು ಮುಡಿಸುತ್ತಾರೆ. ಒಳ್ಳೆದಾಗೋದಾದ್ರೆ ಬಲಭಾಗದ ಪ್ರಸಾದ ಆಗುತ್ತೆ . 100% ಒಳ್ಳೆಯದಾಗುತ್ತೆ ಎಂದು ದೇವಾಲಯದ ಕಾರ್ಯದರ್ಶಿ ವೀರಭದ್ರಪ್ಪ ಹೇಳಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us