/newsfirstlive-kannada/media/media_files/2026/01/22/thawar-chand-gehlot-1-2026-01-22-11-18-50.jpg)
ಬೆಂಗಳೂರು: ಜಂಟಿ ಅಧಿವೇಶನದಲ್ಲಿ ಭಾರೀ ಹೈಡ್ರಾಮಾ ನಡೆದಿದ್ದು, ಸರ್ಕಾರ ಬರೆದುಕೊಟ್ಟ ಭಾಷಣ ಓದಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಹಿಂದೇಟು ಹಾಕಿದ್ದಾರೆ. ಅಲ್ಲದೇ, ಒಂದೇ ಸಾಲಿನಲ್ಲಿ ಭಾಷಣ ಮಾಡಿ ವಿಧಾನಸೌಧದಿಂದ ಹೊರಟು ಹೋಗಿದ್ದಾರೆ. ರಾಜ್ಯಪಾಲರ ನಡೆ ವಿರುದ್ಧ ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನ ಕೂಗಿದ್ದಾರೆ.
ಭಾಷಣದ ಆರಂಭದಲ್ಲಿ ನರೇಗಾ ಯೋಜನೆ ಬಗ್ಗೆ ಪ್ರಸ್ತಾಪಿಸಿರುವ ಕಾರಣಕ್ಕೆ ಮಾತು ಆರಂಭಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ. ಕಾನೂನು ಸಂಘರ್ಷಕ್ಕೆ ಎಡೆ ಮಾಡಿಕೊಡದೇ ಭಾಷಣ ಮಂಡಿಸಿ ರಾಜ್ಯಪಾಲರು ಅಲ್ಲಿಂದ ಹೊರಟು ಹೋಗಿದ್ದಾರೆ. ರಾಜ್ಯಪಾಲರು ಅಧಿವೇಶನಕ್ಕೆ ಆಗಮಿಸದಿದ್ದಲ್ಲಿ ಕಾನೂನು ಹೋರಾಟಕ್ಕೆ ಕಾಂಗ್ರೆಸ್ ಸಿದ್ಧವಾಗಿತ್ತು.
ರಾಜ್ಯಪಾಲರು ಸದನಕ್ಕೆ ಬರೋದು ಖಚಿತವಾಗಿದ್ದರೂ, ಅವರು ಸರ್ಕಾರದ ಪರವಾಗಿ ಸಿದ್ಧಪಡಿಸಲಾದ ಭಾಷಣವನ್ನು ಪೂರ್ಣ ಪ್ರಮಾಣದಲ್ಲಿ ಓದುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಸರ್ಕಾರ ಸಿದ್ಧಪಡಿಸಿರುವ ಭಾಷಣದ 11 ಪ್ರಮುಖ ಪ್ಯಾರಾಗಳನ್ನು ರಾಜ್ಯಪಾಲರು ಓದುತ್ತಾರಾ ಅಥವಾ ಇಲ್ಲವಾ? ಎಂಬ ಪ್ರಶ್ನೆ ಇತ್ತು. ಇದೀಗ ಕಲಾಪಕ್ಕೆ ಆಗಮಿಸಿ ರಾಜ್ಯಪಾಲರು ಸರ್ಕಾರ ಬರೆದುಕೊಟ್ಟಿದ್ದ ಭಾಷಣ ಓದದೇ ಅಲ್ಲಿಂದ ಹೊರಟು ಹೋಗಿದ್ದಾರೆ. ಸಾಮಾನ್ಯವಾಗಿ ರಾಜ್ಯಪಾಲರು ಸರ್ಕಾರದ ಸಾಧನೆಗಳ ಭಾಷಣವನ್ನು ಓದಬೇಕು. ಆದರೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರು ಕೇವಲ ಭಾಷಣದ ಪ್ರತಿಯನ್ನು ಸದನದ ಮುಂದಿಟ್ಟು ಹೋಗಿದ್ದಾರೆ.
ಹೈಡ್ರಾಮಾ..!
ರಾಜ್ಯಪಾಲರು ಭಾಷಣ ಮಾಡದೇ ಹೊರಟು ಹೋದ ಬೆನ್ನಲ್ಲೇ ಜಂಟಿ ಅಧಿವೇಶನದಲ್ಲಿ ದೊಡ್ಡ ಹೈಡ್ರಾಮಾ ನಡೆದಿದೆ. ಕಾಂಗ್ರೆಸ್ ಸದಸ್ಯರು ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಆಚೆ ಬಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ಸರ್ಕಾರ ತಯಾರು ಮಾಡಿ ಭಾಷಣ ಮಾಡದೆ, ಅವ್ರು ತಯಾರು ಮಾಡಿದ್ದ ಭಾಷಣ ಓದಿದ್ದಾರೆ. ಆ ಮೂಲಕ ಸಂವಿಧಾನ ಉಲ್ಲಂಘನೆ ಮಾಡಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ಆಗಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us