ದೆಹಲಿಯಲ್ಲಿ ಮದುವೆ ಅರತಕ್ಷತೆ ಮಾಡಿಕೊಂಡ ಮೌಹಾ ಮೋಯಿತ್ರ- ಪಿನಾಕಿ ಮಿಶ್ರಾ ದಂಪತಿ

ಜೂನ್ 30 ರಂದು ಜರ್ಮನ್ ನಲ್ಲಿ ವಿವಾಹವಾಗಿದ್ದ ಟಿಎಂಸಿ ಸಂಸದೆ ಮೌಹಾ ಮೋಯಿತ್ರ- ಪಿನಾಕಿ ಮಿಶ್ರಾ ದೆಹಲಿಯಲ್ಲಿ ನಿನ್ನೆ ಮದುವೆಯ ರೆಸೆಪ್ಷನ್ ಮಾಡಿಕೊಂಡಿದ್ದಾರೆ. ರೆಸೆಪ್ಷನ್ ಗೆ ಎಲ್ಲ ಪಕ್ಷಗಳ ನಾಯಕರು ಆಗಮಿಸಿ ನೂತನ ದಂಪತಿಗೆ ಶುಭ ಹಾರೈಸಿದ್ದಾರೆ. ಯಾರಾರು ಬಂದಿದ್ದರು, ಹೇಗೆ ರೆಸೆಪ್ಷನ್ ನಡೆಯಿತು ಅನ್ನೋದರ ಪೋಟೋಗಳು ಇಲ್ಲಿವೆ

author-image
Chandramohan
tmc mp mahua moitra reception222
Advertisment
  • ದೆಹಲಿಯಲ್ಲಿ ಮದುವೆ ರೆಸೆಷ್ಷನ್ ಮಾಡಿಕೊಂಡ ಸಂಸದೆ ಮೌಹಾ ಮೋಯಿತ್ರ-ಪಿನಾಕಿ ಮಿಶ್ರಾ
  • ಟಿಎಂಸಿ ಪಕ್ಷದ ಹಾಲಿ ಸಂಸದೆ ಮೌಹಾ ಮೋಯಿತ್ರ- ಬಿಜೆಡಿ ಮಾಜಿ ಸಂಸದ ಪಿನಾಕಿ ಮಿಶ್ರಾ
  • ಜರ್ಮನ್ ನಲ್ಲಿ ಮದುವೆ, ದೆಹಲಿಯಲ್ಲಿ ರೆಸೆಪ್ಷನ್ ಪಾರ್ಟಿ

ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ಫೈರ್ ಬ್ರಾಂಡ್ ನಾಯಕಿ, ಸಂಸದೆ ಮೌಹಾ ಮೋಯಿತ್ರ ಎರಡು ತಿಂಗಳ ಹಿಂದೆಯಷ್ಟೇ ಒರಿಸ್ಸಾದ ಪಿನಾಕಿಮಿಶ್ರಾರನ್ನು ಜರ್ಮನ್ ನಲ್ಲಿ ಜೂನ್ 30 ರಂದು ವಿವಾಹವಾಗಿದ್ದರು. ಈಗ ದೆಹಲಿಯ ಲಲಿತ್ ಅಶೋಕ್ ಹೋಟೇಲ್ ನಲ್ಲಿ ಮದುವೆಯ ರಿಸೆಪ್ಷನ್ ಮಾಡಿಕೊಂಡಿದ್ದಾರೆ. ಪಕ್ಷಾತೀತವಾಗಿ ಸಂಸದರು, ನಾಯಕರುಗಳನ್ನು ತಮ್ಮ ಮದುವೆಯ ರಿಸೆಪ್ಷನ್ ಗೆ ಆಹ್ವಾನಿಸಿದ್ದರು. ಮದುವೆ ರಿಸೆಪ್ಷನ್ ನಲ್ಲಿ ಮೌಹಾ ಮೋಯಿತ್ರ ಕೆಂಪು ಸೀರೆ, ಚಿನ್ನಾಭರಣ ಧರಿಸಿ ಮಿಂಚಿದ್ದರು. ಇನ್ನೂ ಪತಿ ಪಿನಾಕಿ ಮಿಶ್ರಾ ಬಿಳಿಬಣ್ಣದ ಬಟ್ಟೆ ಧರಿಸಿದ್ದರು. ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ದೀಪೇಂದರ್ ಹೂಡಾ, ಶಿವಸೇನೆ ಪಕ್ಷದ ಪ್ರಿಯಾಂಕಾ ಚತುರ್ವೇದಿ, ಟಿಎಂಸಿ ಪಕ್ಷದ ಸಂಸದೆ ಸಾಗರಿಕಾ ಘೋಷ್, ರಚನಾ ಬ್ಯಾನರ್ಜಿ,  ಸಮಾಜವಾದಿ ಪಕ್ಷದ ಸಂಸದ ವೀರೇಂದ್ರ ಸಿಂಗ್, ಎನ್‌ಸಿಪಿ ಪಕ್ಷದ ಸಂಸದೆ ಸುಪ್ರಿಯಾ ಸುಳೆ, ತೆಲಂಗಾಣದ ಸಿಎಂ ರೇವಂತ್ ರೆಡ್ಡಿ, ವಿವಿಧ ಪಕ್ಷಗಳ ಹತ್ತಾರು ಮಂದಿ ಮಹಿಳಾ ಸಂಸದರು ರೆಸೆಪ್ಷನ್ ನಲ್ಲಿ ಭಾಗವಹಿಸಿ ನೂತನ ದಂಪತಿಗೆ ಶುಭ ಹಾರೈಸಿದ್ದರು. 



ಬೇರೆ ಬೇರೆ ಕಾರಣಗಳಿಂದ ಮೌಹಾ ಮೋಯಿತ್ರ ಹಾಗೂ ಪಿನಾಕಿ ಮಿಶ್ರಾ ಇಬ್ಬರ ಮದುವೆಯೂ ದೇಶದ ರಾಜಕೀಯ ವಲಯ ಹಾಗೂ ಜನರ ಗಮನವನ್ನು ಸೆಳೆದಿದೆ. ಮೌಹಾ ಮೋಯಿತ್ರ ಪಶ್ಚಿಮ ಬಂಗಾಳದ ಕೃಷ್ಣಾನಗರ  ಕ್ಷೇತ್ರದಿಂದ 2ನೇ ಭಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ವಿದೇಶದಲ್ಲಿ ಬ್ಯಾಂಕರ್ ಆಗಿದ್ದರು. ಮೌಹಾ ಮೋಯಿತ್ರರ ಮೊದಲ ಮದುವೆ ವಿಚ್ಛೇದನದಲ್ಲಿ ಅಂತ್ಯವಾಗಿದೆ. 
ಇನ್ನೂ ಬಿಜೆಡಿ ಪಕ್ಷದಿಂದ ಒರಿಸ್ಸಾದ ಪುರಿ ಲೋಕಸಭಾ ಕ್ಷೇತ್ರದಿಂದ ಪಿನಾಕಿ ಮಿಶ್ರಾ ಲೋಕಸಭೆಗೆ ಆಯ್ಕೆಯಾಗಿದ್ದರು. ಈಗ ಮಾಜಿ ಲೋಕಸಭಾ ಸದಸ್ಯರಾಗಿದ್ದಾರೆ. ವೃತ್ತಿಯಲ್ಲಿ ವಕೀಲರು ಕೂಡ ಹೌದು. ಪಿನಾಕಿ ಮಿಶ್ರಾಗೂ ಈಗಾಗಲೇ ಒಂದು ಮದುವೆಯಾಗಿ ಮಕ್ಕಳಿದ್ದರು. ಈಗ ಪಿನಾಕಿ ಮಿಶ್ರಾ ಜೀವನದಲ್ಲಿ ಎರಡನೇ ಭಾರಿಗೆ ವಿವಾಹವಾಗಿದ್ದಾರೆ.  

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕ ಡ್ಯಾನಿಶ್ ಅಲಿ , ತಮಿಳುನಾಡಿನ ಕಾಂಗ್ರೆಸ್, ಡಿಎಂಕೆ ಪಕ್ಷದ ಸಂಸದರು ಸೇರಿದಂತೆ ಅನೇಕ ಗಣ್ಯರು ಮದುವೆ ರೆಸೆಪ್ಷನ್ ನಲ್ಲಿ ಭಾಗಿಯಾಗಿದ್ದರು. 

Mahua moitra, TMC, BJD, WEST BENGAL, ORRISSA, MP'S MARRIAGE, MARRIAGE RECEPTION
Advertisment