/newsfirstlive-kannada/media/media_files/2026/01/22/governor-speech-details-2026-01-22-13-32-13.jpg)
ರಾಜ್ಯಪಾಲರು ಓದಿದ ಭಾಷಣದ ಅಂಶಗಳು ಇಷ್ಟೇ!
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಸಿದ್ದಪಡಿಸಿಕೊಟ್ಟಿದ್ದ ಪೂರ್ತಿ ಭಾಷಣವನ್ನು ಓದಿಲ್ಲ. ಭಾಷಣದ ಮೊದಲ ಏಳು ಸಾಲುಗಳನ್ನು ಮಾತ್ರ ಓದಿದ್ದಾರೆ. ಬಳಿಕ ಕೊನೆಯ ಪುಟದ ಮೂರು ಸಾಲುಗಳನ್ನು ಮಾತ್ರ ರಾಜ್ಯಪಾಲರು ಓದಿದ್ದಾರೆ. ಬಳಿಕ ಜೈ ಹಿಂದ್ ಎಂದು ಹೇಳಿ ವಿಧಾನಮಂಡಲದಿಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರ್ಗಮಿಸಿದ್ದಾರೆ. ರಾಷ್ಟ್ರಗೀತೆ ಹಾಡುವುದಕ್ಕೂ ಅವಕಾಶ ನೀಡದೇ ರಾಜ್ಯಪಾಲರು ವಾಪಸ್ ತೆರಳಿದ್ದಾರೆ.
ಈ ವೇಳೆ ವೇದಿಕೆಯಿಂದ ಇಳಿದು ಬಂದ ರಾಜ್ಯಪಾಲರನ್ನು ಮೊದಲಿಗೆ ಅಡ್ಡಗಟ್ಟಿದ್ದು, ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಎಸ್.ರವಿ ಹಾಗೂ ಹೊಸಕೋಟೆ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ. ಆದಾದ ಬಳಿಕ ವಿಧಾನಸಭೆಯ ಕೊನೆಯ ಸಾಲುಗಳ ಬಳಿ ಬಂದಾಗ, ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅಡ್ಡಗಟ್ಟಿ ರಾಜ್ಯಪಾಲರನ್ನು ಪ್ರಶ್ನಿಸಿದ್ದಾರೆ.
ರಾಜ್ಯಪಾಲರು ಓದಿದ ಮೊದಲ 7 ಸಾಲುಗಳಲ್ಲಿ ಸನ್ಮಾನ್ಯ ವಿಧಾನ ಪರಿಷತ್ ಸಭಾಪತಿ ಅವರೇ, ವಿಧಾನಸಭೆ ಸ್ಪೀಕರ್ ಅವರೇ, ಮುಖ್ಯಮಂತ್ರಿಗಳೇ, ಉಪಮುಖ್ಯಮಂತ್ರಿಗಳೇ, ಪ್ರತಿಪಕ್ಷದ ಗೌರವಾನ್ವಿತ ನಾಯಕರುಗಳೇ, ವಿಧಾನ ಸಭೆ, ವಿಧಾನಪರಿಷತ್‌ನ ಮಾನ್ಯೇ ಸದಸ್ಯರುಗಳೇ ಎಂಬುದಷ್ಟೇ ಇದೆ.
ಇನ್ನೂ ಕೊನೆ ಪುಟದ ಮೂರು ಸಾಲುಗಳಲ್ಲಿ ಯಾವುದೇ ಮಹತ್ವದ ಅಂಶಗಳಿಲ್ಲ.
ಕೊನೆಯ ಪುಟದ ಮೂರು ಸಾಲುಗಳಲ್ಲಿ ಒಟ್ಟಾರೆ ರಾಜ್ಯದ ಸಾಮಾಜಿಕ, ಆರ್ಥಿಕ, ಭೌತಿಕ ಅಭಿವೃದ್ದಿಯ ವೇಗವನ್ನು ದ್ವಿಗುಣಗೊಳಿಸಲು ನನ್ನ ಸರ್ಕಾರ ಕಂಕಣ ಬದ್ದವಾಗಿದೆ ಎಂದು ರಾಜ್ಯಪಾಲರು ಓದಿದ್ದಾರೆ. ಇದನ್ನಷ್ಟೇ ಓದಿ ಸದನದಿಂದ ನಿರ್ಗಮಿಸಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2024/02/Governor_1.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us