/newsfirstlive-kannada/media/media_files/2026/03/03/trump-says-that-war-for-four-weeks-2026-03-03-09-54-41.jpg)
ಅಮೆರಿಕ, ಇಸ್ರೇಲ್ ದೋಸ್ತಿ.. ಇರಾನ್ ಮೇಲೆ ಕುಸ್ತಿ ಸಾರಿದೆ. ಈ ಜಂಟಿ ದಾಳಿ ಸದ್ಯ ಮಧ್ಯಪ್ರಾಚ್ಯವನ್ನ ರಕ್ತದ ಮಡುವಿನಲ್ಲಿ ತೇಲುವಂತೆ ಮಾಡ್ತಿದೆ. ಇದಕ್ಕೆ ಅಂತ್ಯ ಯಾವಾಗ ಎಂಬ ಪ್ರಶ್ನೆಗಳು ಉದ್ಬವಿಸಿದೆ. ಈ ನಡುವೆ ಇರಾನ್ ಮೇಲಿನ ದಾಳಿಗಳು ಮುಂದುವರೆಯುತ್ತೆ ಅಂತ ಅಮೆರಿಕಾ ಅಧ್ಯಕ್ಷ ಟ್ರಂಪ್​ ಕೊಟ್ಟ ವಾರ್ನಿಂಗ್.. ಇರಾನಿ ಜನರ ನಿದ್ದೆಗೆಡಿಸಿದೆ.
ಯುಎಸ್ ಸೈನಿಕರ ಸಾವಿಗೆ ಉತ್ತರ ಕೊಡಲು ಟ್ರಂಪ್ ಸಿದ್ಧತೆ!
ಈಗಲೇ ಮುಗಿದಿಲ್ಲ.. ಇನ್ನೂ 4 ವಾರಗಳು ನಡೆಯುತ್ತೆ ಯುದ್ಧ’
ಇಸ್ರೇಲ್-ಅಮೆರಿಕಾ ಜಂಟಿಯಾಗಿ ಇರಾನ್ ಮೇಲೆ ಮುಗಿ ಬಿದ್ದಿದೆ. ಮಧ್ಯಪ್ರಾಚ್ಯ ಭೂಮಿ ರಕ್ತದಿಂದ ಒದ್ದೆಯಾಗಿದೆ. ಯುದ್ಧವು ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಯುದ್ಧದ ವ್ಯಾಪ್ತಿಯು ವಿಸ್ತಾರಗೊಳ್ಳುತ್ತಿದೆ. ಎಲ್ಲೆಡೆ ಕ್ಷಿಪಣಿಗಳು ಹಾಗೂ ಬಾಂಬ್ ಸದ್ದು ಕೇಳಿ ಬರುತ್ತಿವೆ. ಯುರೋಪಿಯನ್ ರಾಷ್ಟ್ರಗಳಿಗೂ ಈ ಯುದ್ಧ ವ್ಯಾಪಿಸುತ್ತಿದ್ದು, ವಿಶ್ವದ ಅತ್ಯಂತ ಸುರಕ್ಷಿತ ದೇಶ ಎಂಬ ಖ್ಯಾತಿ ಗಳಿಸಿದ್ದ ದುಬೈನ ಮೇಲೂ ಈ ಯುದ್ಧ ತೀವ್ರ ಪರಿಣಾಮ ಬೀರಿದೆ.
ಇದರ ಜೊತೆಗೆ ಯುರೋಪ್​ನ ಕೆಲ ದೇಶಗಳು ಸಹ ಇರಾನ್ ನೊಂದಿಗಿನ ಯುದ್ದಕ್ಕೆ ಯುಎಸ್​ಗೆ ಬೆಂಬಲ ನೀಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದು, ಇದು ಎಲ್ಲಿ 3ನೇ ಮಹಾಯುದ್ದಕ್ಕೆ ನಾಂದಿ ಹಾಡುತ್ತದೋ ಎಂಬ ಆತಂಕಕ್ಕೆ ಕಾರಣವಾಗಿದೆ. ಈ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್.. ಶಾಕಿಂಗ್​ ಇನ್ಫಾರ್ಮೇಶನ್​ ಅನ್ನ ಹಂಚಿಕೊಂಡಿದ್ದಾರೆ. ಈ ಯುದ್ಧವು ಸದ್ಯಕ್ಕೆ ಮುಗಿಯೋದಿಲ್ಲ ಎನ್ನುವ ಮುನ್ಸೂಚನೆಯನ್ನ ಕೊಟ್ಟಿದ್ದಾರೆ. ಮಧ್ಯಪ್ರಾಚ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಹಾಗೂ ಯುದ್ಧದ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ಇರಾನ್​ ಪ್ರಜೆಗಳ ಎದೆ ನಡುಗುವಂತೆ ಮಾಡಿದೆ.
(ನಿಜವಾದ ದೇಶಭಕ್ತರು ಇವತ್ತು ದೇಶಕ್ಕಾಗಿ ಪ್ರಾಣ ಒತ್ತೆ ಇಟ್ಟು ಹೋರಾಡಿದ್ದಾರೆ. ನಾವು ಏನೇ ಆದ್ರೂ ನಿಲ್ಲದೆ ಮುನ್ನುಗ್ಗುತ್ತೇವೆ.. ಯುದ್ಧದಲ್ಲಿ ಯುಸ್​ಗಾಗಿ ಪ್ರಾಣ ತ್ಯಾಗ ಮಾಡಿದವರಿಗೆ ನಮ್ಮ ಆತ್ಮೀಯ ಪ್ರೀತಿ.. ಗೌರವವನ್ನ ಸಲ್ಲಿಸುತ್ತೇವೆ.. ಪ್ರಾಣ ತ್ಯಾಗ ಮಾಡಿವರ ಕುಟುಂಬಗಳಿಗೂ ಒಂದದು ನಮನ.. ಬೇಸರ ಸಂಗತಿ ಎಂದರೆ ಇದು ಇನ್ನೂ ಮುಂದುವರೆಯುತ್ತೆ.. ಇದು ಕೊನೆಗೊಳ್ಳುವಷ್ಟರಲ್ಲಿ ಇನ್ನೂ ಹೆಚ್ಚಾಗುತ್ತೆ.)
ಇರಾನ್ ನೊಂದಿಗಿನ ಅಮೆರಿಕಾ ಸಂಘರ್ಷಕ್ಕೆ ಕೊನೆಯೆಂದು ಎಂಬ ಪ್ರಶ್ನೆ ಹಲವರಲ್ಲಿ ಮೂಡಿದ್ದು, ಇದಕ್ಕೆ ಸ್ವತಃ ಟ್ರಂಪ್ ಉತ್ತರಿಸಿ ಇರಾನ್ ನೊಂದಿಗಿನ ಯುದ್ದ ಬಹುಶಃ ಮುಂದಿನ 4 ವಾರಗಳು ನಡೆಯಲಿದೆ. ಇದಾದ ಬಳಿಕ ಅಂತ್ಯವಾಗಬಹುದು ಅನ್ನೋ ಮಾಹಿತಿಯನ್ನ ತಮ್ಮ ಟ್ರೂಥ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಾತುಕತೆಗೆ ಸಿದ್ದ ಎಂದ ಟ್ರಂಪ್.. ಇದಕ್ಕೆ ಇರಾನ್​ ನಕಾರ!
ಅತ್ಯಂತ ಕಠಿಣ ಯುದ್ದದ ಸಮಯದಲ್ಲಿಯೂ ಸಹ ಟ್ರಂಪ್​ ಇರಾನ್ ನೊಂದಿಗೆ ಮಾತುಕತೆಗೆ ಸಿದ್ದ ಎಂದಿದ್ದಾರೆ. ಶಸ್ತಾಸ್ತ್ರ ತ್ಯಜಿಸಿ ಶರಣಾದರೆ ಉಳಿಗಾಲ ಇಲ್ಲದಿದ್ದರೆ ಪೂರ್ತಿ ಬಲಪ್ರಯೋಗದೊಂದಿಗೆ ದಾಳಿ ನಡೆಸುವುದಾಗಿ ಇರಾನ್ ಸೈನಿಕರಿಗೆ ಡೋನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ ಇರಾನ್ ಅಮೆರಿಕದೊಂದಿಗೆ ಯಾವುದೇ ಮಾತುಕತೆಗಳನ್ನ ಮಾಡುವುದಿಲ್ಲ ಅಂತ ಕಡ್ಡಿ ಮುರಿದಂತೆ ಹೇಳಿದ್ದಾರೆ.
ಖಮೇನಿಯ ಹತ್ಯೆ ಬಗ್ಗೆ ಕರಾಳ ವಿಚಾರ ಬಿಚ್ಚಿಟ್ಟ ಟ್ರಂಪ್​!
‘ನನ್ನ ಹತ್ಯೆಗೆ ಸಂಚು ರೂಪಿಸಿದ್ರು.. ಹೀಗಾಗಿ ಹತ್ಯೆ ಮಾಡಿದ್ವಿ’
ಖಮೇನಿ ಹತ್ಯೆಗೆ ಯುದ್ದವೇ ಪ್ರತೀಕಾರ ಅಂತ ಇರಾನ್​ ತಿಳಿಸಿದೆ.. ಇದರ ನಡುವೆ ಟ್ರಂಪ್​ ಮತ್ತೊಂದು ಆರೋಪವನ್ನ ಮಾಡಿದ್ದಾರೆ. ಇರಾನ್ ಸರ್ವೋಚ್ಛ ನಾಯಕ ಆಯತೋಲ್ಲಾ ಖಮೇನಿ ನನ್ನ ಹತ್ಯೆಗೆ ಸಂಚು ರೂಪಿಸಿದ್ದರು, ಆದ್ರೆ ಆತ ನನ್ನನ್ನ ಹತ್ಯೆ ಮಾಡೋದಕ್ಕೂ ಮೊದಲೇ ನಾನೇ ಆತನನ್ನ ಹತ್ಯೆ ಮಾಡಿದ್ದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. 2024ರಲ್ಲಿ ಖಮೇನಿ ತನ್ನ ಹತ್ಯೆಗೆ ಸಂಚು ರೂಪಿಸಿದ್ದರು. ಚುನಾವಣಾ ಱಲಿ ವೇಳೆ ಟ್ರಂಪ್ ಕಿವಿಯ ಬಳಿ ಹಾದು ಹೋದ ಗುಂಡೇಟಿನ ಘಟನೆ ಇರಾನ್ ಯೋಜಿತ ಕೃತ್ಯ ಅಂತ ಡೋನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಒಂದೆಡೆ ಅಮೆರಿಕಾ 4 ವಾರಗಳ ಡೆಡ್ ಲೈನ್ ನೀಡಿದೆ.. ಇರಾನ್ ಸಹ ಅಮೆರಿಕಾದೊಂದಿಗೆ ಯಾವುದೇ ಮಾತುಕತೆಗೂ ಸಿದ್ದವಿಲ್ಲ ಅಂತ ದ್ವಂದ್ವ ನಿಲುವು ಪ್ರದರ್ಶನ ಮಾಡ್ತಿದೆ. ಈ ವಾಗ್ದಾಳಿಗಳು ಯುದ್ದದ ಅಂತ್ಯಕ್ಕೆ ಸೂತ್ರವೇ ಇಲ್ಲದ ಗಾಳಿಪಟದಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us