ಟಾಕ್ಸಿಕ್ ಸಿನಿಮಾ ಟೀಸರ್‌ ಎಡಿಟೇಡ್‌ ವಿಡಿಯೋ ಬಿಡುಗಡೆ : ಹೀರೋ ಆಗಿ ಎಚ್‌.ಡಿ.ಕೆ ಎಂಟ್ರಿ, ಡ್ಯಾಡಿ ಈಸ್ ಹೋಮ್ ಎಂದು ಎಂಟ್ರಿ! ಸಖಲ್ ವೈರಲ್‌!

ಟಾಕ್ಸಿಕ್ ಸಿನಿಮಾದ ಟೀಸರ್‌ ಅನ್ನು ರಾಜ್ಯ ರಾಜಕಾರಣದಲ್ಲಿ ತಮಗೆ ಅನುಕೂಲವಾಗುವಂತೆ ಜೆಡಿಎಸ್ ಅಭಿಮಾನಿಗಳು ಎಡಿಟ್ ಮಾಡಿ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಹೀರೋ ರೀತಿ ವಿಡಿಯೋದಲ್ಲಿ ಬಿಂಬಿಸಿದ್ದಾರೆ. ಇದು ಸಖತ್ ವೈರಲ್ ಆಗುತ್ತಿದೆ.

author-image
Chandramohan
toxic teaser edited version released
Advertisment

ಮೊನ್ನೆಯಷ್ಟೇ ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ಸಿನಿಮಾ ಹೀರೋ ಯಶ್ ರಾಯನಾಗಿ ಸ್ಮಶಾನದ ಬಳಿಗೆ ಕಾರಿನಲ್ಲಿ ಎಂಟ್ರಿ ಕೊಡುತ್ತಾರೆ. ಕಾರಿನಲ್ಲಿ ಹೀರೋಯೀನ್ ಜೊತೆ ಸರಸ ಸಲ್ಲಾಪ ನಡೆಸಿದ ಬಳಿಕ ಕಾರಿನಿಂದ ಹೀರೋ ಯಶ್ ಗ್ರ್ಯಾಂಡ್ ಆಗಿ ಇಳಿಯುತ್ತಾರೆ. ರಾಕಿಂಗ್ ಸ್ಟಾರ್ ಯಶ್ ಕಾರಿನಿಂದ ಇಳಿಯುತ್ತಿದ್ದಂತೆ, ಭೂಮಿಯೊಳಗೆ ಹುದುಗಿಸಿದ್ದ ಬಾಂಬ್ ಗಳು ಸ್ಮಶಾನದಲ್ಲಿ ಬ್ಲಾಸ್ಟ್ ಆಗುತ್ತಾವೆ. ಸ್ಮಶಾನದಲ್ಲಿದ್ದ ವಿಲನ್ ಗಳು ಶಾಕ್ ಆಗ್ತಾರೆ. ಬಾಂಬ್ ಬ್ಲಾಸ್ಟ್ ಆಗುತ್ತಿದ್ದಂತೆ, ಸ್ಮಶಾನದಲ್ಲಿದ್ದ ವಿಲನ್ ಗಳಿಗೆ ನಡುಕ ಶುರುವಾಗುತ್ತೆ.  ಇದೇ ಟಾಕ್ಸಿಕ್ ಸಿನಿಮಾದ ದೃಶ್ಯ, ವ್ಯಕ್ತಿಗಳ ಸ್ಥಳಕ್ಕೆ ಕರ್ನಾಟಕ ರಾಜಕಾರಣದ ಮೂವರು ದಿಗ್ಗಜ ನಾಯಕರನ್ನು ಜೋಡಿಸಿ, ವಿಡಿಯೋ ಎಡಿಟ್ ಮಾಡಿ, ಹೊಸ ಡೈಲಾಗ್ ಸೇರಿಸಿ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿದೆ.
ಮದ್ದೂರು ಹೈಕಳು ಟ್ರೋಲ್ ಪೇಜ್ ನಿಂದ ಬಿಡುಗಡೆಯಾದ ವಿಡಿಯೋ ಈಗ ರಾಜ್ಯದಲ್ಲಿ ಫುಲ್ ವೈರಲ್ ಆಗಿದೆ. ಫೇಸ್ ಬುಕ್, ಇನ್ಸಾಟಾಗ್ರಾಮ್, ವಾಟ್ಸಾಫ್ ನಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಹೀರೋ ಯಶ್ ಸ್ಥಾನಕ್ಕೆ ಎಚ್‌.ಡಿ.ಕುಮಾರಸ್ವಾಮಿರನ್ನು ಎಡಿಟ್ ಮಾಡಿ ಸೇರಿಸಲಾಗಿದೆ.
ಇನ್ನೂ ಸ್ಮಶಾನದಲ್ಲಿ ನಿಂತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ ವಿಡಿಯೋ ರೀಲೀಸ್ ಮಾಡಲಾಗಿದೆ. 
ನಾವು ಈ ರಾಜ್ಯವನ್ನು ಶಾಂತಿಯುತವಾಗಿ ಲೂಟಿ ಮಾಡಬೇಕು ಎಂದಿದ್ದೇವೆ ಎಂದು ಡಿಸಿಎಂ ಡಿಕೆಶಿ ಡೈಲಾಗ್ ಹೇಳಿದಂತೆ ವಿಡಿಯೋ ಎಡಿಟ್ ಮಾಡಲಾಗಿದೆ. ಬಳಿಕ ಸಿಎಂ ಸಿದ್ದರಾಮಯ್ಯ ಅವರು, ನಿಮಗೆ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂದು ಅನ್ನಿಸುತ್ತಾ ಎಂದು ಕೇಳಿದ್ದಾರೆ. ನನಗೆ ಹಾಗೆ ಅನ್ನಿಸಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಬಳಿಕ ಕಾರಿನಿಂದ ಧೂಳೆಬ್ಬಿಸಿಕೊಂಡು ಕುಮಾರಸ್ವಾಮಿ ಇಳಿಯುತ್ತಾರೆ. ಎಚ್‌.ಡಿ.ಕುಮಾರಸ್ವಾಮಿ ಬಿಳಿ ಶರ್ಟ್, ಬಿಳಿ ಪಂಚೆ, ಕಣ್ಣಿಗೆ ಬ್ಲಾಕ್ ಕನ್ನಡಕ ಹಾಕಿಕೊಂಡು ಕಾರಿನಿಂದ ಕೆಳಗೆ ಇಳಿದು ನಡೆದುಕೊಂಡು ಬರುತ್ತಾರೆ.  ಕುಮಾರಸ್ವಾಮಿ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ, ಟಾಕ್ಸಿಕ್ ಸಿನಿಮಾದಲ್ಲಿ ಸ್ಮಶಾನದಲ್ಲಿ ಬಾಂಬ್ ಬ್ಲಾಸ್ಟ್ ಆಗುವಂತೆ,  ಈ ವಿಡಿಯೋದಲ್ಲೂ ಬಾಂಬ್ ಸ್ಪೋಟವಾಗುತ್ತಾವೆ. ಕಾಯಿರಿ, ಅವರು ಇಲ್ಲಿಗೆ ಬರುವಂತಿರಲಿಲ್ಲ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ. ಡ್ಯಾಡಿ ಈಸ್ ಹೋಮ್ ಎಂಬ ಕುಮಾರಸ್ವಾಮಿ ಡೈಲಾಗ್ ನೊಂದಿಗೆ ಎಡಿಟ್ ಆದ ವಿಡಿಯೋ ಎಂಡ್ ಆಗುತ್ತೆ. 




ಇನ್ನೂ ಜೆಡಿಎಸ್ ಅಭಿಮಾನಿಗಳು, ಕಾರ್ಯಕರ್ತರ ಎಡಿಟ್‌ ಆದ ವಿಡಿಯೋಗೆ  ಕಾಂಗ್ರೆಸ್ ಪಕ್ಷದ  ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ದಾರೆ. ಯಾರು ಡ್ಯಾಡಿ, ಡ್ಯಾಡಿ‌ ಈಸ್ ಹೋಮ್ ಅಂದ್ರೆ ಏನು ? ಅವರು ಮೊದಲು  ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲಿ.  ರಾಜೀನಾಮೆ ಕೊಟ್ಟ ಮೇಲೆ ತಾನೇ ಮಾತು.   ಅವರು ರಾಜೀನಾಮೆ ಕೊಟ್ಟು ರಾಜ್ಯಕ್ಕೆ ಬರಲಿ.  ಅವರನ್ನು ಏಕೆ ರಾಜ್ಯಕ್ಕೆ ಕರೆದುಕೊಂಡು ಬರುತ್ತಿದ್ದೀರಾ ? ಈಗ  ದೇಶದಲ್ಲಿ ಇದ್ದಾರೆ.  ದೇಶ ಸೇವೆ ಮಾಡಲಿ ಎಂದು ಡಿಕೆಶಿ ಸೋದರ ಡಿ.ಕೆ.ಸುರೇಶ್ ಬೆಂಗಳೂರಿನಲ್ಲಿ ಹೇಳಿದ್ದಾರೆ. 



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

toxic edited teaser
Advertisment