/newsfirstlive-kannada/media/media_files/2025/12/08/belgavi-suvarna-soudha-cm-2025-12-08-12-17-07.jpg)
ನಾಟಿ ಕೋಳಿ ಬಗ್ಗೆ ಸಿಎಂ- ಆರ್.ಅಶೋಕ್ ಸ್ವಾರಸ್ಯಕರ ಚರ್ಚೆ!
ನಾಟಿಕೋಳಿ ಬಗ್ಗೆ ಸಿಎಂ, ಪ್ರತಿಪಕ್ಷ ನಾಯಕರ ನಡುವೆ ಬೆಳಗಾವಿಯ ಸುವರ್ಣಸೌಧದಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿದೆ. ಸುವರ್ಣಸೌಧದ ಮೊಗಸಾಲೆಯಲ್ಲಿ ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ಅಶೋಕ್ ಮುಖಾಮುಖಿಯಾದರು. ಈ ವೇಳೆ ಅಶೋಕ್ ಹೆಗಲಮೇಲೆ ಕೈಹಾಕಿ ಯಾಕಯ್ಯಾ ಸಣ್ಣಗಾಗಿದ್ದಿಯಾ ಎಂದು ಸಿಎಂ ಸಿದ್ದರಾಮಯ್ಯ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಆರ್.ಅಶೋಕ್, ಆಗ ಇಲ್ಲ ಸಾರ್, ನಾನು ನಿಮ್ಮ ರೀತಿ ನಾಟಿಕೋಳಿ ತಿನ್ನೋದಿಲ್ಲ, ಈಗ ಅದನ್ನು ಬಿಟ್ಟಿದ್ದೇನೆ ಎಂದು ಅಶೋಕ್ ಹೇಳಿದ್ದರು.
ನಾಟಿಕೋಳಿ ತಿನ್ನಬೇಕಯ್ಯಾ, ಏನು ಆಗೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ, ಆರ್.ಅಶೋಕ್‌ಗೆ ಹೇಳಿದ್ದರು . ಇತ್ತೀಚೆಗೆ ಡಿಸಿಎಂ ನಿವಾಸದಲ್ಲಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ನಾಟಿಕೋಳಿ ಸಾಂಬಾರು ಹಾಗೂ ಇಡ್ಲಿಯನ್ನು ಸಿಎಂ ಸಿದ್ದರಾಮಯ್ಯ ಸವಿದಿದ್ದರು.
ಸಿಎಂ, ಡಿಸಿಎಂ ನಾಟಿಕೋಳಿಯನ್ನ ಮರ್ಡರ್ ಮಾಡಿದರು ಎಂದು ಪತ್ರಿಕಾಗೋಷ್ಠಿಯಲ್ಲಿ ಆರ್. ಅಶೋಕ್ ಕಿಚಾಯಿಸಿದ್ದರು. ಹೀಗಾಗಿ ಈಗ ಸಿಎಂ ಎದುರಿಗೆ ಸಿಕ್ಕಾಗ ಮತ್ತೆ ಅದೇ ನಾಟಿ ಕೋಳಿ ವಿಷಯವನ್ನೇ ಆರ್.ಅಶೋಕ್ ಪ್ರಸ್ತಾಪಿಸಿದ್ದಾರೆ. ಸಿಎಂ ನಾಟಿ ಕೋಳಿ ತಿನ್ನುತ್ತಾರೆ. ನಾನು ತಿನ್ನಲ್ಲ ಎಂದು ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/12/08/cm-and-r-ashok-discussion-2025-12-08-15-08-20.jpg)
ಚಳಿಗಾಲದ ಅಧಿವೇಶನಕ್ಕೂ ಮುನ್ನ ಉಭಯ ಕುಶಲೋಪರಿ ವಿಚಾರಿಸುವಾಗ ಸಿಎಂ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನಡುವೆ ಈ ಮಾತುಕತೆ ನಡೆದಿದೆ. ವಿಧಾನಸಭೆಯ ಮೊಗಸಾಲೆಯಲ್ಲಿ ಅಶೋಕ್ ಹೆಗಲಮೇಲೆ ಕೈ ಹಾಕಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಖುಷಿಯಲ್ಲೇ ಅಶೋಕ್, ಸುನಿಲ್ ಕುಮಾರ್ ಜೊತೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us