/newsfirstlive-kannada/media/post_attachments/wp-content/uploads/2023/07/Siddaramaiah_Session.jpg)
ಇಂದಿನಿಂದ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ ಶುರುವಾಗಲಿದೆ. ಇದಕ್ಕಾಗಿ ಕುಂದಾನಗರಿ ಬೆಳಗಾವಿಯ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಆಡಳಿತ ಪಕ್ಷ ಮತ್ತು ವಿಪಕ್ಷಗಳ ಕೂಡ ತಂತ್ರ-ಪ್ರತಿತಂತ್ರವನ್ನು ರೂಪಿಸಿ ಸದನದಲ್ಲಿ ಕದನಕ್ಕೆ ರೆಡಿಯಾಗಿವೆ. ಜೆಡಿಎಸ್​ ಶಾಸಕ ಚಳಿಗಾಲದ ಅಧಿವೇಶನಕ್ಕೂ ಮೊದ್ಲೇ ಬೇಸರ ವ್ಯಕ್ತಪಡಿಸಿದ್ದಾರೆ.
ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆ ಪೂರ್ಣ
8 ದಿನಗಳ ಕಾಲ ಬೆಳಗಾವಿ ರಾಜ್ಯದ ಶಕ್ತಿ ಕೇಂದ್ರವಾಗಲಿದೆ. ವಿಧಾನ ಮಂಡಲ ಚಳಿಗಾಲದ ಅಧಿವೇಶನಕ್ಕೆ ಸುವರ್ಣಸೌಧ ಸಕಲ ರೀತಿ ಸಜ್ಜಾಗಿದೆ. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ದನಿಯಾಗಿ ಸರ್ಕಾರವನ್ನು ತರಾಟೆ ತೆಗೆದುಕೊಳ್ಳಲು ವಿಪಕ್ಷಗಳು ತಂತ್ರ ರೂಪಿಸಿದ್ರೆ.. ವಿಪಕ್ಷಗಳನ್ನು ಕಟ್ಟಿಹಾಕಲು ಆಡಳಿತ ಪಕ್ಷವೂ ಪ್ರತಿತಂತ್ರವನ್ನು ರೂಪಿಸಿದೆ.
ಇದನ್ನೂ ಓದಿ: ಮಂದಾನ ಜೊತೆ ಮದುವೆ ಕ್ಯಾನ್ಸಲ್, ‘ಕಠಿಣ ಕಾನೂನು ಕ್ರಮ’ ಎಂದ ಮುಚ್ಚಲ್..!
ಚಳಿಗಾಲದ ಅಧಿವೇಶನದ ಹಿನ್ನೆಲೆ, ಸುವರ್ಣಸೌಧದ ಉಭಯ ಸದನಗಳಲ್ಲೂ ಸಿದ್ಧತೆಗಳು ಪೂರ್ಣಗೊಂಡಿವೆ. ದ್ವೇಷ ಭಾಷಣ ಕಾಯ್ದೆ ಸೇರಿ ಹಲವು ಮಸೂದೆ ಅಂಗೀಕಾರಕ್ಕೆ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಪ್ಲಾನ್​ ಮಾಡಿಕೊಂಡಿದೆ. ಆದ್ರೆ ಅಧಿವೇಶನ ಆರಂಭಕ್ಕೂ ಮೊದ್ಲೇ ಗುರಮಿಠ್ಕಲ್ ಕ್ಷೇತ್ರದದ ಜೆಡಿಎಸ್​ ಶಾಸಕ ಶರಣಗೌಡ ಕಂದಕೂರ್​​ ಬೇಸರ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯುವ ಸರ್ಕಾರದ ಅಧಿಕೃತ ಪ್ರವಾಸಕ್ಕೆ ಭಾರವಾದ ಮನಸ್ಸಿನಿಂದ ಸ್ವಾಗತ ಎಂದು ವಾಟ್ಸಾಪ್​ ಸ್ಟೇಸ್​​ ಹಾಕಿ, ಅಸಮಾಧಾನ ಹೊರ ಹಾಕಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ-ವಿಪಕ್ಷಗಳ ನಡುವೆ ನಡೆಯಲಿದೆ ಬಿಸಿ ಬಿಸಿ ಚರ್ಚೆ ನಡೆಯಲಿದೆ. ಮೊದಲ ದಿನದಿಂದಲೇ ಚರ್ಚೆ ಅವಕಾಶ ಕೇಳಲು ಬಿಜೆಪಿ ಜೆಡಿಎಸ್ ಪ್ಲಾನ್​ ಮಾಡಿಕೊಂಡಿವೆ. ಇನ್ನು ವಿಪಕ್ಷದ ಅಸ್ತ್ರಗಳಿಗೆ ಕೌಂಟರ್ ಕೊಡಲು ಸರ್ಕಾರವೂ ತಂತ್ರವನ್ನು ರೂಪಿಸಿದೆ.
ಕಮಲ-ದಳ ಪಡೆ ರಣತಂತ್ರ
- ರಾಜ್ಯ ಸರ್ಕಾರದ ವೈಫಲ್ಯಗಳನ್ನು ಅಸ್ತ್ರ ಮಾಡಿಕೊಳ್ಳೊಕೆ ತಂತ್ರ
- ಜೈಲಲ್ಲಿ ಭಯೋತ್ಪಾದಕರಿಗೆ ಮೊಬೈಲ್, ಮದ್ಯಪಾನ ತಯಾರಿಕೆ
- ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ವಾಚ್ ಖರೀದಿ ವಿಚಾರ
- ಕುರ್ಚಿ ಫೈಟ್ ಪ್ರಸ್ತಾಪಿಸಿ ಸರ್ಕಾರವನ್ನ ಇಕ್ಕಟ್ಟಿಗೆ ತಳ್ಳಲು ಪ್ಲಾನ್
- ಕಬ್ಬು ಬೆಳೆಗಾರರ ಸಮಸ್ಯೆ, ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ
- ನೆರೆ ಪರಿಹಾರ ವಿಳಂಬ, TB ಡ್ಯಾಂ ನಿಂದ ನೀರು ಹರಿಸದಿರೋದು
- ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಅನುದಾನ ನೀಡದಿರುವುದು
- ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಸಕಲ ಸಿದ್ಧತೆ
- ವಿಪಕ್ಷಗಳ ಅಸ್ತ್ರಗಳಿಗೆ ಸರ್ಕಾರವೂ ಕೌಂಟರ್ ನೀಡೋಕೆ ತಂತ್ರ
- ಕಬ್ಬು ಬೆಳೆಗಾರರ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡು ನಿರ್ಧಾರ
- ಕೇಂದ್ರ ಸರ್ಕಾರ ತೋರುತ್ತಿರುವ ತಾರತಮ್ಯ ನೀತಿ ಪ್ರಸ್ತಾಪ
- ಬಿಜೆಪಿಯಲ್ಲಿ ಗೊಂದಲಗಳನ್ನ ಪ್ರಸ್ತಾಪಿಸಲು ಕೈಪಡೆ ಸಿದ್ಧತೆ
- ದ್ವೇಷ ಭಾಷಣ ಕಾಯ್ದೆ ಸೇರಿ ಹಲವು ಮಸೂದೆ ಅಂಗೀಕಾರಕ್ಕೆ ಸಿದ್ಧತೆ
ಇದನ್ನೂ ಓದಿ: ಮಂದಾನ ಜೊತೆ ಮದುವೆ ಕ್ಯಾನ್ಸಲ್, ‘ಕಠಿಣ ಕಾನೂನು ಕ್ರಮ’ ಎಂದ ಮುಚ್ಚಲ್..!
ಒಂದು ದಿನ ಮೊದಲೇ ಬೆಳಗಾವಿಗೆ ಆಗಮಿಸಿದ ಸಿಎಂ
ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗ್ತಿದೆ. ಆದ್ರೆ ಸಿಎಂ ಸಿದ್ದರಾಮಯ್ಯ ಒಂದು ದಿನ ಮೊದಲೇ ಕುಂದಾನಗರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದಾರೆ. ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಬಂದ ಸಿಎಂ, ಬಳಿಕ ಹೆಲಿಕಾಫ್ಟ್​ನಲ್ಲಿ ನವಲಗುಂದಕ್ಕೆ ತೆರಳಿ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವ ಜೋಡಿಗಳಿಗೆ ಶುಭ ಹಾರೈಸಿದ್ರು. ಬಳಿಕ ಹೆಲಿಕಾಫ್ಟರ್​​ ಮೂಲಕ ಸುವರ್ಣಸೌಧಕ್ಕೆ ತೆರಳಿದ ಸಿದ್ದರಾಮಯ್ಯ, ರಾತ್ರಿ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.
ಒಟ್ಟಾರೆ.. ಇಂದಿನಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು. ಇಡೀ ಆಡಳಿತ ಯಂತ್ರವೇ ಕುಂದಾನಗರಿಗೆ ಶಿಫ್ಟ್​ ಆಗಿದೆ. ಇನ್ನು ದೆಹಲಿಯಲ್ಲಿ ಬಾಂಬ್​ಬ್ಲಾಸ್ಟ್​​ ಹಿನ್ನೆಲೆ ಗುಪ್ತಚರ ಇಲಾಲೆ ಮಾಹಿತಿ ಮೇರೆಗೆ ಬೆಳಗಾವಿ ಪೊಲೀಸರು ಫುಲ್​ ಅಲರ್ಟ್​ ಆಗಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್​ ಕೈಗೊಂಡಿದ್ದಾರೆ. ಪ್ರತಿಭಟನೆಗಳಿಗೆ ಸುವರ್ಣ ಗಾರ್ಡನ್ ಹಾಗೂ ಅಲಾರವಾಡ ಬಳಿ ಸ್ಥಳ ನಿಗದಿ ಮಾಡಲಾಗಿದ್ದು, ಕುಂದಾನಗರಿ ಏಳು ಸುತ್ತಿನ ಭದ್ರಕೋಟೆಯಂತಾಗಿದೆ.
ಇದನ್ನೂ ಓದಿ: ಶಾಸಕ ದಿನೇಶ್ ಗೂಳಿಗೌಡ ಅವರ ಕಳಕಳಿಗೆ ಡಿಸಿಎಂ ತಕ್ಷಣ ಸ್ಪಂದನೆ -ಬೆಂಗಳೂರು ಮಾಲಿನ್ಯ ನಿಯಂತ್ರಣಕ್ಕೆ ದಿಟ್ಟ ಹೆಜ್ಜೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us